ಮೈಸೂರಲ್ಲಿ ‘ಶಾಂತಿಯೆಡೆಗೆ ನಮ್ಮ ನಡಿಗೆ’ ಜಾಥಾ
ಮೈಸೂರು

ಮೈಸೂರಲ್ಲಿ ‘ಶಾಂತಿಯೆಡೆಗೆ ನಮ್ಮ ನಡಿಗೆ’ ಜಾಥಾ

September 28, 2018

ಮೈಸೂರು:  ಸಂವಿ ಧಾನ ಸಂರಕ್ಷಣೆ ಹಾಗೂ ಶಾಂತಿ ಸೌಹಾ ರ್ದತೆಗಾಗಿ ಮೈಸೂರಿನಲ್ಲಿ ಗುರುವಾರ ವಿವಿಧ ಮಹಿಳಾ ಸಂಘಟನೆಗಳ ಕಾರ್ಯ ಕರ್ತರು `ಶಾಂತಿಯೆಡೆಗೆ ನಮ್ಮ ನಡಿಗೆ’ ಜಾಥಾ ನಡೆಸಿದರು. ಮೈಸೂರು ಅರಮನೆಯ ಉತ್ತರ ದ್ವಾರ ಬಳಿಯಿಂದ ಪುರಭವನಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ ಮಹಿಳಾ ಸಂಘ ಟನೆಗಳ ಕಾರ್ಯಕರ್ತರು ಮಾರ್ಗದು ದ್ದಕ್ಕೂ ಸಂವಿಧಾನ ರಕ್ಷಣೆ, ಶಾಂತಿ, ಸೌಹಾ ರ್ದತೆ ಕುರಿತಂತೆ ಘೋಷಣೆ ಕೂಗಿದರ ಲ್ಲದೆ, ಸಂವಿಧಾನ ವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಾರತ ಸಂವಿ ಧಾನದ ರಕ್ಷಣೆಗೆ ಆಗ್ರಹಿಸಿ ದೇಶದ ಐದು ರಾಜ್ಯಗಳಿಂದ ಐದು ಮಹಿಳಾ ತಂಡಗಳು ಯಾತ್ರೆ ಆರಂಭಿಸಿದ್ದು, ಕೇರಳದಿಂದ ಸಾಮಾ ಜಿಕ ಕಾರ್ಯಕರ್ತೆ ಶಬನಂ ಹಶ್ಮಿ ನೇತೃತ್ವದ ತಂಡ ಇಂದು ಮೈಸೂರಿಗೆ ಆಗಮಿಸಿ ಶಾಂತಿ ನಡಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆಯಿತು.

ಕೇರಳದಿಂದ ಮೈಸೂರಿಗೆ ಬಂದ ಮಹಿಳಾ ಹೋರಾಟಗಾರರನ್ನು ಧ್ವನಿ ಮಹಿಳಾ ಒಕ್ಕೂ ಟದ ಸದಸ್ಯೆಯರು ಡೊಳ್ಳು ಕುಣಿತದ ಮೂಲಕ ಸ್ವಾಗತಿಸಿದರು. ಬಳಿಕ ಪುರಭವನದ ಆವ ರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ತೆರಳಿ ಕೆಲಕಾಲ ಘೋಷಣೆ ಕೂಗಿದರು. ನಂತರ ಪುರಭವನದ ಆವರಣ ದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿದರು.

ಇದೇ ವೇಳೆ ಸಾಹಿತಿ ದೇವನೂರು ಮಹಾ ದೇವ ಮಾತನಾಡಿ, ಸಂವಿಧಾನ ಸಂರಕ್ಷಣೆ ಹಾಗೂ ಶಾಂತಿ ಸೌಹಾರ್ದತೆಗಾಗಿ ದೇಶದ ವಿವಿಧೆಡೆಯಿಂದ ಮಹಿಳಾ ಹೋರಾಟಗಾರರು ಯಾತ್ರೆಯ ಮೂಲಕ ಬಂದು ಜನಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನ ಅಪಾಯದಲ್ಲಿದೆ. ಸಂವಿಧಾನಕ್ಕೆ ಹೆಗ್ಗಣಗಳು, ಇಲಿಗಳು ಬಿಲ ತೋಡುತ್ತಿವೆ. ಇದರೊಂದಿಗೆ ಸಾಮರಸ್ಯ ಹಾಳಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪಾಲನೆ ಮಾಡುವ, ಸಾಕುವ ಮನೋಭಾವವುಳ್ಳ ಸ್ತ್ರೀ ಶಕ್ತಿ ಮುಂದೆ ಬಂದಿರುವುದು ಶ್ಲಾಘ ನೀಯ. ಇಂದು ನಡೆದ ಜಾಥಾದಲ್ಲಿ ಹಿಂದಿ ಭಾಷೆಯಲ್ಲಿ ಘೋಷಣೆ ಕೂಗುತ್ತಿದ್ದುದ್ದನ್ನು ಗಮನಿಸಿದೆ. ಅದರಂತೆ ಕನ್ನಡಿಗರು, ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಘೋಷಣೆ ಕೂಗು ವುದರೊಂದಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ವಿವಿಧ ಸಂಘ ಟನೆಗಳ ಮುಖಂಡರು ಹಾಗೂ ಹೋರಾಟ ಗಾರರಾದ ಹೊಸಕೋಟೆ ಬಸವರಾಜು, ಒಡಿಪಿಯ ಸುನೀತಾ, ನಳಿನಿ, ಶ್ವೇತ, ಪ್ರೊ. ಪ್ರೀತಿ, ಅಭಿರುಚಿ ಗಣೇಶ್, ಒಡನಾಡಿಯ ಕವಿತಾ, ರಾಮೇಶ್ವರಿ ವರ್ಮ, ನೇತ್ರಾವತಿ, ನೀಲಯ್ಯ, ಶಿವಲಿಂಗಮ್ಮ, ಅನಂತು ಸೇರಿ ದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »