ಕಾವೇರಿ-ಗೋದಾವರಿ ನದಿ ಜೋಡಣೆ ಬಗ್ಗೆ ಸಮಾಲೋಚನಾ ಸಭೆ
ಮೈಸೂರು

ಕಾವೇರಿ-ಗೋದಾವರಿ ನದಿ ಜೋಡಣೆ ಬಗ್ಗೆ ಸಮಾಲೋಚನಾ ಸಭೆ

January 13, 2020

ಮೈಸೂರು,ಜ.12(ಬಿಸಿಟಿ)- ಕೊಡಗು ಜಿಲ್ಲೆಯಲ್ಲಿ ಉಗಮ ವಾಗುವ ಕಾವೇರಿ ನದಿ ಪಾತ್ರದಿಂದ ತಮಿಳುನಾಡಿನ ಸಂಗಮದ ತನಕದ ನದಿಯ ಹಾದಿಯನ್ನು ಇಡಿಯಾಗಿ ರಕ್ಷಿಸುವ ಕ್ರಮಗಳನ್ನು ಚರ್ಚಿಸಲು ಬೆಂಗಳೂರಿನ ವಿಧಾನಸಭೆಯ ಎರಡನೆಯ ಕಟ್ಟಡದಲ್ಲಿ ಸಮಾಲೋಚನಾ ಸಭೆಯನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.

ನವೆಂಬರ್ 2019ರಲ್ಲಿ ಚೆನ್ನೈನಲ್ಲಿ ನಡೆದ ಪರ್ಯಾಯ ದ್ವೀಪದ ನದಿಗಳ (Peninsular rivers) ಸಂರಕ್ಷಣಾ ಸಭೆ ಹಾಗೂ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಡಿಸೆಂಬರ್ 2019ರಲ್ಲಿ ನಡೆದ ರಾಷ್ಟ್ರೀಯ ಜಲ ಸಮಾವೇಶದ ನಂತರದ ಸಭೆ ಇದಾಗಿತ್ತು.

ಉಜ್ಜಯಿನಿಯಲ್ಲಿ ನಡೆದ ಸಭೆಯಲ್ಲಿ ಗೋದಾವರಿ, ಕೃಷ್ಣ ಹಾಗೂ ಕಾವೇರಿ ಅಂತರರಾಜ್ಯ ನದಿಗಳ ಜೋಡಣೆಗೆ ಒತ್ತು ನೀಡಲಾ ಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಪ್ರತಿ ನದಿಗೂ ಒಂದು ವಸ್ತುಸ್ಥಿತಿ ವರದಿ (Status report) ತಯಾರಿಸಿ ಅದನ್ನು ಸಂಬಂಧಿಸಿದ ರಾಜ್ಯಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸ ಲಾಯಿತು. ಪರಸ್ಪರ ಒಡಂಬಡಿಕೆ ಹಾಗೂ ಎಲ್ಲಾ ಜನರ ಸಹ ಕಾರದಿಂದ ನದಿಗಳ ರಕ್ಷಣೆ ಹಾಗೂ ಪುನಶ್ಚೇತನ ಮಾಡಿ, ಹೇಗೆ ನದಿ ವಿವಾದಗಳನ್ನು ಸಮರ್ಪಕವಾಗಿ ಇತ್ಯರ್ಥಗೊಳಿಸಬಹುದು ಎಂಬುದನ್ನು ವರದಿಯಲ್ಲಿ ವಿವರಿಸಲಾಗಿದೆ.

ನದಿ ನೀರು ಹಂಚಿಕೆ ಹಾಗೂ ಬಳಕೆಯ ಹೊರತಾಗಿ, ಸಭೆಯಲ್ಲಿ ಕಾವೇರಿ ನದಿ ಪಾತ್ರ, ಜಲಾನಯನ ಪ್ರದೇಶಗಳಲ್ಲಿನ ಮರ ಹನನ, ಹಸಿರಿನ ಸಿರಿ ನಾಶದ ಬಗ್ಗೆ ಸಭೆಯಲ್ಲಿ ಆತಂಕ ವ್ಯಕ್ತವಾಯಿತು. ಹಸಿರು ಹೊದಿಕೆಯ ಶೀಘ್ರಗತಿಯ ನಾಶ, ಮಾಲಿನ್ಯ, ಗಣಿಗಾರಿಕೆ ಹಾಗೂ ಅಸಮರ್ಪಕ ನೀರು ಸಂಗ್ರಹಣೆ ಬಗ್ಗೆಯೂ ಚರ್ಚೆ ನಡೆ ಯಿತು. ಕಾವೇರಿ ಹಾಗೂ ಗೋದಾವರಿ ನದಿಗಳ ನೀರು ವ್ಯರ್ಥ ವಾಗಿ ಸಮುದ್ರ ಸೇರುವುದನ್ನು ತಡೆದು,

ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ ಹಾಗೂ ತೆಲಂಗಾಣದ ರೈತರು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಹಾಗೂ ಕಾವೇರಿ-ಗೋದಾವರಿ ನದಿ ಜೋಡಣೆಯ ಉಪಯುಕ್ತತೆಯ ಕುರಿತೂ ಚರ್ಚಿಸಲಾಯಿತು. ಕಾವೇರಿ ಹಾಗೂ ಗೋದಾವರಿ ನದಿ ಜೋಡಣೆಯ ಬಗ್ಗೆ ಪ್ರತಿನಿಧಿಗಳ ಅಭಿಪ್ರಾಯ ಪಡೆಯಲಾಯಿತು. ಒಟ್ಟಾರೆಯಾಗಿ ಸಭೆಯು ಕಾವೇರಿ ಹಾಗೂ ಗೋದಾವರಿ ನದಿ ಜೋಡಣೆಯಿಂದ ಉಂಟಾಗುವ ಲಾಭಗಳನ್ನು ವಿವರವಾಗಿ ಚರ್ಚಿಸಿತು. ಹೆಸರಾಂತ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್, ಜಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಡಾ.ಆರ್.ಹೆಚ್.ಸಾವಕಾರ್, ಜಲಸಂರಕ್ಷಣಾ ತಜ್ಞ ಡಾ. ಪ್ರಕಾಶ್‍ರಾವ್, ISಖಔದ ನಿವೃತ್ತ ವಿಜ್ಞಾನಿ ಡಾ.ಡಿ.ಪಿ.ನಾಗೇಶ್ವರರಾವ್, ವಕೀಲ ಜೆ.ಎಂ.ಗಂಗಾಧರ್ ಹಾಗೂ ಇನ್ನಿತರ ಜಲತಜ್ಞರು ಮಾತನಾಡಿ, ಅಧ್ಯಯನ ವರದಿಗಳನ್ನು ಮಂಡಿಸಿದರು. ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಪ್ರತಿನಿಧಿಗಳಾಗಿ ಪ್ರೊ. ಜಾನಕಿರಾಜನ್, ಸಜನ್ ಅಯ್ಯಪ್ಪ, ಕುಟ್ಟಪ್ಪ, ಮೀನಾಕ್ಷಿ, ಮಾಚಯ್ಯ, ಬ್ರಿಗೇಡಿಯರ್ ದೇವಯ್ಯ, ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಬೈರಾರೆಡ್ಡಿ, ಸಿದ್ದನಗೌಡ ಪಾಟೀಲ್, ಚುಕ್ಕಿ ನಂಜುಂಡಸ್ವಾಮಿ, ಕೆ.ಎ.ರಾಜೇಗೌಡ, ಆರ್.ಪಿ. ವೆಂಕಟೇಶ್‍ಮೂರ್ತಿ, ಕೋಡಿಹಳ್ಳಿ ಚಂದ್ರಶೇಖರ್, ಸುನಂದಾ ಜಯರಾಮ್, ಗುರುಸ್ವಾಮಿ, ರಾಜಾರಾಮನ್, ಪ್ರೊ. ನರಸಿಂಹಯ್ಯ, ಮನುಸೋಮಯ್ಯ, ಮಹೇಶ್ ಪ್ರಭು, ಪಿ.ಟಿ.ಜಾನ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »