ರಂಗಭೂಮಿ ಸಾಧಕರಾದ ಅಡ್ಡಂಡ ಕಾರ್ಯಪ್ಪ, ವೇಣುಗೋಪಾಲ್, ಶಶಿಕಲಾರಿಗೆ ಅಭಿನಂದನೆ
ಮೈಸೂರು

ರಂಗಭೂಮಿ ಸಾಧಕರಾದ ಅಡ್ಡಂಡ ಕಾರ್ಯಪ್ಪ, ವೇಣುಗೋಪಾಲ್, ಶಶಿಕಲಾರಿಗೆ ಅಭಿನಂದನೆ

January 21, 2020

ಮೈಸೂರು,ಜ.20(ಎಸ್‍ಬಿಡಿ)- ನಿಜ ವಾದ ಕಲೆ ಪರಿವರ್ತನೆ ಸಾಧಿಸುತ್ತದೆ ಎಂದು ಹಿರಿಯ ವಿದ್ವಾಂಸ ಪ್ರೊ.ಮಲೆ ಯೂರು ಗುರುಸ್ವಾಮಿ ಅಭಿಪ್ರಾಯಿಸಿದರು.

ಮೈಸೂರಿನ ಕನ್ನಡ ಸಾಹಿತ್ಯ ಕಲಾ ಕೂಟ ಹಾಗೂ ಕದಂಬ ರಂಗ ವೇದಿಕೆ ಸಹ ಯೋಗದಲ್ಲಿ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಸೋಮವಾರ ಏರ್ಪಡಿ ಸಿದ್ದ, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಕರ್ನಾಟಕ ನಾಟಕ ಅಕಾ ಡೆಮಿ ಪ್ರಶಸ್ತಿ ಪುರಸ್ಕøತರಾದ ವೇಣು ಗೋಪಾಲ್ ಹಾಗೂ ಶಶಿಕಲಾ ಅವರ ಅಭಿನಂದನಾ ಸಮಾರಂಭದಲ್ಲಿ ಮಾತ ನಾಡಿದ ಅವರು, ಸಾಧಕರನ್ನು ಗೌರವಿಸು ವುದು ಸಂಸ್ಕøತಿ ಪ್ರತೀಕ ಹಾಗೂ ಸಮಾ ಜದ ಕರ್ತವ್ಯ. ರಂಗಭೂಮಿಗೆ ಬಂದು ವಾಪಸ್ಸಾಗುವಾಗ ಎಲ್ಲರೂ ಪರಿವರ್ತನೆಗೆ ಒಳಗಾಗಬೇಕು. ಆಗ ಮಾತ್ರ ನಿಜವಾದ ಕಲೆ ಎನಿಸುತ್ತದೆ ಎಂದರು.

ಸಂಸ ಅವರು ನಿರ್ದೇಶಿಸಿದ್ದ ಜಿ.ಪುಟ್ಟ ಸ್ವಾಮಿ ಅವರ `ಗೌತಮ ಬುದ್ಧ’ ನಾಟಕ ದಲ್ಲಿ ಮೊಹಮದ್ ಪೀರ್, ಪ್ರಧಾನ ಪಾತ್ರ ನಿರ್ವಹಿಸಿದ್ದರು. ನಾಟಕ ಮುಕ್ತಾಯವಾದ ಕೂಡಲೇ ಪ್ರೇಕ್ಷಕರೆಲ್ಲಾ ಗ್ರೀನ್ ರೂಮ್‍ಗೆ ನುಗ್ಗಿ, ಮೊಹಮದ್ ಪೀರ್ ಅವರಿಗೆ ನಮ ಸ್ಕರಿಸಿದರು. ಜನರನ್ನು ನಿಯಂತ್ರಿಸಲಾಗದೆ ಪೀರ್ ಅವರನ್ನು ಗೇಟ್ ಬಳಿ ಕುರ್ಚಿ ಯಲ್ಲಿ ಕೂರಿಸಿದ್ದರು. ಪ್ರೇಕ್ಷಕರೆಲ್ಲಾ ಪೀರ್ ಅವರ ಕಾಲುಮುಟ್ಟಿ ನಮಸ್ಕರಿಸಿ, ಹೊರ ಹೋದರು. ಕಾರಣ ನಾಟಕ ಮುಗಿಯು ವಷ್ಟರಲ್ಲಿ ಮೊಹಮದ್ ಪೀರ್, ಪ್ರೇಕ್ಷಕರ ಮನದಲ್ಲಿ ಬುದ್ಧನಾಗಿದ್ದರು. ಹಾಗೆಯೇ `ಚಿತ್ರಾಂಗದ’ ನಾಟಕದಲ್ಲಿ ನಟಿಸಿದ್ದ ಇಬ್ಬರು ವಿದ್ವಾಂಸರು, ಬಬ್ರುವಾಹನ-ಅರ್ಜುನ ಪಾತ್ರದ ಹೊರತು ಪರಸ್ಪರ ಸ್ಪರ್ಧೆಗಿಳಿದಿ ದ್ದರು. ಬೆಳಗಾಗುವವರೆಗೂ ಹಾಡಿನ ರೂಪದ ಸಂಭಾಷಣೆ ನಡೆಸಿದ್ದರು. ಅದು ನಾಟಕವೋ? ವಾಸ್ತವವೋ? ಎಂದು ತಿಳಿ ಯದೆ ಪ್ರೇಕ್ಷಕರೆಲ್ಲಾ ಕಲಾಲೋಕದಲ್ಲಿ ಕಳೆದು ಹೋಗಿದ್ದರು. ಇದು ಸಾಧ್ಯವಾಗು ವುದು ನಿಜವಾದ ಕಲೆಯಿಂದ ಮಾತ್ರ ಎಂದು ಪ್ರೊ.ಮಲೆಯೂರು ಗುರುಸ್ವಾಮಿ ತಿಳಿಸಿದರು.

ಕಾರ್ಯಪ್ಪ ಕಲಾ ಸೇವೆ: ಅಡ್ಡಂಡ ಸಿ. ಕಾರ್ಯಪ್ಪ ಅವರ ಸ್ವ-ವಿವರದ ಮಾತೃ ಭಾಷೆ ಕಾಲಂನಲ್ಲಿ `ಕೊಡಗು ಕನ್ನಡ’ ಎಂದು ನಮೂದಿಸಿದ್ದಾರೆ. ವಿಘಟನೆ ಹೆಚ್ಚಾಗಿ ಕಾಣುವ ಸಂದರ್ಭದಲ್ಲಿ ಕಾರ್ಯಪ್ಪನವರ ಈ ವಿಶೇಷ ಪರಿಕಲ್ಪನೆ, ಸಂಘಟನೆ ಹಾಗೂ ಭಾವೈಕ್ಯತೆ ಮೆರೆಯುವಂತಿದೆ. ಕೊಡಗಿ ನಲ್ಲಿ ಕಲಾತಂಡ ಕಟ್ಟಿ, ಕಲಾವಿದರಿಗೆ ವೇತನ ನೀಡಿ, 12 ವರ್ಷ ಮುನ್ನಡೆಸಿದ್ದು ಸುಲಭ ಕಾರ್ಯವಲ್ಲ. ಬಿ.ವಿ.ಕಾರಂತರು ಸೇರಿ ದಂತೆ ಮಹಾನ್ ರಂಗಸಾಧಕರನ್ನು ಅಲ್ಲಿಗೆ ಆಹ್ವಾನಿಸಿ, ರಂಗಭೂಮಿ ಮಹತ್ವ ಸಾರಿ ದರು. ಮಕ್ಕಳಲ್ಲಿ ನಾಟಕದ ಅಭಿರುಚಿ ಬೆಳೆಸಿದರು. ನಟ ದರ್ಶನ್ ಪ್ರಥಮವಾಗಿ ಇವರ ವೇದಿಕೆಯಲ್ಲಿ ನಟಿಸಿದ್ದು, ಬುಡ ಕಟ್ಟು ಜನರೊಂದಿಗಿದ್ದು, ನಾಟಕದ ಮೂಲಕ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಿ ದರು. ಪ್ರಾದೇಶಿಕ ಸಿನಿಮಾ ನಿರ್ದೇಶಕ, ಪತ್ರಕರ್ತ, ಮಡಿಕೇರಿ ಆಕಾಶವಾಣಿ ವಾರ್ತಾ ಪ್ರಚಾರಕರಾಗಿ ಕೆಲಸ ಮಾಡಿ ದ್ದಾರೆ. ಮಕ್ಕಳ ನಾಟಕಗಳು ಸೇರಿದಂತೆ 20 ಕನ್ನಡ, 14 ಕೊಡವ ಭಾಷೆ ನಾಟಕ ಮಾಡಿಸಿದ್ದಾರೆ. ಏನೇ ಆದರೂ ತಮ್ಮ ಕನಸು, ಪ್ರಾಮಾಣಿಕತೆ, ಪಾರದರ್ಶಕತೆ ಯನ್ನು ಬಿಡದೆ, ಕಲಾಸೇವೆ ಮುಂದುವರೆ ಸಲಿ ಎಂದು ಆಶಿಸಿದರು.

ಇವರ ಸಾಧನೆಯೇ ದಾರಿದೀಪ: ವೇಣು ಗೋಪಾಲ ಅವರು `ಅಕ್ಷಯ ನೇತ್ರ’ ಉಳ್ಳ ವರು. ದೃಷ್ಟಿಯಿಲ್ಲದಿದ್ದರೂ ಬೇರೆಯವ ರಿಂದ ಪಠ್ಯ ಓದಿಸಿ, ರೆಕಾರ್ಡ್ ಮಾಡಿ ಕೊಂಡು ಬಿಎ, ಅರ್ಥಶಾಸ್ತ್ರ ಹಾಗೂ ಇಂಗ್ಲಿಷ್‍ನಲ್ಲಿ ಎಂಎ, ಎಲ್‍ಎಲ್‍ಬಿ ಸೇರಿ ದಂತೆ ಹಲವು ಪದವಿ ಪಡೆದಿದ್ದಾರೆ. ಈಜು, ಟ್ರಕ್ಕಿಂಗ್, ಸೈಕ್ಲಿಂಗ್‍ನಲ್ಲೂ ಪರಿಣ ತರು. ಗೋಣಿಕೊಪ್ಪದಿಂದ ಮೈಸೂರಿಗೆ ಸೈಕಲ್‍ನಲ್ಲಿ ಬಂದಿದ್ದರು. 70ಕ್ಕೂ ಹೆಚ್ಚು ಬೀದಿ ನಾಟಕ ಬರೆದು, ಆಡಿಸಿದ್ದಾರೆ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ, 8 ತಿಂಗಳ ಜೈಲುವಾಸ ಅನುಭವಿಸಿದ್ದಾರೆ. ಹಾಡು ವುದು, ಚರ್ಚಾ ಸ್ಪರ್ಧೆಯಲ್ಲೂ ಎತ್ತಿದ ಕೈ. `ಅವಮಾನದ ಗಾಯಗಳು ಕಾಣದಿರಲೆಂದು ಗಡ್ಡ ಬಿಟ್ಟಿದ್ದೇನೆ. ತಲೆಗೆ ಹೊಡೆತ ಜೋರಾಗಿ ಬೀಳದಿರಲೆಂದು ಟೋಪಿ ತೊಟ್ಟಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ದೃಷ್ಟಿಯಿಲ್ಲದಿ ದ್ದರೂ ಸಾಧನೆ ಮೆರೆದಿರುವ ಇವರ ಜೀವನ ಕತೆ, ಕಣ್ಣು ಇರುವವರಿಗೂ ದಾರಿದೀಪ ವಾಗಿದೆ ಎಂದು ಬಣ್ಣಿಸಿದ ಮಲೆಯೂರು ಗುರುಸ್ವಾಮಿ, ಏಕವ್ಯಕ್ತಿ ನಾಟಕದ ಮೂಲಕ ರಂಗಾಸಕ್ತರ ಮನದಲ್ಲಿ ನೆಲೆಸಿರುವ ಶಶಿಕಲಾ ಹೆಮ್ಮೆಯ ಕಲಾವಿದೆ ಎಂದು ಪ್ರಶಂಸಿಸಿದರು.

ಕೆಬಿಜಿಯವರಿಗೆ `ಮಿತ್ರ’, `ಸ್ಟಾರ್’ ಬಿರುದು: ಇನ್ನು ಕೆ.ಬಿ.ಗಣಪತಿ ಅವರು ಅಪರೂಪದ ವ್ಯಕ್ತಿತ್ವದವರು. ವರದಿಗಾರನಾದರೆ ಸಾಕು ಕೆಲವರಿಗೆ ಅಮಲೇರುತ್ತದೆ. ಆದರೆ ಗಣ ಪತಿ ಅವರು, 2 ಪತ್ರಿಕೆಗಳ ಪ್ರಧಾನ ಸಂಪಾ ದಕರು, ಮಾಲೀಕರಾಗಿದ್ದರೂ ಎಲ್ಲರೊಂ ದಿಗೆ ಪ್ರೀತಿಯಿಂದ ಬೆರೆಯುತ್ತಾರೆ. `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಇದು ಪತ್ರಿಕೆಗಳ ಹೆಸರು ಮಾತ್ರ ವಲ್ಲ ಕೆ.ಬಿ.ಗಣಪತಿ ಅವರಿಗೆ ಸಲ್ಲುವ ಬಿರುದುಗಳೆಂದು ಭಾವಿಸಿದ್ದೇನೆ ಎಂದರು.

ಅಭಿನಂದನೆ: ಇದಕ್ಕೂ ಮುನ್ನ `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಅವರು, ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ವೇಣುಗೋಪಾಲ್ ಹಾಗೂ ಶಶಿಕಲಾ ಅವರಿಗೆ ಮೈಸೂರು ಪೇಟ ತೊಡಿಸಿ, ಅಭಿನಂದಿಸಿದರು.
ಸಮಾಜ ಸೇವಕ ರಘುರಾಂ ವಾಜ ಪೇಯಿ, ಕದಂಬ ರಂಗ ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Translate »