ವಿಶ್ವೇಶ ತೀರ್ಥರ ಬೃಂದಾವನದ ಮುಂದೆ ನಿರಂತರ ಮಂತ್ರ ಪಠಣ
ಮೈಸೂರು

ವಿಶ್ವೇಶ ತೀರ್ಥರ ಬೃಂದಾವನದ ಮುಂದೆ ನಿರಂತರ ಮಂತ್ರ ಪಠಣ

December 31, 2019

ಬೆಂಗಳೂರು, ಡಿ.30- ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿರುವ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಬೃಂದಾವನದ ಮುಂದೆ ಶಿಷ್ಯ ವೃಂದದಿಂದ ಮಂತ್ರ ಪಠಣ ಸೇರಿದಂತೆ ದಿನವಿಡೀ ಹಲವಾರು ಧಾರ್ಮಿಕ ಕಾರ್ಯ ನೆರವೇರಿತು. ಉಡುಪಿಯ ಪೇಜಾವರ ಶ್ರೀಗಳು ತಾವೇ ಕಟ್ಟಿ ಬೆಳೆಸಿದ ವಿದ್ಯಾಪೀಠ ದಲ್ಲಿ ಶ್ರೀ ಕೃಷ್ಣನ ಸನ್ನಿಧಾನದ ಪಕ್ಕದಲ್ಲೇ ಬೃಂದಾವನ ಪ್ರವೇಶ ಮಾಡಿದ್ದಾರೆ. ಭಾನುವಾರ ರಾತ್ರಿಯಿಂದಲೇ ಭಜನೆ ಆರಾಧನೆಗಳು ಜರುಗಿದವು. ಸೋಮ ವಾರ ಮುಂಜಾನೆಯಿಂದ ಶಿಷ್ಯವೃಂದ ದಿಂದ ಮಂತ್ರ ಪಠಣ ನಡೆಯಿತು.

ಪವಮಾನಸೂಕ್ತ ಮಂತ್ರಪಟನೆ. ವಾಯು ದೇವರ ಮೂರು ಅವತಾರಗಳಾದ ಹನುಮಂತ, ಭೀಮ ಮತ್ತು ಮಧ್ವ ದೇವರ ಮಂತ್ರ ಪಠಿಸಲಾಯಿತು. ನಂತರ ಹೋಮ ಹವನವೂ ನಡೆಯಿತು. ಚತುರ್ವೇದ ಪಾರಾಯಣ, ಅನ್ನ ಸಂತರ್ಪಣೆ, ಭಜನೆ, ಚತುರ್ಮೂರ್ತಿ, ಪಂಚ ಮೂರ್ತಿಗಳ ಆರಾಧನೆಯೂ ನೆರವೇರಿತು.

ಭಕ್ತ ಸಮೂಹ: ಭಕ್ತರಿಗೆ ವಿಶ್ವೇಶ ತೀರ್ಥ ಶ್ರೀಗಳ ಬೃಂದಾವನ ವೀಕ್ಷಣೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆಯಿಂದಲೇ ಭಕ್ತಾದಿಗಳು ಪೂರ್ಣಪ್ರಜ್ಞಾ ವಿದ್ಯಾಪೀಠಕ್ಕೆ ಆಗಮಿಸಿ, ಬೃಂದಾವನಕ್ಕೆ ನಮಿಸಿದರು.

11 ದಿನ ಪಾರಾಯಣ: 11 ದಿನಗಳ ವರೆಗೂ ಶ್ರೀಗಳ ಬೃಂದಾವನದ ಬಳಿ ವಿಶೇಷ ಪಾರಾಯಣ, ಧಾರ್ಮಿಕ ಕಾರ್ಯಕ್ರಮ ಗಳು ಜರುಗಲಿವೆ. 12 ದಿನಗಳ ನಂತರ ಮಠದ ಕಿರಿಯ ಶ್ರೀಪಾದರಾದ ಶ್ರೀ ವಿಶ್ವ ಪ್ರಸನ್ನ ತೀರ್ಥರ ನೇತೃತ್ವದಲ್ಲಿ ಮಹಾ ಸಮಾರಾಧನೆ ನಡೆಯಲಿದೆ.

48 ದಿನಗಳ ನಂತರ ಬೃಂದಾವನದಲ್ಲಿ ಇರಿಸಿರುವ ಸಾಲಿಗ್ರಾಮ ಪಾತ್ರೆ ಸಿಗುವವ ರೆಗೆ ಮಣ್ಣನ್ನು ಬಿಡಿಸಿ, ಅಲ್ಲಿಗೆ ನಿತ್ಯಾಭಿ ಷೇಕದ ನೀರು ತಲುಪುವಂತೆ ನಾಳವೊಂ ದನ್ನು ಅಳವಡಿಸಲಾಗುತ್ತದೆ. ಅಂದಿನಿಂದ ವೃಂದಾವನ ಜಾಗಕ್ಕೆ ನಿತ್ಯವೂ ಪೂಜೆ ಸಲ್ಲಿಸ ಲಾಗುವುದು ಎಂದು ತಿಳಿದುಬಂದಿದೆ.

Translate »