ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ನಾಯಕ ರೋಷನ್ ಬೇಗ್ ಸಮ್ಮಿಶ್ರ ಸರ್ಕಾರದ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಕೈ ಪಾಳಯದ ಇರುಸ ಮುರುಸಿಗೆ ಕಾರಣವಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಇನ್ನೋರ್ವ ಶಾಸಕ ಸಹ ಇವಿಎಂಗಳನ್ನು ಸಮರ್ಥಿಸಿಕೊಳ್ಳುವ ಮೂಲಕ ತಮ್ಮ ನಾಯಕರನ್ನು ಇನ್ನಷ್ಟು ಮುಜುಗರಕ್ಕೀಡುಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕ, ಶಾಸಕ ಡಾ. ಕೆ.ಸುಧಾಕರ್ ಇವಿಎಂಗಳನ್ನು ಸಮರ್ಥಿಸಿಕೊಂಡಿದ್ದು ಚುನಾವಣಾ ಆಯೋಗದ ಪರ ಬ್ಯಾಟ್ ಬೀಸಿದ್ದಾರೆ. ಮಂಗಳವಾರ ಈ ಸಂಬಂಧ ಟ್ವೀಟ್ ಮಾಡಿದ್ದ ಸುಧಾಕರ್ “ವೈಯಕ್ತಿಕವಾಗಿ ನನಗೆ ಗೊಂದಲವಾಗಿದೆ. ಎಕ್ಸಿಟ್ ಪೆÇೀಲ್‍ಗಳ ಕುರಿತು ಮಾತನಾಡುವ ವೇಳೆ ಏಕೆ ಇವಿಎಂ ಕುಶಲತೆಗಳ ಸಮಸ್ಯೆ ಕುರಿತು ಹೇಳಲಾಗುತ್ತಿದೆ. ವಾಸ್ತವದಲ್ಲಿ ಎಕ್ಸಿಟ್ ಪೆÇೀಲ್‍ಗಳು ಮತದಾನದ ಮುಕ್ತಾಯದ ವೇಳೆಯಲ್ಲಿನ ಮತದಾರರ ಭಾವನೆಯ ಸೂಚಕವಾಗಿದೆ” ಎಂದಿದ್ದಾರೆ. ಮುಂದುವರೆದು ಮಾತನಾಡಿದ ಶಾಸಕ ಸುಧಾಕರ್ “ಎಕ್ಸಿಟ್ ಪೆÇೀಲ್‍ಗಳಿಗೂ ಇವಿಎಂ ವಿರೂಪಗೊಳಿ ಸುವಿಕೆಗೂ ಸಂಬಂಧವಿದೆ ಎಂದು ನಾನು ಭಾವಿಸಲಾರೆ” ಎಂದರು.
ಎಕ್ಸಿಟ್ ಪೆÇೀಲ್ ಬಗೆಗೆ ಮಾತ್ರ ನಾನು ಮಾತನಾಡುತ್ತೇನೆ. ಏಕೆಂದರೆ ಕೆಲವರಿಗೆ ಇದಕ್ಕೆ ಭಿನ್ನವಾದ ಆಲೋಚನೆಗಳಿದೆ.ಹಾಗೆಯೇ ಇವಿಎಂ ವಿರೂಪಗೊಳಿಸು ವಂತಹದೇ ನನ್ನೂ ಎಕ್ಸಿಟ್ ಪೆÇೀಲ್‍ನ ಸಮಯದಲ್ಲಿ ಮಾಡಲಾಗುವುದಿಲ್ಲ. ಏಕೆಂದರೆ ಮತದಾನದ ಮುಕ್ತಾಯದ ದಿನದಂದು ಈ ಮತಗಟ್ಟೆ ಸಮೀಕ್ಷೆಗಳು ನಡೆಯುತ್ತವೆ” ಎಂದು ಸುಧಾಕರ್ ಹೇಳಿದ್ದಾರೆ. ಇದಕ್ಕೆ ಮುನ್ನ ಮಂಗಳವಾರ ರೋಷನ್ ಬೇಗ್ ಕಾಂಗ್ರೆಸ್ ಪಕ್ಷದ ನಾಯಕ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹಾಗೂ ಕೆ.ಸಿ. ವೇಣು ಗೋಪಾಲ್ ಅವರುಗಳ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದರು. ಇದೀಗ ಸಮ್ಮಿಶ್ರ ಸರ್ಕಾರದ ಇನ್ನೋರ್ವ ಶಾಸಕ ಸುಧಾಕರ್ ಸಹ ಪಕ್ಷದ ನಿಲುವಿಗೆ ವ್ಯತಿರಿಕ್ತವಾಗಿ ಮಾತನಾಡಿರುವುದು ಸರ್ಕಾರದ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.