ಫೇಸ್‍ಬುಕ್‍ನಲ್ಲಿ ಕಾರ್ನಾಡ್, ಸಿದ್ದರಾಮಯ್ಯ ಕುರಿತು ವಿಕೃತ ಪೋಸ್ಟ್ ಮಾಡಿದವನ ವಿರುದ್ಧ ದೂರು
ಮೈಸೂರು

ಫೇಸ್‍ಬುಕ್‍ನಲ್ಲಿ ಕಾರ್ನಾಡ್, ಸಿದ್ದರಾಮಯ್ಯ ಕುರಿತು ವಿಕೃತ ಪೋಸ್ಟ್ ಮಾಡಿದವನ ವಿರುದ್ಧ ದೂರು

June 14, 2019

ಮೈಸೂರು: ಜ್ಞಾನ ಪೀಠ ಪುರಸ್ಕøತರಾದ ದಿವಂಗತ ಗಿರೀಶ್ ಕಾರ್ನಾಡ್ ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಕುರಿತು ನಿರಂಜನ್‍ಗೌಡ ಹಿಂದು ಎಂಬುವರು ವಿಕೃತ ರೀತಿಯಲ್ಲಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳು ವಂತೆ ಕರ್ನಾಟಕ ರಾಜ್ಯ ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಹಿನಕಲ್ ಪ್ರಕಾಶ್ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಫೇಸ್‍ಬುಕ್‍ನಲ್ಲಿ ಸಮಾಜದ ಸ್ವಾಸ್ಥ್ಯ ವನ್ನು ಹಾಳು ಮಾಡುವಂತಹ ಪೋಸ್ಟ್ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳ ಬೇಕು. ಈ ರೀತಿಯ ಹೇಳಿಕೆಗಳನ್ನು ಪೋಸ್ಟ್ ಮಾಡುವುದಕ್ಕೆ ಕಡಿವಾಣ ಹಾಕುವಂತೆ ಅವರು ಪೊಲೀಸ್ ಆಯುಕ್ತರಿಗೆ ನೀಡಿ ರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲು ತೆರಳಿದ ನಿಯೋಗದಲ್ಲಿ ಹಿನಕಲ್ ಪ್ರಕಾಶ್, ಕನಕ ಮಹಿಳಾ ಸಂಘದ ಎಂ.ಎ.ಕಮಲ ಅನಂತರಾಮ್ ಇನ್ನಿತರರು ಇದ್ದರು.

Translate »