ಕಲುಷಿತ ನೀರು ಪೂರೈಕೆ: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ಮೈಸೂರು

ಕಲುಷಿತ ನೀರು ಪೂರೈಕೆ: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

November 24, 2019

ಮೈಸೂರು, ನ.23- ಕಲುಷಿತ ನೀರು ಸೇವಿಸಿ, ಹಲವರು ಅಸ್ವಸ್ಥಗೊಂಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರುಣಾ ಹೋಬಳಿ ಹಡಜನ ಗ್ರಾಮಸ್ಥರು ಆರೋಪಿಸಿದ್ದಾರೆ.

ಗಂಭೀರ ಸಮಸ್ಯೆ ಬಗ್ಗೆ ಪತ್ರಿಕಾ ಪ್ರಕ ಟಣೆ ಮೂಲಕ ಆತಂಕ ವ್ಯಕ್ತಪಡಿಸಿರುವ ಗ್ರಾಮಸ್ಥರು, ಅಸಮರ್ಪಕ ನಿರ್ವಹಣೆ ಯಿಂದಾಗಿ ಹಡಜನ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಪರಿಣಾಮ ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು, ಚಿಕಿತ್ಸೆ ಪಡೆದಿದ್ದಾರೆ. ಇವ ರಲ್ಲಿ ಕೆಲವರು ಮೈಸೂರಿನ ಕೆ.ಆರ್.ಆಸ್ಪ ತ್ರೆಗೆ ದಾಖಲಾಗಿ, ಚೇತರಿಸಿಕೊಂಡಿದ್ದಾರೆ. ಕಲುಷಿತ ನೀರು ಸೇವನೆಯಿಂದಲೇ ಅಸ್ವಸ್ಥ ರಾಗಿದ್ದಾರೆಂದು ವೈದ್ಯಕೀಯ ಪರೀಕ್ಷೆ ಯಲ್ಲೂ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಬಳಿಕ ಗ್ರಾಮಕ್ಕೆ ಪೂರೈಕೆ ಮಾಡುತ್ತಿ ರುವ ನೀರನ್ನು ಪರೀಕ್ಷಿಸಿದಾಗಲೂ ಮಲಿನ ಗೊಂಡಿರುವುದು ಸ್ಪಷ್ಟವಾಗಿದೆ. ಇದಕ್ಕೆ ನಿರ್ವಹಣೆ ವೈಫಲ್ಯವೇ ಕಾರಣ. ಸಮ ರ್ಪಕ ನಿರ್ವಹಣೆ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳುವಲ್ಲಿ ನೀರುಗಂಟಿ ವಿಫಲ ವಾಗಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿಗೆ ದೂರು ನೀಡಲಾಗಿತ್ತಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಣಾಮ ಈಗಲೂ ಗ್ರಾಮದ ಹಲವರು ಅಸ್ವಸ್ಥಗೊಂಡು, ಆಸ್ಪತ್ರೆ ಸೇರಿ ದ್ದಾರೆ. ನೀರುಗಂಟಿ ಹಾಗೂ ಗ್ರಾಪಂ ಪಿಡಿಓ ಸಮಸ್ಯೆ ತಿಳಿಸುವ ಸಾರ್ವಜನಿಕರಿಗೇ ವಿರುದ್ಧವಾಗಿ ಮಾತನಾಡುತ್ತಾರೆ. ಈಗಲಾ ದರೂ ಎಚ್ಚೆತ್ತು, ಸಮರ್ಥರನ್ನು ಕರ್ತವ್ಯಕ್ಕೆ ನಿಯೋಜಿಸುವ ಮೂಲಕ ಸಂಭವಿಸಬಹು ದಾದ ಅವಘಡಗಳನ್ನು ತಪ್ಪಿಸಬೇಕು. ನಿರ್ಲ ಕ್ಷ್ಯಿಸಿದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ನರಸಿಂಹ ಮೂರ್ತಿ, ಜಾಂಬವ ಯುವ ಸೇನೆ ಜಿಲ್ಲಾ ಧ್ಯಕ್ಷ ವಿನೋದ್ ಪ್ರಸಾದ್, ಸಿದ್ದು, ಸುರೇಶ್, ಪ್ರಮೋದ್, ಕುಮಾರ್, ಸಿದ್ದರಾಜು, ಜವರಯ್ಯ, ರಾಜೇಶ್, ಗಿರೀಶ್, ಅಭಿ, ಮಲ್ಲಪ್ಪ, ಮಂಜುಳ ಸೇರಿದಂತೆ ಗ್ರಾಮ ಸ್ಥರು ಎಚ್ಚರಿಕೆ ನೀಡಿದ್ದಾರೆ.

Translate »