ಕಿಡ್ನಿ ರೋಗಗಳ ಬಗ್ಗೆ ಇಂದು ತಜ್ಞರೊಂದಿಗೆ ಸಂವಾದ
ಮೈಸೂರು

ಕಿಡ್ನಿ ರೋಗಗಳ ಬಗ್ಗೆ ಇಂದು ತಜ್ಞರೊಂದಿಗೆ ಸಂವಾದ

April 28, 2019

ಮೈಸೂರು: ಕಿಡ್ನಿಗೆ ಸಂಬಂಧಿಸಿದ ರೋಗಗಳು ಮತ್ತು ಅದಕ್ಕಿರುವ ಚಿಕಿತ್ಸಾ ಸಾಧ್ಯತೆಗಳನ್ನು ಕುರಿತ ಮುಖಾಮುಖಿ ಸಂವಾದ ಪುನ ರ್ಜನ್ಮ ಕಾರ್ಯಕ್ರಮವನ್ನು ನಾಳೆ (ಭಾನುವಾರ) ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಗಾನಭಾರತಿ ಆವರಣದಲ್ಲಿ ಏರ್ಪಡಿಸಲಾಗಿದೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು, ಈಗಾಗಲೇ ಈ ಸಮಸ್ಯೆಗೆ ಡಯಾಲಿಸಿಸ್‍ಗೆ ಒಳಗಾಗಿರುವವರು ಹಾಗೂ ಈ ಚಿಕಿತ್ಸಾ ವಿಧಾನದ ಬಗ್ಗೆ ತಿಳಿದುಕೊಳ್ಳ ಬಯಸುವವರಿಗೆ ಈ ಸಂವಾದಕ್ಕೆ ಮುಕ್ತ ಅವಕಾಶವಿದೆ.

ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವ ವಿಚಾರದ ಬಗ್ಗೆ ಆಸಕ್ತಿವುಳ್ಳವರು ಸಹ ಈ ಕಾರ್ಯಕ್ರಮಕ್ಕೆ ಹಾಜರಾಗಬಹುದು. ಕಾರ್ಯಕ್ರಮದಲ್ಲಿ ಹೆಸರಾಂತ ತಜ್ಞವೈದ್ಯರು ವೈಜ್ಞಾನಿಕ ರೀತಿಯಲ್ಲಿ ಸಂವಾದ ನಡೆಸಲಿದ್ದಾರೆ. ಮೈಸೂರು ಅಪೋಲೋ ಆಸ್ಪತ್ರೆಯ ಅನುಭವಿ ನೆಪ್ರೋಲೋಜಿಸ್ಟ್ ಹಾಗೂ ಯೂರಾಲಜಿಸ್ಟ್ ಸಹ ಕಿಡ್ನಿ ಆರೋಗ್ಯದ ಸಂಬಂಧ ಅರಿವು ಮೂಡಿಸಲಿದ್ದಾರೆ. ಈ ಸಂದರ್ಭದಲ್ಲಿ ಅಕ್ವಿಟ್ ಕಿಡ್ನಿ ಇಂಜ್ಯೂರಿ(ಂಏI) ಮತ್ತು ಕೋರೋನಿಕ್ ಕಿಡ್ನಿ ಡಿಸೀಸಸ್ ಸೇರಿದಂತೆ ಇನ್ನಿತರೆ ಕಿಡ್ನಿ ರೋಗಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸಲಾಗುತ್ತದೆ. ಇದರ ಜೊತೆಗೆ ಅಪೋಲೋ ಆಸ್ಪತ್ರೆಯಲ್ಲಿ ಈ ಖಾಯಿಲೆಗೆ ಚಿಕಿತ್ಸೆ ಪಡೆದು ಪೂರ್ಣ ಗುಣಮುಖರಾಗಿರುವವರೂ ವಿವರ ನೀಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಮೊದಲು ಬಂದವರಿಗೆ ಆದ್ಯತೆ ನೀಡಲಿದ್ದು, ನೋಂದಣಿ ಉಚಿತ. ಹೆಚ್ಚಿನ ಮಾಹಿತಿಗಾಗಿ ಮೊ:9620006091, 9886923456 ಅನ್ನು ಸಂಪರ್ಕಿಸುವಂತೆ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷ ಮತ್ತು ಘಟಕದ ಮುಖ್ಯಸ್ಥ ಎನ್.ಜಿ.ಭರತೇಶ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »