ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಬಿರುಕು
ಮೈಸೂರು

ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಬಿರುಕು

July 5, 2019

ಮಡಿಕೇರಿ, ಜು.4- ಕೊಡಗು ಜಿಲ್ಲೆ ಯಲ್ಲಿ ಇಂದಿನಿಂದ ಮುಂಗಾರು ಚುರುಕಾ ಗಿದ್ದು, ಮಡಿಕೇರಿ-ಮಂಗಳೂರು ರಸ್ತೆ ಯಲ್ಲಿ ಬಿರುಕು ಕಾಣಿಸಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ 275ರ ತಾಳತ್ತಮನೆ-ಕಾಟಕೇರಿ ನಡುವೆ ಈ ಬಿರುಕು ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಬಂದ್ ಆಗುವ ಎಲ್ಲಾ ಮುನ್ಸೂಚನೆ ಗಳು ಈಗಾಗಲೇ ಕಂಡು ಬಂದಿವೆ.

ಹೆದ್ದಾರಿ ಕುಸಿತವಾದ ಸ್ಥಳದಲ್ಲಿ ಮುಂಜಾ ಗ್ರತಾ ಕ್ರಮವಾಗಿ ಮಡಿಕೇರಿ ಗ್ರಾಮಾಂತರ ಪೊಲೀಸರು ಬ್ಯಾರಿಕೇಡ್‍ಗಳನ್ನು ಅಳವಡಿಸಿ ಸಂಭಾವ್ಯ ಅಪಾಯದ ಬಗ್ಗೆ ಎಚ್ಚರಿಕೆ ನೀಡಿ ದ್ದಾರೆ. ಮಾತ್ರವಲ್ಲದೇ ಈ ಕುರಿತು ಮಂಗಳೂ ರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರಕ್ಕೂ ಮಾಹಿತಿ ನೀಡಲಾಗಿದ್ದು, ನಾಳೆ ಹೆದ್ದಾರಿ ಪ್ರಾಧಿಕಾರದ ಅಧಿ ಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಲಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮತ್ತು ಅಭಿಯಂತರರು ನೀಡುವ ಸಲಹೆ ಆಧರಿಸಿ ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಲಿದೆ.

ಇದೀಗ ಆರಿದ್ರ ಮಳೆಯ ಕೊನೆಯ ಅವಧಿಯಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಪ್ರಾರಂಭದಲ್ಲೇ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಸ್ಥಿತಿಗೆ ತಲುಪಿರು ವುದು ಸಹಜವಾಗಿಯೇ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಮಳೆಗಾಲ ಪ್ರಾರಂಭದಲ್ಲೇ ಜಿಲ್ಲಾಡÀಳಿತ ಮಡಿಕೇರಿ-ಮಂಗಳೂರು 275 ರಾಷ್ಟ್ರೀಯ ಹೆದ್ದಾರಿಯಲ್ಲಿ 16 ಟನ್‍ಗಿಂತ ಮೇಲ್ಪಟ್ಟು ಭಾರ ಸಾಗಿಸುವ ವಾಹನ ಗಳ ಸಂಚಾರವನ್ನು ನಿರ್ಬಂಧಿಸಿದೆಯಾದರೂ, ಅಗತ್ಯ ವಸ್ತುಗಳ ಸಾಗಾಟಕ್ಕೆ ಅವಕಾಶ ಕಲ್ಪಿಸಿದೆ. ಹೀಗಿದ್ದರೂ ರಸ್ತೆಯಲ್ಲಿ ಬಿರುಕು ಮೂಡಿರುವುದು ವಾಹನ ಸವಾರರನ್ನು ಭೀತಿಗೆ ತಳ್ಳಿದೆ. ಈ ರಸ್ತೆ ಕೊಡಗು ಜಿಲ್ಲೆಯ ಪಾಲಿಗೆ ಅತೀ ಮುಖ್ಯವಾಗಿದ್ದು, ಅಗತ್ಯ ವಸ್ತುಗಳ ಪೂರೈಕೆ ಈ ಮಾರ್ಗ ಕೊಡಗು ಜಿಲ್ಲೆಗೆ ಅನಿವಾರ್ಯವೂ ಆಗಿದೆ. ಕಳೆದ ವರ್ಷದ ಮಳೆಗೆ ಈ ಮಾರ್ಗದಲ್ಲಿ ಭಾರೀ ಭೂ ಕುಸಿತವಾಗಿ, ರಸ್ತೆಯ ಒಂದು ಬದಿ ಸಂಪೂರ್ಣ ಕೊಚ್ಚಿ ಹೋಗಿತ್ತು. ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ರಸ್ತೆಯನ್ನು ಸಮಾರೋಪಾ ದಿಯಲ್ಲಿ ದುರಸ್ಥಿಪಡಿಸಿ, ಸಂಚಾರಕ್ಕೆ ಅನುವು ಮಾಡಿ ಕೊಟ್ಟಿತ್ತು. ಆದರೆ ಸ್ಯಾಂಡ್ ಬಂಡ್‍ಗಳನ್ನು ಅಳವಡಿಸಿ ತಾತ್ಕಾಲಿಕ ದುರಸ್ಥಿ ಕಾರ್ಯ ಮಾತ್ರವೇ ಮಾಡಲಾ ಗಿದ್ದು, ನೀರಿನ ಹರಿವು ಮತ್ತು ಮಳೆಗೆ ಈ ತಾತ್ಕಾಲಿಕ ದುರಸ್ಥಿ ಕಾರ್ಯ ಇದೀಗ ಕೈಕೊಡುವ ಲಕ್ಷಣಗಳು ಕಂಡು ಬಂದಿದೆ. ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರ ಕೂಡ ಜುಲೈ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಮಳೆ ಚುರುಕು ಪಡೆಯಲಿದೆ ಎಂದು ಸೂಚನೆ ನೀಡಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಸಂಪರ್ಕ ಅಸ್ತವ್ಯಸ್ತ ವಾಗಲಿದೆಯೇ ಎಂಬ ಪ್ರಶ್ನೆಯೂ ಕಾಡತೊಡಗಿದೆ.

Translate »