ಸಿಎಂ ಯಡಿಯೂರಪ್ಪ ಮತ್ತೇ ಚುನಾವಣೆಗೆ ನಿಲ್ಲಲ್ಲ ಕಲ್ಲಡ್ಕ ಪ್ರಭಾಕರ್ ಭಟ್
ಮೈಸೂರು

ಸಿಎಂ ಯಡಿಯೂರಪ್ಪ ಮತ್ತೇ ಚುನಾವಣೆಗೆ ನಿಲ್ಲಲ್ಲ ಕಲ್ಲಡ್ಕ ಪ್ರಭಾಕರ್ ಭಟ್

January 20, 2020

ಚಿಕ್ಕಬಳ್ಳಾಪುರ,ಜ.19-ಮುಂದಿನ ಮೂರೂವರೆ ವರ್ಷದ ಕಾಲ ಮುಖ್ಯ ಮಂತ್ರಿ ಆಗಿ ಕಾರ್ಯನಿರ್ವಹಿಸಲಿರುವ ಬಿ.ಎಸ್.ಯಡಿ ಯೂರಪ್ಪ ಬಳಿಕ ಚುನಾವಣೆಗಳಿಂದ ದೂರ ಉಳಿದು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿ ಸಿದ್ದಾರೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕಾರ್ಯಕಾರಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ಟರು ಇಂದಿಲ್ಲಿ ತಿಳಿಸಿದರು.

ಚಿಕ್ಕಬಳ್ಳಾಪುರ ನಗರದ ಶ್ರೀ ದೇವಿ ಪ್ಯಾಲೇಸ್‍ನಲ್ಲಿ ಭಾನುವಾರ ಸ್ಥಳೀಯ ಗಾಯಿತ್ರಿ ಸೇವಾ ಸಮಿತಿ ಹಾಗೂ ಗಾಯಿತ್ರಿ ಮಹಿಳಾ ಮಂಡಳಿ ಹಮ್ಮಿಕೊಂಡಿದ್ದ ಶ್ರೀ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿ ಸಿದ ಬಳಿಕ ತಮ್ಮನ್ನು ಭೇಟಿ ಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ಇನ್ನೂ ಮುಂದಿನ ಮೂರೂವರೆ ವರ್ಷ ಕಾಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿಯೇ ಸರ್ಕಾರ ನಡೆಯಲಿದೆ. ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು. ಯಡಿ ಯೂರಪ್ಪ ಜನರಿಗೆ ಏನಾ ದರೂ ಗೌರವದಿಂದ ಮಾಡಬೇಕೆಂಬ ದೃಷ್ಟಿಯನ್ನು ಹೊಂದಿರುವ ವ್ಯಕ್ತಿ. ಮಣ್ಣಿನ ಮಗ, ರೈತನ ಮಗ ಎಂದ ಪ್ರಭಾಕರ್, ಇಡೀ ದೇಶದಲ್ಲಿ ರೈತರ ಬಜೆಟ್ ತಂದವರು ಯಾರಾದರೂ ಇದ್ದರೆ ಅದು ಸಿಎಂ ಯಡಿಯೂರಪ್ಪ ಮಾತ್ರ. ಕಳೆದ 60 ವರ್ಷದಲ್ಲಿ ಯಾರೂ ಮಾಡದ ಕೆಲಸವನ್ನು ಯಡಿ ಯೂರಪ್ಪ ರೈತರ ಪರವಾಗಿ ಬಜೆಟ್ ಮಾಡಿದರು.

ಆದ್ದರಿಂದ ಅವರು ರೈತರ ಬಗ್ಗೆ ಇರುವ ಅನುಭವಿ ರಾಜಕಾರಣಿ, ಕಳೆದ 42 ವರ್ಷ ಗಳಿಂದ ನಿರಂತರವಾಗಿ ಹೋರಾಟ ಮಾಡಿ ಬಂದ ವ್ಯಕ್ತಿ ಅವರು, ಇವತ್ತು ಯಾವುದೋ ಜಾತಿ, ಹಣದ ಆಧಾರದ ಮೇಲೆ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದೆ ಎನ್ನುವುದು ತಪ್ಪು, ಅವರು ಸತತವಾಗಿ ನಡೆಸಿಕೊಂಡು ಬಂದ ಹೋರಾಟದಿಂದ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಶೂನ್ಯದಿಂದ ಕಟ್ಟಿದ್ದಾರೆ. ಹೋರಾಟಗಳ ಮುಖಾಂತರವೇ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆಂದರು.

 

Translate »