ಸಾಮೂಹಿಕವಾಗಿ 108  ಸೂರ್ಯ ನಮಸ್ಕಾರ
ಚಾಮರಾಜನಗರ

ಸಾಮೂಹಿಕವಾಗಿ 108 ಸೂರ್ಯ ನಮಸ್ಕಾರ

February 13, 2019

ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ರಥಸಪ್ತಮಿ ಅಂಗವಾಗಿ ದೇವಾ ಲಯಗಳಲ್ಲಿ ವಿಶೇಷ ಪೂಜಾ ಕೈಂಕ ರ್ಯಗಳು ಜರುಗಿದವಲ್ಲದೆ, ವಿದ್ಯಾರ್ಥಿ ಗಳು, ಯೋಗಾಸಕ್ತರು ಇಂದು ಮುಂಜಾ ನೆಯೇ ಸಾಮೂಹಿಕವಾಗಿ 108 ಸೂರ್ಯ ನಮಸ್ಕಾರ ಮಾಡಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿ, ಜಿಲ್ಲಾ ಶಾಖೆ ಹಾಗೂ ಸೇವಾ ಭಾರತಿ ಟ್ರಸ್ಟ್‍ನಿಂದ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ರಥಸಪ್ತಮಿ ಅಂಗವಾಗಿ ಏರ್ಪ ಡಿಸಿದ್ದ 9ನೇ ವರ್ಷದ ಸಾಮೂಹಿಕ 108 ಸೂರ್ಯ ನಮಸ್ಕಾರಕ್ಕೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಬಸವರಾಜ ಚಾಲನೆ ನೀಡಿದರು. ಹೆಚ್ಚುವರಿ ಪೆÇಲೀಸ್ ವರಿಷ್ಠಾ ಧಿಕಾರಿ ಗೀತಾ ಪ್ರಸನ್ನ, ಜಿಲ್ಲಾ ಸತ್ರ ನ್ಯಾಯಾ ಧೀಶ ವಿನಯ್, ಪತಂತಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಶಿವಕುಮಾರಸ್ವಾಮಿ, ಪ್ರಭಾರ ಜಿಲ್ಲಾ ಆಯುಷ್ಯಾಧಿಕಾರಿ ಡಾ.ರಾಚಯ್ಯ, ಸೇವಾ ಭಾರತಿ ಟ್ರಸ್ಟ್ ಕಾರ್ಯದರ್ಶಿ ವಾಸುದೇವರಾವ್, ಕೆ.ಜಿ.ಪ್ರಶಾಶ್, ನಿಜ ಗುಣ, ಮಾಜಿ ತಾಪಂ ಸದಸ್ಯ, ಪ್ರಕಾಶ್ ಇತರರು ಸ್ಥಳದಲ್ಲಿ ಹಾಜರಿದ್ದು, ಯೋಗ ಪ್ರದರ್ಶನಕ್ಕೆ ಸಾಥ್ ನೀಡಿದರು.

ಸೂರ್ಯನಿಗೆ ನಮನ: ದೇಗುಲದ ಮುಂಭಾಗ ಬೆಳಿಗ್ಗೆ 5.30ರಿಂದ ಜಮಾಯಿಸಿದ ನೂರಾರು ಸಂಖ್ಯೆಯ ವಿದ್ಯಾ ರ್ಥಿಗಳು, ಯೋಗಪಟುಗಳು, 7.30 ರವ ರೆಗೆ 108 ನಮಸ್ಕಾರ ಮಾಡುವ ಮೂಲಕ ಸೂರ್ಯನಿಗೆ ನಮನ ಸಲ್ಲಿಸಿದರು. ಈ ವೇಳೆ ವಿವಿಧ ದೇಗುಲಕ್ಕೆ ಭಕ್ತಾದಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಸಾಮೂಹಿಕ 108 ಸೂರ್ಯ ನಮಸ್ಕಾ ರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಬಸವರಾಜ ಅವರು, ಯೋಗಾಭ್ಯಾಸ ಆಧ್ಯಾತ್ಮಿಕ ಹಾಗೂ ವೈe್ಞÁನಿಕವಾಗಿದ್ದು, ಯೋಗನಿರತ ವ್ಯಕ್ತಿ ಗಳ ಮನಸ್ಸು ಅಪರಾಧಗಳ ಕಡೆ ಹೋಗು ವುದಿಲ್ಲ, ಏಕೆಂದರೆ ಯೋಗ ಪಂಚೇಂದ್ರಿಯ ಗಳನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ ಎಂದರು. ಭಾರತದಲ್ಲಿ ಯೋಗ ಸಂಸ್ಕøತಿಗೆ ಬಹಳ ಇತಿಹಾಸವಿದೆ. ಸ್ವಾಮಿ ವಿವೇಕಾನಂ ದರು ಯೋಗ ಜೀವನ ಪರಿಪೂರ್ಣ ವಿe್ಞÁನ ಎಂದಿದ್ದಾರೆ. ಯಾವುದೇ ಭೇದವಿಲ್ಲದೆ, ಚಿಕ್ಕವರಿಂದ ಹಿಡಿದು, ದೊಡ್ಡವರವರೆಗೂ ಎಲ್ಲರೂ ಯೋಗಾಭ್ಯಾಸ ಮಾಡಬಹುದು. ಎಲ್ಲಾ ವ್ಯಾಧಿಗಳಿಗೆ ಮೂಲ ಔಷಧವಾಗಿ ಯೋಗ ಸಹಕಾರಿಯಾಗಿದ್ದು, ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಳ ತಿಳುವಳಿಕೆ, ನೈಸರ್ಗಿಕ ಆಹಾರ ಸೇವನೆಯಿಂದ ಉತ್ತಮ ಜೀವನ ಕ್ರಮ ಸಾಧಿಸಬಹುದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಪರಾಧ ತಡೆಗೆ ಯೋಗ ಅಗತ್ಯ: ಇತ್ತೀಚೆಗೆ ಬಾಲಾಪರಾಧಗಳು ಹೆಚ್ಚುತ್ತಿವೆ. ಇದಕ್ಕೆ ಮನಸ್ಸು ವಿಕೃತಗೊಳ್ಳುವುದೇ ಕಾರಣ. ಈ ವಿಕೃತ ಮನಸ್ಸು ನಿಯಂತ್ರಿಸಬೇಕಾದರೆ ಯೋಗ ಅತ್ಯುತ್ತಮ. ಆದ್ದರಿಂದ ಪ್ರಾಥಮಿಕ ಹಂತ ದಲ್ಲೇ ಯೋಗ ಕಲಿಸುವುದು ಉತ್ತಮ. ಒತ್ತಡ ಜೀವನದಲ್ಲಿ ನಿತ್ಯ ಯೋಗದಿಂದ ಜೀವನ ಪ್ರಾರಂಭಿಸಿದರೆ ಜೀವನ ಉತ್ಸಾಹ ದಿಂದ ಕೂಡುತ್ತದೆ ಎಂದರು.

ಉಪನ್ಯಾಸ ನೀಡಿದ ಯೋಗ ಹಾಗೂ ಸರ್ಕಾರಿ ಪ್ರಕೃತಿ ಚಿಕಿತ್ಸೆ ವೈದ್ಯೆ ಡಾ.ಮಾನಸ, ಸೂರ್ಯ ನಮಸ್ಕಾರ ಬಹಳ ಪುರಾತನವಾ ದದ್ದು, ಬೆಳಿಗ್ಗೆ ಸೂರ್ಯೋದಯದ 1 ಗಂಟೆ ವೇಳೆಯಲ್ಲಿ ಸೂರ್ಯಕಿರಣ ದೇಹದ ಮೇಲೆ ಬಿದ್ದರೆ `ಡಿ’ ವಿಟಮಿನ್ ಉತ್ಪತ್ತಿಯಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಯೋಗದಿಂದ ಏಕಾಗ್ರತೆ ಹೆಚ್ಚಿ, ಮನಸ್ಸಿನ ಕಲ್ಮಶಗಳನ್ನು ದೂರ ಮಾಡಿ, ಪರಿಪೂರ್ಣ ಜೀವನದ ಕಡೆ ಕರೆ ದೊಯ್ಯುತ್ತದೆ. ಸೂರ್ಯ ತನ್ನ ಮೊದಲ ಪಥ ವನ್ನು ಬದಲಿಸುವ ದಿನವೇ ರಥಸಪ್ತಮಿ, ಇಂತಹ ಸುದಿನದಲ್ಲಿ ಎಲ್ಲರೂ ಸೂರ್ಯ ನಮಸ್ಕಾರದಲ್ಲಿ ತೊಡಗಿಸಿಕೊಂಡರೆ ಮನಸ್ಸು ಉಲ್ಲಾಸಗೊಳ್ಳುತ್ತದೆ ಎಂದರು. ಯೋಗ ಶಿಕ್ಷಕ ಯೋಗ ಪ್ರಕಾಶ್ ಪ್ರಾಸ್ತಾವಿಕ ನುಡಿಗಳನ್ನಾ ಡಿದರು. ವಿವಿಧ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ಹಾಗೂ ಯೋಗಾಸಕ್ತರು ಸೂರ್ಯನಮಸ್ಕಾರ ಮಾಡಿದರು.

Translate »