ಬೆಳೆ ಸಮೀಕ್ಷೆ: ರೈತರಿಂದ ಆಕ್ಷೇಪಣೆ ಆಹ್ವಾನ
ಮೈಸೂರು

ಬೆಳೆ ಸಮೀಕ್ಷೆ: ರೈತರಿಂದ ಆಕ್ಷೇಪಣೆ ಆಹ್ವಾನ

January 21, 2020

ಮೈಸೂರು, ಜ.20- ರಾಜ್ಯದಲ್ಲಿ 2017ರ ಮುಂಗಾರು ಅವಧಿಯಿಂದ ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಬಳಸಿ ಬೆಳೆ ಸಮೀಕ್ಷೆಯನ್ನು ಮಾಡಲಾಗುತ್ತದೆ.

ಮೊಬೈಲ್ ಆ್ಯಪ್ ಬಳಸಿ ಮಾಡಲಾದ ಬೆಳೆ ಸಮೀಕ್ಷೆ ಯನ್ನು ಸಂಗ್ರಹಿಸಿ ಮೇಲ್ವಿಚಾರಕರ ಮೂಲಕ ಅನುಮೋದನೆ ಮಾಡಿದ ಬೆಳೆ ಮಾಹಿತಿಯನ್ನು ಪಹಣಿಯಲ್ಲಿ ನಮೂದಿಸುವುದಲ್ಲದೆ, ಸರ್ಕಾರದ ಎಲ್ಲಾ ಯೋಜನೆಗಳಡಿ ಬಳಸುವಂತೆ ಸರ್ಕಾರಿ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ. ಆದ್ದ ರಿಂದ ರೈತರು ಬೆಳೆ ಸಮೀಕ್ಷೆಯಲ್ಲಿನ ಮಾಹಿತಿ ಬಗ್ಗೆ ತಮ್ಮ ಆಕ್ಷೇಪಣೆಗಳನ್ನು ಜ.30ರೊಳಗೆ ಸಲ್ಲಿಸಬಹುದಾಗಿದೆ.

ಆಕ್ಷೇಪಣೆ ವ್ಯಕ್ತಪಡಿಸುವ ವಿಧಾನ: ರೈತರು ತಮ್ಮ ಆಕ್ಷೇಪಣೆಗಳನ್ನು ಈಗಾಗಲೇ ಲಭ್ಯವಿರುವ ಬೆಳೆದರ್ಶಕ ಮೊಬೈಲ್ ಆ್ಯಪ್ ಮೂಲಕ ಸಲ್ಲಿಸಬಹುದು. ಬೆಳೆ ಸಮೀಕ್ಷೆ ತಂತ್ರಾಂಶ (ಛಿಡಿoಠಿ suಡಿveಥಿ ತಿeb ಚಿಠಿಠಿಟiಛಿಚಿಣioಟಿ) ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅದನ್ನು ಬಳಸಿ ಆಕ್ಷೇಪಣೆ ಸಲ್ಲಿಸಬಹುದು. ಅಲ್ಲದೆ ರೈತರು ಲಿಖಿತವಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಸಲ್ಲಿಸಬಹುದು. ಲಿಖಿತವಾಗಿ ಸಲ್ಲಿಸ ಲಾಗುವ ಎಲ್ಲಾ ಆಕ್ಷೇಪಣೆಗಳನ್ನು ರೈತ ಸಂಪರ್ಕ ಕೇಂದ್ರ ಅಧಿಕಾರಿಗಳು ಬೆಳೆ ಸಮೀಕ್ಷೆ ತಂತ್ರಾಂಶದ ಮೂಲಕ ಎರಡು ದಿನಗಳೊಳಗೆ ಆಕ್ಷೇಪಣೆ ದಾಖಲಿಸುವರು.

ಈ ರೀತಿಯಾಗಿ ದಾಖಲಾಗುವ ಎಲ್ಲಾ ಆಕ್ಷೇಪಣೆಗಳನ್ನು ಸಂಬಂಧಪಟ್ಟ ಮೇಲ್ವಿ ಚಾರಕರಿಂದ ತಂತ್ರಾಂಶದಲ್ಲಿ ಗುರುತಿಸಲಾಗುತ್ತದೆ. ನಂತರ ಆಕ್ಷೇಪಣೆಗಳನ್ನು ಪರಿಶೀಲಿಸಿ ಅವುಗಳನ್ನು ಏಳು ದಿನಗಳೊಳಗೆ ಇತ್ಯರ್ಥಪಡಿಸುವರು. ಮೇಲ್ವಿಚಾರಕರು ಸ್ವೀಕೃತವಾಗಿರುವ ಪ್ರತಿಯೊಂದು ಆಕ್ಷೇಪಣೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಈಗಾಗಲೇ ಬೆಳೆ ಸಮೀಕ್ಷೆ ದತ್ತಾಂಶದಲ್ಲಿ ಲಭ್ಯವಿರುವ ಬೆಳೆ ಮಾಹಿತಿಯೊಂದಿಗೆ ಹೋಲಿಸಿ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುವರು. ಬೆಳೆ ಸಮೀಕ್ಷೆ ದತ್ತಾಂಶದಲ್ಲಿ ಲಭ್ಯವಿರುವ ಬೆಳೆ ಮಾಹಿತಿಯ ಆಧಾರದ ಮೇರೆಗೆ ಸರಿಪಡಿಸಲು ಸಾಧ್ಯವಿಲ್ಲದ ಸನ್ನಿವೇಶದಲ್ಲಿ ಮೇಲ್ವಿಚಾರಕರೇ ಖುದ್ದಾಗಿ ಮಹಜರು ದಾಖಲಿಸುವ ಮೂಲಕ ಆಕ್ಷೇಪಣೆಗಳನ್ನು ವಿಲೇವಾರಿ ಮಾಡುವರು. ರೈತರ ಆಕ್ಷೇಪಣೆಗಳು ಬಗೆಹರಿಸಿದ ನಂತರ ಸಂಬಂಧಪಟ್ಟ ರೈತರಿಗೆ ಸಂದೇಶ ರವಾನಿಸಲಾಗುವುದು.

Translate »