ಯುಬಿಯಿಂದ ಕುಡಿಯುವ ನೀರಿನ ಘಟಕ
ಮೈಸೂರು

ಯುಬಿಯಿಂದ ಕುಡಿಯುವ ನೀರಿನ ಘಟಕ

May 31, 2018

ನಂಜನಗೂಡು: ತಾಲೂಕಿನ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ಯುಬಿ ಕಂಪನಿಯು (ಯುನೈಟೆಡ್ ಬ್ರೇವರೀಸ್ ಲಿಮಿಟೆಡ್) ಸಾಮಾಜಿಕ ಜವಾಬ್ದಾರಿಯಡಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿ ರುವುದರ ಬಗ್ಗೆ ಶಾಸಕ ಡಾ.ಯತೀಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ತಾಲೂಕಿನ ಬಂಚಳ್ಳಿಹುಂಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸರ್ಕಾರ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿದ್ದು ಜೊತೆಗೆ ಯುಬಿಯಂತಹ ಕಂಪನಿಗಳು ಸಾಮಾಜಿಕ ಕಳಕಳಿಯಿಂದ ಅನುಕೂಲ ಮಾಡಿ ಕೊಟ್ಟರೆ ಗ್ರಾಮಗಳಿಗೆ ಉತ್ತಮವಾದ ಕೆಲಸ ಮಾಡಬಹುದು ಎಂದರು.

ಯುಬಿ ಕಂಪನಿಯವರು ಈ ಭಾಗದ 10 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿಕೊಡು ವುದರ ಜೊತೆಗೆ ಗ್ರಾಮಗಳಲ್ಲಿ ನೈರ್ಮಲ್ಯತೆ ಮತ್ತು ಶುಚಿತ್ವದ ಬಗ್ಗೆ ಹಲವಾರು ಕಾರ್ಯ ಕ್ರಮಗಳನ್ನು ನೀಡುತ್ತಿರುವುದನ್ನು ಶ್ಲಾಘಿ ಸಿದರು. ಸ್ಥಳೀಯರಿಗೆ ಉದ್ಯೋಗವನ್ನು ಹೆಚ್ಚಿನ ರೀತಿ ನೀಡಬೇಕು. ಕಾರ್ಖಾನೆ ಯಲ್ಲಿ ದುಡಿಯುವ ಕಾರ್ಮಿಕರಿಗೆ ಎಲ್ಲಾ ಸೌಕರ್ಯಗಳನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.

ಯುಬಿ ಕಂಪನಿಯ ಎಂ.ಡಿ. ಶೇಖರ್ ರಾಮಮೂರ್ತಿ ಮಾತನಾಡಿ, ಒಂದು ಮಿಲಿಯನ್ ಜನರಿಗೆ 3 ವರ್ಷದೊಳಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ ಕೊಡುವುದಾಗಿ ಘೋಷಿಸಿದರು. ಈಗಾಗಲೇ ಸ್ಥಳೀಯ ಎನ್.ಜಿ.ಓ ಗಳ ಸಹಾಯದಿಂದ ತಾಂಡವಪುರ, ಬಂಚಳ್ಳಿ ಹುಂಡಿ, ಚಿಕ್ಕಯ್ಯನಛತ್ರ, ಹೆಬ್ಯಾ, ಅಡಕನಹಳ್ಳಿ ಹುಂಡಿ, ಬಸವನಪುರ, ಕೆಂಪಿಸಿದ್ದನ ಹುಂಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿರುವುದಾಗಿ ತಿಳಿಸಿದರು. ಶುದ್ಧ ಕುಡಿಯುವ ನೀರಿನ ಸಮಸ್ಯೆ ಎಲ್ಲೆಡೆ ಇರುವುದರಿಂದ ಇದನ್ನು ಪರಿಹರಿಸುವ ಜೊತೆಗೆ ಗ್ರಾಮಗಳ ನೈರ್ಮಲೀಕರಣಗಳ ಬಗ್ಗೆ ಗಮನ ಹರಿಸುತ್ತೇವೆ ಎಂದರು.

ಸಮಾರಂಭದಲ್ಲಿ ಶ್ರೀಮತಿ ತುಷಾರ ಶೇಖರ್, ಜಿ.ಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಕೆಪಿಸಿಸಿ ಕಾರ್ಯದರ್ಶಿ ಗುರುಪಾದ ಸ್ವಾಮಿ, ಸದಸ್ಯ ವರುಣಾ ಮಹೇಶ್, ಬ್ಲಾಕ್ ಅಧ್ಯಕ್ಷ ರಂಗಸ್ವಾಮಿ, ಕೆ.ಹೆಚ್.ಬಿ ನಿರ್ದೇಶಕ ಮಾಲೇಗೌಡ, ಜಿ.ಪಂ ಸದಸ್ಯೆ ಮಹದೇವಮ್ಮ ಯೋಗಿಶ್, ಗ್ರಾ.ಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾದ್ಯಕ್ಷೆ ಮಧುರ, ಸದಸ್ಯೆ ಹೇಮಾವತಿ, ಮುಖಂಡ ಅರ್ಕೆಶ್, ಸ್ಥಳದಾನಿ ಮನ್ನೇಗೌಡ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.

Translate »