ವಕೀಲನ ಮೇಲಿನ ಹಲ್ಲೆ, ಸುಳ್ಳು ದೂರು ದಾಖಲು ಆರೋಪ ನ್ಯಾಯಕ್ಕಾಗಿ ಬೀದಿಗಿಳಿದ ಜಿಲ್ಲಾ ವಕೀಲರು
ಚಾಮರಾಜನಗರ

ವಕೀಲನ ಮೇಲಿನ ಹಲ್ಲೆ, ಸುಳ್ಳು ದೂರು ದಾಖಲು ಆರೋಪ ನ್ಯಾಯಕ್ಕಾಗಿ ಬೀದಿಗಿಳಿದ ಜಿಲ್ಲಾ ವಕೀಲರು

February 13, 2019

ಚಾಮರಾಜನಗರ: ಗುಂಡ್ಲುಪೇಟೆಯ ವಕೀಲ ಡಿ.ರವಿ ಅವರ ಮೇಲೆ ಹಲ್ಲೆ ಹಾಗೂ ಸುಳ್ಳು ದೂರು ದಾಖ ಲಿಸಿರುವುದಾಗಿ ಆರೋಪಿಸಿ 6 ದಿನಗಳಿಂದ ನಡೆಸುತ್ತಿದ್ದ ಹೋರಾಟವನ್ನು ಇಂದು ತೀವ್ರಗೊಳಿಸಿದ ಜಿಲ್ಲಾ ವಕೀಲರು, ತಪ್ಪೆ ಸಗಿರುವ ಇಬ್ಬರು ಪೊಲೀಸ್ ಅಧಿಕಾರಿ ಗಳನ್ನು ಅಮಾನತುಗೊಳಿಸುವಂತೆ ಬೀದಿ ಗಿಳಿದು ಪ್ರತಿಭಟಿಸಿದರು.

ನಗರದ ನ್ಯಾಯಾಲಯ ಆವರಣದಲ್ಲಿ ಇರುವ ಜಿಲ್ಲಾ ವಕೀಲರ ಸಂಘದಲ್ಲಿ ಜಮಾ ಯಿಸಿದ ಜಿಲ್ಲೆಯ ವಕೀಲರು, ಗುಂಡ್ಲು ಪೇಟೆ ಠಾಣೆ ಇನ್ಸ್‍ಪೆಕ್ಟರ್ ಬಾಲಕೃಷ್ಣೇ ಗೌಡ, ಸಬ್‍ಇನ್ಸ್‍ಪೆಕ್ಟರ್ ಲತೇಶ್‍ಕುಮಾರ್ ಸೇರಿದಂತೆ ಎಸ್ಪಿ ಧರಮೇಂದ್ರಕುಮಾರ್ ಮೀನಾ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿ ಭಟನಾ ಮರವಣಿಗೆ ಆರಂಭಿಸಿದರು.
ಬಳಿಕ ನ್ಯಾಯಾಲಯ ರಸ್ತೆ ಮೂಲಕ ಭುವನೇಶ್ವರಿ ವೃತ್ತ ತಲುಪಿ ಮಾನವ ಸರ ಪಳಿ ನಿರ್ಮಿಸುವ ಮೂಲಕ ರಸ್ತೆ ತಡೆ ದರು. ನಂತರ ಜಿಲ್ಲಾಡಳಿತಕ್ಕೆ ತೆರಳಿ ಧರಣಿ ನಡೆಸಿದರಲ್ಲದೆ, ಎಡಿಸಿ ಆನಂದ್‍ಗೆ ಮನವಿ ಸಲ್ಲಿಸಿದರು.

ಗುಂಡ್ಲುಪೇಟೆ ಪಟ್ಟಣ ನಿವಾಸಿ ವಕೀಲ ಡಿ.ರವಿ ಮನೆಗೆ ಫೆ.5ರಂದು ಏಕಾಏಕಿ ಪಟ್ಟಣ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಬಾಲ ಕೃಷ್ಣೇಗೌಡ, ಸಿಬ್ಬಂದಿ ನುಗ್ಗಿ ವಕೀಲರನ್ನು ಬಂಧಿಸಿ ಠಾಣೆಗೆ ಕರೆದೊಯ್ದರು. ನಂತರ ಠಾಣೆ ಎಸ್‍ಐ ಲತೇಶ್‍ಕುಮಾರ್ ಹಾಗೂ ಸಿಬ್ಬಂದಿ ರವಿಗೆ ಥಳಿಸಿ, ಹಲ್ಲೆ ನಡೆಸಿದ್ದಾರೆ ಎಂದು ವಕೀಲರು ಕಿಡಿಕಾರಿದರು.

ಡಿ.ರವಿ ಅವರ ಮೇಲೆ ಯಾವುದೇ ದೂರು ದಾಖಲಾಗದೇ ಇದ್ದರೂ ಸಹ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ ರುವುದು ಅಕ್ಷಮ್ಯ ಅಪರಾಧವಾಗಿದೆ. ಅಲ್ಲದೆ ಅವರನ್ನು ತರಾತುರಿಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು ಎಂದು ಆರೋಪಿ ಸಿದ ಪ್ರತಿಭಟನಾಕಾರರು, ಫೆ.6 ಮತ್ತು 7 ರಂದು ರವಿ ಮದುವೆ ನಿಶ್ಚಯ ವಾಗಿದ್ದರೂ ಪೊಲೀಸರು ಮಾನವೀ ಯತೆ ಮೆರತು ಬಂಧಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸುಳ್ಳು ಪ್ರಕರಣ ದಾಖಲಿಸಿ ರುವ ಬಾಲಕೃಷ್ಣಗೌಡ ಮತ್ತು ಲತೇಶ್ ಕುಮಾರ್‍ರನ್ನು ತಕ್ಷಣವೇ ಅಮಾನತ್ತು ಗೊಳಿಸಬೇಕು. ಈ ಬಗ್ಗೆÀ ತನಿಖೆ ನಡೆಸಿ ನೊಂದ ವಕೀಲನಿಗೆ ನ್ಯಾಯ ದೊರಕಿಸ ಬೇಕು ಎಂದು ಒತ್ತಾಯಿಸಿದರಲ್ಲದೆ, ಜಿಲ್ಲೆಯ ವಕೀಲರು ಕಳೆದ ಆರೇಳು ದಿನಗಳಿಂದ ಈ ಬಗ್ಗೆ ಪ್ರತಿಭಟಿಸುತ್ತಿದ್ದರೂ ಸಹ ಎಸ್ಪಿ ಧರ್ಮೇಂಧರ್ ಕುಮಾರ್ ಮೀನಾ ಸೌಜನ್ಯ ಕ್ಕಾದರೂ ವಕೀಲರನ್ನು ಸಂಪರ್ಕಿಸಿಲ್ಲ ಎಂದು ಪ್ರತಿಭಟನಾಕಾರರು ಇದೇ ವೇಳೆ ಅಸ ಮಾಧಾನ ವ್ಯಕ್ತಪಡಿಸಿದರು. ಈ ವೇಳೆ ವಕೀ ಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್, ಪ್ರದಾನ ಕಾರ್ಯದರ್ಶಿ ಅರುಣ್ ಕುಮಾರ್, ಹಲ್ಲೆಗೊಳಗಾದ ವಕೀಲ ಡಿ.ರವಿ, ಹಿರಿಯ ವಕೀಲರಾದ ಕೆ.ಬಾಲಸುಬ್ರಮಣ್ಯಂ, ಆರ್.ವಿರೂಪಾಕ್ಷ, ಪುಟ್ಟರಾಜು, ಜಯಪ್ರಕಾಶ್, ವಿದ್ಯಾಲತಾ, ರೂಪಶ್ರೀ, ಜಾವಿದ್, ಶಿವ ಪ್ರಸನ್ನ, ಗಿರೀಶ್, ವನಜಾ, ಮಹೇಂದ್ರ, ಶಶಿಧರ್, ಪಾಪಣ್ಣಶೆಟ್ಟಿ, ಸಿದ್ದರಾಜು, ಸಂತೋಷ್‍ಕುಮಾರ್, ಮಹದೇವಸ್ವಾಮಿ, ಗಿರೀಶ್, ಮಹಮದ್ ವಾಸಿಂ ಇತರರಿದ್ದರು.

Translate »