ಕಾಡಾನೆಗಳಿಂದ ಬಾಳೆ ಬೆಳೆ ನಾಶ
ಮೈಸೂರು

ಕಾಡಾನೆಗಳಿಂದ ಬಾಳೆ ಬೆಳೆ ನಾಶ

May 31, 2018

ಸರಗೂರು:  ಸಮೀಪದ ಹೂವಿನಕೊಳ ಗ್ರಾಮದ ವ್ಯಾಪ್ತಿಯ ಜಮೀನುಗಳಿಗೆ ಕಾಡಾನೆಗಳು ದಾಳಿಯಿಟ್ಟು ಬಾಳೆ ಫಸಲು ನಾಶಪಡಿಸಿವೆ.

ಗ್ರಾಮದ ಹೆಚ್.ಎಂ. ಬಸವರಾಜು ಹಾಗೂ ಸಿದ್ದಯ್ಯ ಅವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ಫಸಲನ್ನು ನಾಶಪಡಿಸಿವೆ. ಕಾಡಾನೆಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಆನೆ ಹಾವಳಿ ತಡೆಯಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Translate »