ಚಾಮರಾಜನಗರ: ಶ್ರೀಕೃಷ್ಣ ಪ್ರತಿಷ್ಠಾನದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಾಮಿ ಹಾಗೂ ರಾಧಾಷ್ಠಮಿಯ ಅಂಗವಾಗಿ ಕೆಸರುಗದ್ದೆ ಓಟ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ನಗರದ ತೆರೆದ ವಿಶ್ವವಿದ್ಯಾಲಯದ ಹಿಂಭಾಗದಲ್ಲಿರುವ ಚಿಕ್ಕಶೆಟ್ಟಿ ಎಂಬುವ ವರ ಜಮೀನಿನಲ್ಲಿ ಆಯೋಜಿಸಲಾಗಿದ್ದ ಕೆಸರುಗದ್ದೆ ಓಟದ ಸ್ಪರ್ಧೆಯ ಉದ್ಘಾಟನೆ ಯನ್ನು ಶ್ರೀಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸೋಮ ಶೇಖರ್ ಬಿಸಲ್ವಾಡಿ ಚಾಲನೆ ನೀಡಿದರು.
ಕೆಸರು ಗದ್ದೆ ಓಟದಲ್ಲಿ ಸುಮಾರು 30ಕ್ಕೂ ಹೆಚ್ಚು ಬಾಲಕರು ಕೆಸರು ಗದ್ದೆ ಓಟ, ಕಬಡ್ಡಿ ಹಾಗೂ ಕಾಯಿ ಹುಡುಕುವ ಆಟವನ್ನು ಆಡುವ ಮೂಲಕ ಕಾರ್ಯಕ್ರಮಕ್ಕೆ ರಂಗು ತಂದರು.
ಬಳಿಕ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಮಕ್ಕಳು ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ ಆತ್ಮ ಬಲವನ್ನು, ಸಂತೋಷದ ಸ್ಫೂರ್ತಿಯನ್ನು ಹಾಗೂ ಆನಂದವನ್ನು ಅನುಭವಿಸಿಕೊಂಡು ಚೆನ್ನಾಗಿ ಬಾಳಲಿ ಎಂದು ಹಾರೈಸಿದರು.
ಇಂದಿನ ಜಾಗತಿಕ ಪ್ರಪಂಚದಲ್ಲಿ ಯುವ ಸಮೂಹ ಮೊಬೈಲ್ ಪ್ರಪಂಚ ದಲ್ಲಿ ಮುಳುಗಿ ಹೋಗುವ ಮೂಲಕ ದೇಶಿಯ ಕ್ರೀಡೆಗಳನ್ನು ಮರೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಷ್ಠಾನದ ವತಿಯಿಂದ ಕೆಸರುಗದ್ದೆ ಓಟ ಸೇರಿದಂತೆ ಹಲವು ದೇಶಿಯ ಆಟಗಳನ್ನು ಆಯೋಜಿಸ ಲಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿ ಷತ್ತನ ಮಾಜಿ ಅಧ್ಯಕ್ಷ ಸೋಮಶೇಖರ್ ಬಿಸಲ್ವಾಡಿ ಮಾತನಾಡಿ, ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡುವ ಮೂಲಕ ಯುವಕರಲ್ಲಿ ಆತ್ಮಶಕ್ತಿ ಹೆಚ್ಚಿಸುತ್ತಿರುವ ಶ್ರೀಕೃಷ್ಣ ಪ್ರತಿಷ್ಠಾನದ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದರು.
ಸಂಸ್ಕøತಪಾಠ ಶಾಲೆಯ ಶಿಕ್ಷಕ ಪ್ರದೀಪ್ ದೀಕ್ಷಿತ್ ಮಾತನಾಡಿ, ಕೆಸರು ಓಟದಿಂದ ಮಕ್ಕಳಲ್ಲಿ ಉತ್ಸಾಹ ಇಮ್ಮಡಿ ಸಿತ್ತು. ಇಂತಹ ಒಂದು ಪುರಾತನ ಆಟಗಳು ಮಕ್ಕಳಲ್ಲಿ ನಮ್ಮ ಪುರಾತನ ವಾದ ಸಂಸ್ಕøತಿಯನ್ನು ಹೆಚ್ಚಿಸಿದಂತಾಗು ತ್ತದೆ. ಈ ರೀತಿಯ ಕಾರ್ಯಕ್ರಮಗಳು ಪ್ರತಿ ವರ್ಷ ಆಚರಿಸಿದರೆ ಮಕ್ಕಳಲ್ಲಿ ಸಂತಸದ ಸ್ಫೂರ್ತಿಯನ್ನು ಹೆಚ್ಚಿಸಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈ.ಆರ್. ಮಹೇಶ್, ಅನಂತ್‍ಪ್ರಸಾದ್, ಚನ್ನಶೆಟ್ಟಿ, ಶಂಕರಶೆಟ್ಟಿ, ನಾಗಶೆಟ್ಟಿ, ಚಿನ್ನಸ್ವಾಮಿ, ಮುತ್ತುರಾಜು, ಮುದ್ದುಮಾದ, ಮಹದೇವ ಹಾಜರಿದ್ದರು.