ಮೇಲುಕೋಟೆ ಹೋಬಳಿ ಮಟ್ಟದ ಕ್ರೀಡಾಕೂಟ:  ಕ್ರೀಡೆಯಿಂದ ದೈಹಿಕ, ಮಾನಸಿಕ ಬೆಳವಣಿಗೆ
ಮಂಡ್ಯ

ಮೇಲುಕೋಟೆ ಹೋಬಳಿ ಮಟ್ಟದ ಕ್ರೀಡಾಕೂಟ: ಕ್ರೀಡೆಯಿಂದ ದೈಹಿಕ, ಮಾನಸಿಕ ಬೆಳವಣಿಗೆ

July 26, 2018

ಮೇಲುಕೋಟೆ: ಮಳೆಯ ಸಂದರ್ಭದಲ್ಲಿ ಜಮೀನಿನಲ್ಲಿ ರೈತರು ಬಿತ್ತನೆ ಮಾಡುವುದು ಅಥವಾ ವ್ಯವಸಾಯ ಕ್ಕಾಗಿ ಭೂಮಿ ಹದಗೊಳಿಸುವುದು ಸಾಮಾನ್ಯ. ಆದರೆ, ಮೇಲುಕೋಟೆ ಹೋಬಳಿ ಸಮೀಪದ ಕದಲಗೆರೆ ಗ್ರಾಮದ ಜಮೀನಿನೊಂದರಲ್ಲಿ ವಿವಿಧ ಕ್ರೀಡಾಕೂಟ ಆಯೋಜಿಸಿರುವುದು ನೋಡಗರಲ್ಲಿ ಆಶ್ಚರ್ಯ ಉಂಟು ಮಾಡಿತು.

ಹೌದು ಗ್ರಾಮದ ರೈತರಾದ ಕೃಷ್ಣೇಗೌಡ ಹಾಗೂ ಪುಟ್ಟಸ್ವಾಮಿಗೌಡ ಅವರು ಬುಧವಾರ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯನ್ನು ಬದಿಗಿಟ್ಟು, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2018ನೇ ಸಾಲಿನ ಮೇಲುಕೋಟೆ ಹೋಬಳಿ ಮಟ್ಟದ ಕ್ರೀಡಾ ಕೂಟವನ್ನು ಆಯೋಜಿಸಲು ಸಹಕರಿಸಿದರು.

ವಾಲಿಬಾಲ್, ಕಬಡ್ಡಿ, ಕೋಕೋ ಸೇರಿದಂತೆ ವಿವಿಧ ಕ್ರೀಡಾಕೂಟಗಳು ನಡೆ ಯಿತು. ಗ್ರಾಮಸ್ಥರು ಕ್ರೀಡಾಪಟುಗಳಿಗಾಗಿ ವಿವಿಧ ಬಗೆಯ ಖಾದ್ಯಗಳನ್ನು ತಯಾ ರಿಸಿದರು. ಇಂಜಿನಿಯರ್ ಜಯರಾಂ 102 ಪ್ರಥಮ ಬಹುಮಾನ, ಕದಲಗೆರೆ ನವೀನ್ ದ್ವಿತೀಯ ಬಹುಮಾನ ಪ್ರಾಯೋ ಜಿಸಿದ್ದರು. ಗ್ರಾಮದ ಮುಖಂಡ ದಾಸೇ ಗೌಡ ಚಾಂಪಿಯನ್ ಟ್ರೋಪಿಯನ್ನು ಕೊಡುಗೆ ನೀಡಿದರು. ವಿಜೇತ ತಂಡಗಳಿಗೆ ಸಂಜೆ ಬಹುಮಾನ ವಿತರಿಸಲಾಯಿತು.

ಮೇಲುಕೋಟೆ ವೃತ್ತದ ಬಳಿಘಟ್ಟ, ಅಮೃತಿ, ಜಕ್ಕನಹಳ್ಳಿ, ಮೇನಾಗರ, ಶಂಬೂ ನಹಳ್ಳಿ, ಉಳಿಗೆರೆ, ಸೇರಿದಂತೆ ವಿವಿಧ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇ ಶ್ವರಿ ಮಾತನಾಡಿ, ಕ್ರೀಡಾಕೂಟಕ್ಕೆ ಸಹಕಾರ ನೀಡಿರುವುದು ಪ್ರಶಂಸನೀಯವಾಗಿದೆ. ಮಕ್ಕಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವು ದರಿಂದ ದೈಹಿಕ ಹಾಗೂ ಮಾನಸಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ತಿಮ್ಮರಾಯಿ ಗೌಡ ಕ್ರೀಡಾಜ್ಯೋತಿ ಸ್ವೀಕರಿಸಿದರು. ಪಾಂಡವಪುರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರ ಶೇಖರ್, ತಾಲೂಕು ದೈಹಿಕ ಶಿಕ್ಷಣ ಪರಿ ವೀಕ್ಷಕ ರಾಜು, ಗ್ರಾಪಂ ಅಧ್ಯಕ್ಷೆ ಹೇಮಲತಾ, ಸದಸ್ಯ ನಾರಾಯಣ, ಎಸ್‍ಡಿಎಂಸಿ ಅಧ್ಯಕ್ಷ ರಾಜು, ಸಿಆರ್‍ಪಿ ಲತಾ, ಮಂಜುನಾಥ್, ಮುಖ್ಯಶಿಕ್ಷಕಿ ಸತ್ಯಭಾಮ, ನವೀನ್ ಕುಮಾರ್, ವಿಜಯಕುಮಾರ್ ಹಾಜರಿದ್ದರು.

Translate »