ಕೃಷಿ ಸಚಿವರ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್
ಮೈಸೂರು

ಕೃಷಿ ಸಚಿವರ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

December 4, 2020

ಮೈಸೂರು, ಡಿ.3-ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ನಿಜವಾದ ಹೇಡಿಗಳು ಯಾರು? ರೈತರೋ ಅಥವಾ ರಾತ್ರೋ ರಾತ್ರಿ ಮುಂಬೈಗೆ ಹಾರಿದವರೋ? ಕೊರೊನಾ ಸಮಯದಲ್ಲಿ ರೈತರ ಬೆಳೆಗೆ ಮಾರುಕಟ್ಟೆ ಕಲ್ಪಿಸದ ಸರ್ಕಾರವೋ? ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ. ನಿಜವಾದ ಹೇಡಿಗಳು ಯಾರು? ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್‍ಟಿ ಪಾಲು ಕೇಳದವರೋ? ನೆರೆ ಬಂದಾಗ ಸಂತ್ರಸ್ತರ ನೆರವಿಗೆ ನಿಲ್ಲದ ಬಿಜೆಪಿ ನಾಯಕರೋ? ಪರಿಹಾರ ಕೇಳಿದ್ದಕ್ಕೆ ರೈತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರು ವವರೋ? ರಾಜ್ಯದ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕದ ಬಿಜೆಪಿ ಸಂಸದರೋ? ಎಂದು ಕೆಪಿಸಿಸಿ ಪ್ರಶ್ನಿಸಿದರು. ಬಿ.ಸಿ.ಪಾಟೀಲ್ ರೈತರ ಕ್ಷಮೆ ಕೋರಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾ ಯಿಸಿದ್ದಾರೆ. ಕೃಷಿ ಸಚಿವರಾಗಿ ರೈತರ ಆತ್ಮಹತ್ಯೆಯನ್ನು ವಿಭಿನ್ನವಾಗಿ ನೋಡಬೇಕು. ಅವರ ಭರವಸೆಗಳನ್ನು ಈಡೇರಿಸುವ ಬದಲು ಕೃಷಿ ಸಚಿವರು ದಡ್ಡತನದ ಹೇಳಿಕೆ ನೀಡಿದ್ದಾರೆ. ರೈತರನ್ನು ಅವಮಾನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ರೈತರು ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ರೈತರ ಆತ್ಮಹತ್ಯೆಯು ಸರ್ಕಾರ ಪ್ರಾಯೋಜಿತ ಸಾವು ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ನೈಸರ್ಗಿಕ ವಿಪ್ಪತ್ತು, ಬೆಳೆಗಳಿಗೆ ಬೆಲೆ ಸಿಗದೇ ಇರುವುದು, ಬೀಜ, ರಸಗೊಬ್ಬ ರದ ಅಕಾಲಿಕ ಪೂರೈಕೆಯಿಂದ ಸಂಕಷ್ಟಕ್ಕೀಡಾಗಿರುವ ರೈತರು, ಅದರಿಂದ ಹೊರ ಬಾರದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಸರ್ಕಾರದ ದ್ವಿಮುಖ ನೀತಿಗಳು ಕಾರಣ ಎಂದಿರುವ ಅವರು, ಕೃಷಿ ಸಚಿವರ ಹೇಳಿಕೆ ಖಂಡನೀಯ ಎಂದಿದ್ದಾರೆ.

Translate »