ಕೆ.ಆರ್.ನಗರದಲ್ಲಿ ನ.1ರಿಂದ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ
ಮೈಸೂರು

ಕೆ.ಆರ್.ನಗರದಲ್ಲಿ ನ.1ರಿಂದ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ

September 28, 2018

ಕೆ.ಆರ್.ನಗರ:  ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಿಂದ ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗುವುದು ಎಂದು ಪುರಸಭಾ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ತಿಳಿಸಿದರು.

ಪಟ್ಟಣದ ಪುರಸಭೆಯ ಸಭಾಂಗಣ ದಲ್ಲಿ ಕರೆಯಲಾಗಿದ್ದ ಸ್ಥಾಯಿ ಸಮಿತಿ ಸಭೆ ಯಲ್ಲಿ ಪಟ್ಟಣದ ಹೊಟೇಲ್ ಮಾಲೀಕರು, ರಸ್ತೆ ಬದಿ ವ್ಯಾಪಾರಿಗಳು, ಕೋಳಿ, ಮಾಂಸದ ಅಂಗಡಿ ಮಾಲೀಕರುಗಳು, ಪಾನಿಪುರಿ ಮತ್ತು ಫಾಸ್ಟ್‍ಫುಡ್ ವ್ಯಾಪಾರಿ ಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿ ಪಟ್ಟಣವು ಮಾದರಿ ಪಟ್ಟಣವಾಗಿದ್ದರಿಂದ ಪ್ರತಿಯೊಬ್ಬರೂ ಸ್ವಚ್ಛತೆಯನ್ನು ಕಾಪಾ ಡಬೇಕೆಂದು ಸೂಚಿಸಿದರು.

ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆ ಮಾಡು ವುದನ್ನು ನಿಲ್ಲಿಸಬೇಕು. ಅದಕ್ಕೆ ಬದಲು ಬ್ಯಾಗನ್ನು ಉಪಯೋಗಿಸಬೇಕು. ಪ್ರತಿಯೊಬ್ಬ ರಸ್ತೆ ಬದಿಯ ವ್ಯಾಪಾರಿಗಳು ತಮ್ಮ ವ್ಯಾಪಾರದ ಸ್ಥಳದಲ್ಲಿ ಡಸ್ಟ್ ಬಿನ್ ಇಡ ಬೇಕು. ಅನುಪಯುಕ್ತ ತಟ್ಟೆ, ಲೋಟ ಸೇರಿದಂತೆ ಇತರೆ ಪದಾರ್ಥಗಳನ್ನು ಬಾಕ್ಸ್ ನಲ್ಲಿ ಹಾಕಬೇಕೆಂದು ತಾಕೀತು ಮಾಡಿದರು.

ಹೊಟೇಲ್‍ಗಳಲ್ಲಿ ಕಡ್ಡಾಯವಾಗಿ ಬಿಸಿ ನೀರನ್ನು ನೀಡಬೇಕು. ಪಾರ್ಸೆಲ್ ಮಾಡು ವಾಗ ಪ್ಲಾಸ್ಟಿಕ್ ಚೀಲಗಳನ್ನು ಬಳಸ ಕೊಡದು. ಸಾಂಕ್ರಾಮಿಕ ರೋಗ ಹರಡು ವುದರಿಂದ ಹೊಟೇಲ್‍ಗಳಲ್ಲಿ ಸ್ವಚ್ಛತೆ ಯನ್ನು ಕಾಪಾಡಬೇಕು ಎಂದರು. ಕೋಳಿ ಮತ್ತು ಮಾಂಸ ಹಾಗೂ ಮೀನು ಮಾರಾಟ ಸ್ಥಳದಲ್ಲಿ ಮಲೀನ ವಾತಾ ವರಣವಿದೆ. ಇದಕ್ಕೆ ಸಾರ್ವಜನಿಕರಿಂದ ದೂರುಗಳಿವೆ. ಬಾಕ್ಸ್ ಅನ್ನು ಇಟ್ಟು ಅನುಪಯುಕ್ತ ಪದಾರ್ಥಗಳನ್ನು ಅದರಲ್ಲಿ ಹಾಕಿ ಪುರಸಭೆ ಟ್ರ್ಯಾಕ್ಟರ್ ಬಂದಾಗ ಅದರಲ್ಲಿ ಹಾಕಬೇಕು ಎಂದರು.

ಪಟ್ಟಣದಲ್ಲಿ ಸುಮಾರು ಒಂದೂವರೆ ಸಾವಿರಕ್ಕಿಂತ ಹೆಚ್ಚು ರಸ್ತೆ ಬದಿ ಅಂಗಡಿ ಗಳಿಂದ ನೆಲ ಬಾಡಿಗೆಯನ್ನು ಸಚಿವ ಸಾ.ರಾ.ಮಹೇಶ್ ಅವರು ಈ ಕ್ಷೇತ್ರದಲ್ಲಿ ಶಾಸಕರಾದಾಗಿನಿಂದ ಈವರೆಗೆ ರದ್ದು ಮಾಡಿದ್ದೇವೆ. ಆದರೆ ಪುರಸಭೆಗೆ ಸ್ವಚ್ಛತೆ ದೃಷ್ಟಿಯಿಂದ ಹೆಚ್ಚು ಹೊರೆ ಬೀಳುತ್ತಿದೆ. ಹಾಗಾಗಿ ನೆಲ ಬಾಡಿಗೆ ನಿಗದಿ ಮಾಡಲು ಆಡಳಿತ ಮಂಡಳಿ ಚಿಂತನೆ ಮಾಡಿದೆ. ನೆಲ ಬಾಡಿಗೆಯನ್ನು ವಸೂಲಿ ಮಾಡಲು ಸಚಿವರಾದ ಸಾ.ರಾ.ಮಹೇಶ್ ಅವರ ಜೊತೆ ಮಾತನಾಡಿ ನಿರ್ಧಾರಕ್ಕೆ ಬರು ತ್ತೇವೆ ಎಂದು ಕೇಳಿದಾಗ ನೆಲ ಬಾಡಿಗೆ ಕೊಡಲು ರಸ್ತೆ ಬದಿ ವ್ಯಾಪಾರಿಗಳು ಸಮ್ಮತಿ ಸೂಚಿಸಿದರು.

ಇನ್ನು ಮುಂದೆ ಪ್ರತಿಯೊಬ್ಬ ವರ್ತಕರು, ವ್ಯಾಪಾರಿಗಳು ರಸ್ತೆ ಬದಿ ವ್ಯಾಪಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತೆ ಇಲ್ಲದಿದ್ದಲ್ಲಿ ಅಂತವರ ಅಂಗಡಿ, ಹೊಟೇಲ್‍ಗಳ ಅನುಮತಿ ಪತ್ರವನ್ನು ರದ್ದು ಪಡಿಸುವು ದಾಗಿ ಎಚ್ಚರಿಸಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರು ಗಳಾದ ಕೆ.ಎಲ್.ಜಗದೀಶ್, ಕೆ.ಬಿ.ಸುಬ್ರಮಣ್ಯ, ಸರೋಜ ಮಹದೇವ್, ಸುಬ್ರಮಣ್ಯ, ಮುಖ್ಯಾಧಿಕಾರಿ ಕೆ.ಶಿವಣ್ಣ, ಪರಿಸರ ಅಧಿಕಾರಿ ನೀಲಾ, ರೂಪ, ಎಇ ಪುಟ್ಟ ಸ್ವಾಮಿ, ರಮೇಶ್ ಹಾಗೂ ವರ್ತಕರು ಗಳಾದ ಹೃಷಿಕೇಶ್, ಪರಮೇಶ್, ಕುಮಾರ ಸ್ವಾಮಿ, ದುರ್ಗಪ್ಪ, ವೆಂಕಟೇಶ್, ಲಂಬೋ ದರ ಮತ್ತಿತರರು ಪಾಲ್ಗೊಂಡಿದ್ದರು.

Translate »