ಜಾತಿ ಬೀಜ ಬಿತ್ತುವ ಭ್ರಷ್ಟ ಸಿಎಂ ಸಿದ್ದರಾಮಯ್ಯ: ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ
ಹಾಸನ

ಜಾತಿ ಬೀಜ ಬಿತ್ತುವ ಭ್ರಷ್ಟ ಸಿಎಂ ಸಿದ್ದರಾಮಯ್ಯ: ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ

April 28, 2018

ಹಾಸನ: ಜಾತಿ ಬೀಜ ಬಿತ್ತುವ ಭ್ರಷ್ಟ ಮುಖ್ಯಮಂತ್ರಿಯನ್ನು ಹಿಂದೆಂದು ನಾನು ಕಂಡಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ತಾಲೂಕಿನ ಸಾಲಗಾಮೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಭೆ ಉದ್ಘಾಟಿಸಿ ಮಾತ ನಾಡಿದ ಅವರು, ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಸ್ವಾರ್ಥದಿಂದ ಹಗಲು ದರೋಡೆ ಮಾಡಿರುವುದಲ್ಲದೆ, ವೀರಶೈವ ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿ ದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯನಂತಹ ಜಾತಿ ಬೀಜ ಬಿತ್ತುವ ಭ್ರಷ್ಟನನ್ನು ನಾನು ಎಲ್ಲೂ ಕಂಡಿಲ್ಲ ಎಂದು ಆಕ್ರೋಶವ್ಯಕ್ತ ಪಡಿಸಿದರು. ಸಿದ್ದರಾಮಯ್ಯರ ಅಧಿಕಾರ ಅವಧಿಯಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಲಿತರ ಮೇಲೆ ದೌರ್ಜನ್ಯ ನಡೆದಿದೆ. ಸಿದ್ದರಾಮಯ್ಯ ರಾಜ್ಯ ವನ್ನೇ ಲೂಟಿ ಮಾಡಿದ್ದಾರೆ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಸಿದ್ದರಾಮಯ್ಯ. ಈ ಬಾರಿ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕ್ಷೇತ್ರದಲ್ಲೂ ಸೋತು ಮನೆಗೆ ಹೋಗುತ್ತಾರೆ ಎಂದು ಛೇಡಿಸಿದರು.

2_Page

ಜಿಲ್ಲೆಯ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಮ್ ಜೆ.ಗೌಡ 20 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ಪ್ರೀತಂ ನಾಮಪತ್ರ ಸಲ್ಲಿಸುವ ವೇಳೆ ಸೇರಿದ್ದ ಬೃಹತ್ ಜನ ಸ್ತೋಮವೇ ಇದಕ್ಕೆ ಸಾಕ್ಷಿ ಎಂದು ಬಣ ್ಣಸಿದ ಅವರು, ಮೇ. 18ರಂದು ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಮತ್ತೆ ಇದೇ ಸ್ಥಳಕ್ಕೆ ಬಂದು ನಿಮ್ಮೊಡನೆ ಸೇರಿ ಸಂಭ್ರಮಾಚರಣೆ ಮಾಡುತ್ತೇನೆ ಎಂದು ಕಾರ್ಯಕರ್ತ ರನ್ನು ಹುರಿದುಂಬಿಸಿದರು.

ನಾನು ಅಧಿಕಾರಕ್ಕೆ ಬಂದರೆ ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೊಳ್ಳುವುದಾಗಿ ಹೇಳಿದ ಅವರು, ಸಾಲಗಾಮೆಯನ್ನು ಮಾದರಿ ಹೋಬಳಿಯನ್ನಾಗಿ ಮಾಡುವ ಭರವಸೆ ನೀಡಿದರು. ಹಾಗೆಯೇ ಈ ಭಾಗದ ಸೀಗೆ ಗುಡ್ಡದ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಆಶ್ವಾಸನೆ ನೀಡಿದರು.
ಅಭ್ಯರ್ಥಿ ಪ್ರೀತಮ್ ಜೆ.ಗೌಡ ಮಾತ ನಾಡಿ, ರೈತರು ಸ್ವಾವಲಂಬಿಗಳು, ಜೀವನ ಮಾಡಲು ಭೂಮಿ ಬೇಕು. ಬೆಳೆ ಬೆಳೆಯಲು ನೀರು ಅವಶ್ಯಕ. ಅದಕ್ಕಾಗಿ ಸಾಲಗಾಮೆ ಹೋಬಳಿ ಸುತ್ತ ಇರುವ 46 ಕೆರೆಗಳಿಗೆ ನೀರು ತುಂಬಿಸಬೇಕೆಂಬ ಕೂಗು ದೊಡ್ಡ ನಾಯಕ ರಿಗೆ ಕೇಳಿಸುತ್ತಿಲ್ಲ ಎಂದು ದೂರಿದರು.
ಕಾರ್ಯಕ್ರಮಕ್ಕೂ ಮೊದಲು ಬಿಎಸ್‍ವೈ ಬರುವಿಕೆಗಾಗಿ ಬೂವನಹಳ್ಳಿ ಮತ್ತು ದಾಸರ ಕೊಪ್ಪಲು ಭಾಗದ ರಸ್ತೆಯಲ್ಲಿ ಕಾದಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಜೈಕಾರ ಹಾಕಿದರು. ಶಾಲು ಹೊದಿಸಿ, ಹಾರ ಹಾಕಿ ಸ್ವಾಗತಿಸಿದರು. ಹಾಸನ ಗ್ರಾಮಾಂ ತರ ಬಿಜೆಪಿ ಅಧ್ಯಕ್ಷ ಅಗಿಲೆ ಯೋಗಿಶ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಮಾಜಿ ಶಾಸಕ ಬಿ.ವಿ. ಕರೀಗೌಡ, ಹಿರಿಯ ಮುಖಂಡರು ಭುವನಾಕ್ಷ, ಲಲಾಟ್ ಮೂರ್ತಿ, ಹೆಚ್. ಎನ್. ನಾಗೇಶ್, ಪುಟ್ಟಸ್ವಾಮಿ, ಅಮಿತ್ ಶೆಟ್ಟಿ, ಸೋಮಶೇಖರ್, ಸಾದಿಕ್, ಲೋಹಿತ್ ಕುಂದೂರು, ಈಶ್ವರಪ್ಪ, ಪ್ರಸನ್ನಕುಮಾರ್ ಇತರರಿದ್ದರು.

Translate »