ಸಮನ್ವಯ ಸಮಿತಿ ಸಭೆಗೆ ಹೈಕಮಾಂಡ್ ಸೂಚನೆ ಅಗತ್ಯವಿಲ್ಲ
ಮಂಡ್ಯ

ಸಮನ್ವಯ ಸಮಿತಿ ಸಭೆಗೆ ಹೈಕಮಾಂಡ್ ಸೂಚನೆ ಅಗತ್ಯವಿಲ್ಲ

July 26, 2018
  • ಸಿದ್ದರಾಮಯ್ಯ ರಾಷ್ಟ್ರರಾಜಕಾರಣಕ್ಕೆ ಹೋಗೋದು ಅನುಮಾನ!: ಡಾ.ಜಿ.ಪರಮೇಶ್ವರ್

ಮಂಡ್ಯ:  ‘ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಮನ್ವಯ ಆಡಳಿತಕ್ಕಾಗಿ ರಚಿಸಲಾಗಿರುವ ಸಮನ್ವಯ ಸಮಿತಿ ಸಭೆಗೆ ಹೈಕಮಾಂಡ್ ಸೂಚನೆ ಅಗತ್ಯವಿಲ್ಲ. ಯಾವಾಗ ಬೇಕೋ ಆವಾಗ ಸಮಿತಿಯ ಅಧ್ಯಕ್ಷರು ಸಭೆ ಕರೆಯುತ್ತಾರೆ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಅಥವಾ ಎರಡು ತಿಂಗಳಿಗೊಮ್ಮೆ ಸಮನ್ವಯ ಸಮಿತಿ ಸಭೆ ಸೇರಬೇಕು ಎಂದು ಕೊಂಡಿದ್ದೇವೆ. ಅದೇ ರೀತಿ ಈ ತಿಂಗಳಲ್ಲಿ ಸಭೆ ಕರೆಯಬಹುದು ಎಂದರು.

ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿ ವಾಡ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಪಕ್ಷ ವಿರೋಧಿ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷರು ಅವರಿಗೆ ನೋಟಿಸ್ ನೀಡಿದ್ದಾರೆ. ಅವರಿಂದ ಏನು ಉತ್ತರ ಬರುತ್ತೋ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೂವರು ಕಾಂಗ್ರೆಸ್ ನಾಯಕರ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣ ಪ್ರವೇಶ ವಿಚಾರದ ಬಗ್ಗೆ ಅವರನ್ನೇ ಕೇಳಬೇಕು. ನಮ್ಮ ಪಕ್ಷದ ನಾಯಕರಾಗಿ ಜವಾಬ್ದಾರಿ ಹೊತ್ತಿರು ವವರು. ಹಾಗಾಗಿ, ಎಐಸಿಸಿ ಕಾರ್ಯಕಾರಿ ಸಮಿತಿಗೆ ಅವರನ್ನ ತೆಗೆದುಕೊಂಡಿದ್ದಾರೆ. ಅಷ್ಟಕ್ಕೇ ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರೆ ಅಂತಲ್ಲ ಎಂದು ಸ್ವಷ್ಟಪಡಿಸಿದರು.

ಮಂಡ್ಯದಲ್ಲಿ ಲಾಕಪ್ ಡೆತ್ ವಿಚಾರವಾಗಿ ಇಲಾಖಾ ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇನ್ನು ಲೋಕಸಭೆಗೆ ಅಭ್ಯರ್ಥಿ ಹಂಚಿಕೆ ಇನ್ನೂ ಚರ್ಚೆ ಆಗಿಲ್ಲ. ಔರಾದ್ಕರ್ ವರದಿ ಜಾರಿ ವಿಚಾರವಾಗಿ ಈಗಾಗಲೇ 6ನೇ ವೇತನ ಸಮಿತಿಗೆ ಶಿಫಾರಸು ಮಾಡಲಾಗಿದ್ದು, ವರದಿ ಜಾರಿಗೆ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.

Translate »