ಹಿಂದಿನ ಮಾದರಿಯಲ್ಲಿ ಇ-ಸ್ವತ್ತು ವಿತರಣೆಗೆ ಅಸ್ತು
ಮಂಡ್ಯ

ಹಿಂದಿನ ಮಾದರಿಯಲ್ಲಿ ಇ-ಸ್ವತ್ತು ವಿತರಣೆಗೆ ಅಸ್ತು

July 26, 2018

ಮದ್ದೂರು: ಪಟ್ಟಣದ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಬುಧವಾರ ಪುರಸಭಾಧ್ಯಕ್ಷೆ ಡಿ.ಕೆ.ಉಮಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ಪುರಸಭಾ ಸದಸ್ಯ ಮನ್ಸೂರು ಆಲಿ ಖಾನ್ ಮಾತನಾಡಿ, ಪಟ್ಟಣದಲ್ಲಿ ಕಸ ವಿಲೇವಾರಿ ಮಾಡಲು ವಾಹನಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯ ಜಗದೀಶ್ ಮಾತನಾಡಿ, ಇ-ಸ್ವತ್ತು ಪಡೆಯಲು ಪುರಸಭೆಗೆ ಅರ್ಜಿ ಸಲ್ಲಿಸಿ 7 ತಿಂಗಳು ಕಳೆದರೂ ಅಧಿಕಾರಿ ಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆ ಪರಿ ಹರಿಸಲು ಅಧಿಕಾರಿಗಳು ಕ್ರಮ ವಹಿಸ ಬೇಕು ಎಂದು ಆಗ್ರಹಿಸಿದರು. ಇ-ಸ್ವತ್ತು ವಿತರಣೆಯನ್ನು ಹಿಂದಿನ ಮಾದರಿಯಲ್ಲಿ ವಿತರಿಸಬೇಕು. ಜೊತೆಗೆ, ಎಲ್ಲ ಮಾದರಿಯ ನಮೂನೆಯನ್ನು ಹಳೇಯ ಮಾದರಿ ಯಲ್ಲಿ ವಿತರಿಸಬೇಕು ಎಂದು ತಿಳಿಸಿದರು. ಇದಕ್ಕೆ ಸದಸ್ಯರೆಲ್ಲ ಧ್ವನಿಗೂಡಿಸಿದರು. ಬಳಿಕ ಸಭೆಯಲ್ಲಿ ನಮೂನೆಯನ್ನು ಹಳೇ ಮಾದರಿಯಲ್ಲಿ ವಿತರಿಸುವಂತೆ ಅಂಗೀಕರಿ ಸಲಾಯಿತು. ಸದಸ್ಯ ಶಿವಣ್ಣ ಮಾತನಾಡಿ, ಪುರಸಭೆ ಯಾವುದೇ ಕೆಲಸಗಳು ಆಗು ತ್ತಿಲ್ಲ. ಲಂಚಕೊಟ್ಟರೆ ಮಾತ್ರ ಕೆಲಸವಾ ಗುತ್ತಿದೆ ಎಂದು ಮುಖ್ಯಾಧಿಕಾರಿ ಕುಮಾರ್ ಅವರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡರು.

ಸದಸ್ಯರಾದ ಪ್ರವೀಣ್ ಮಾತನಾಡಿ, ಕುಡಿಯುವ ನೀರು ಕಲುಷಿತವಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ಪುರಸಭಾ ಉಪಾಧ್ಯಕ್ಷೆ ಪಾರ್ವತಿ, ಸ್ಥಾಯಿ ಸಮಿತಿ ಅಧ್ಯಕ್ಷೆ ರಾಧಾಗೋವಿಂದ ಸೇರಿದಂತೆ ಸದಸ್ಯರು ಮತ್ತು ಅಧಿಕಾರಿ ಗಳು ಹಾಜರಿದ್ದರು.

Translate »