-ಹೈದರಾಬಾದ್‍ಗೆ ಪ್ರಯಾಣ ಬೆಳೆಸಿದ್ದ ಟೆಕ್ಕಿ
-ಸಹ ಪ್ರಯಾಣಿಕರ ಮಾಹಿತಿ ಸಂಗ್ರಹಕ್ಕೆ ಮುಂದಾದ ಸರ್ಕಾರ
ಹೈದರಾಬಾದ್, ಮಾ.2- ತೆಲಂಗಾಣದ ಇಬ್ಬರಲ್ಲಿ ಬೆಂಗಳೂರು ಮೂಲದ ಟೆಕ್ಕಿ ಕೊರೋನಾ ವೈರಸ್‍ಗೆ ತುತ್ತಾಗಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಟೆಕ್ಕಿಗೆ ಕೊರೋನಾ ವೈರಸ್‍ಗೆ ಒಳಗಾಗಿರೋದು ದೃಢಪಟ್ಟಿದೆ.
ಕೊರೋನಾ ವೈರಸ್ ಗೆ ತುತ್ತಾಗಿರುವ ಟೆಕ್ಕಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತೆಲಂಗಾಣ ಆರೋಗ್ಯ ಸಚಿವರು ಖಚಿತಪಡಿಸಿದ್ದಾರೆ. ಕೊರೋನಾ ಸೋಂಕಿತ ಟೆಕ್ಕಿ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಹೈದರಾಬಾದ್‍ಗೆ ಪ್ರಯಾಣ ಬೆಳೆಸಿದ್ದನು. ಹಾಗಾಗಿ ಟೆಕ್ಕಿ ಪ್ರಯಾಣ ಬೆಳೆಸಿದ ಬಸ್‍ನಲ್ಲಿಯ ಪ್ರಯಾಣಿಕರ ಮಾಹಿತಿಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಹೈದರಾಬಾದ್ ನಗರದ ಮಹೀಂದ್ರ ಹಿಲ್ಸ್‍ನಲ್ಲಿ ವಾಸವಾಗಿದ್ದ ಟೆಕ್ಕಿಗೆ ಮೊದಲು ಅಪೆÇೀಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಾಂಧಿ ಆಸ್ಪತ್ರೆಗೆ ರೆಫೆರ್ ಮಾಡಲಾಗಿತ್ತು. ಪುಣೆ ಲ್ಯಾಬ್ ನಿಂದ ಬಂದ ವರದಿಯಲ್ಲಿಯೂ ಟೆಕ್ಕಿ ಕೊರೋನ ವೈರಸ್ ಗೆ ತುತ್ತಾಗಿರುವುದು ಖಚಿತವಾಗಿದೆ. ಕಳೆದ ಎರಡು ದಿನಗಳಿಂದ ಟೆಕ್ಕಿ ಸುಮಾರು 80 ಜನರೊಂದಿಗೆ ಸಂಪರ್ಕದಲ್ಲಿದ್ದನು. ಬಸ್‍ನಲ್ಲಿ ಸಹ ಪ್ರಯಾಣಿಕರು, ಕುಟುಂಬಸ್ಥರು, ವೈದ್ಯರು ಮತ್ತು ಅಪೆÇೀಲೋ ಆಸ್ಪತ್ರೆಯ ಸಿಬ್ಬಂದಿ ಜೊತೆ ಸಂಪರ್ಕದಲ್ಲಿದ್ದನು. ಎಲ್ಲರ ಮೇಲೆ ನಿಗಾ ಇರಿಸಲಾಗಿದೆ. ಈ ಸಂಬಂಧ ಟೆಕ್ಕಿ ಕೆಲಸ ಮಾಡುತ್ತಿರುವ ಕಂಪನಿ ಮತ್ತು ಆತ ಪ್ರಯಾಣ ಬೆಳೆಸಿದ ಬಸ್ ಮಾಲೀಕರಿಗೆ ಈ ಬಗ್ಗೆ ಮಾಹಿತಿ ರವಾನಿಸಲಾಗಿದೆ ಎಂದು ತೆಲಂಗಾಣ ಆರೋಗ್ಯ ಸಚಿವ ರಾಜೇಂದ್ರ ಹೇಳಿದ್ದಾರೆ.