ಮೈಸೂರು: ಬಿರು ಗಾಳಿ ಸಹಿತ ಕಳೆದ ರಾತ್ರಿ ಸುರಿದ ಧಾರಾ ಕಾರ ಮಳೆಗೆ ಮೈಸೂರು ತಾಲೂಕಿನ ಹಲವು ಗ್ರಾಮಗಳಲ್ಲಿ ನೂರಾರು ಮರಗಳು ಧರೆ ಗುರುಳಿದ್ದು, ಕೋಳಿ ಫಾರಂಗಳು ಹಾಗೂ ಮನೆಗಳಿಗೆ ಬಾರೀ ಹಾನಿಯುಂಟಾಗಿದೆ.
ಗುಡುಗು, ಸಿಡಿಲು ಹಾಗೂ ಬಿರುಗಾಳಿ ಯೊಂದಿಗೆ ಬುಧವಾರ ಸಂಜೆ ಆರಂಭ ವಾದ ಮಳೆಗೆ ಮೈಸೂರು ತಾಲೂಕಿನ ಮೆಲ್ಲಹಳ್ಳಿ, ಮೂಡಲಹುಂಡಿ, ಕೆಂಪೇ ಗೌಡನಹುಂಡಿ, ವರಕೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವಾರು ಮರಗಳು ಉರುಳಿ ಬಿದ್ದಿವೆ. ಹೊಲ, ಗದ್ದೆ ಗಳಲ್ಲಿ ಬೆಳೆದಿದ್ದ ಮರಗಳು ಮಾತ್ರವಲ್ಲದೆ, ರಸ್ತೆ ಬದಿ, ಮನೆಗಳ ಮುಂದೆ, ಹಿಂದೆ ಬೆಳೆಸ ಲಾಗಿದ್ದ ಮರಗಳು ಧರೆಗುರುಳಿವೆ. ಬಾರೀ ಗಾಳಿಗೆ ಹಲವಾರು ಮನೆಗಳ ಮೇಲ್ಛಾವಣ ಗಳು ಹಾರಿ ಹೋಗಿವೆ. ಅದರಲ್ಲಿಯೂ ಹಂಚಿನ ಮನೆಗಳಿಗೆ ಹಾನಿಯಾಗಿದೆ. ಕಲ್ನಾರ್ ಶೀಟ್ ನಿಂದ ನಿರ್ಮಿಸಿದ್ದ ಮೇಲ್ಛಾವಣ ಛಿದ್ರವಾ ಗಿವೆ. ಅಲ್ಲದೆ ಅನೇಕ ಮನೆಗಳ ಕಿಟಕಿಯ ಗಾಜುಗಳು ಪುಡಿಪುಡಿಯಾಗಿವೆ.
ಇದರೊಂದಿಗೆ ಗ್ರಾಮದ ಹೊರ ವಲಯ ದಲ್ಲಿ ನಿರ್ಮಿಸಲಾಗಿರುವ ಕೋಳಿ ಫಾರಂ ಗಳಿಗೂ ಹಾನಿಯಾಗಿದೆ. ಕೆಂಪೇಗೌಡನ ಹುಂಡಿ ನಂಜೇಗೌಡ, ಮಹೇಶ್ ಎಂಬು ವರಿಗೆ ಸೇರಿದ ಕೋಳಿ ಫಾರಂ ಸಂಪೂರ್ಣ ಹಾನಿಗೀಡಾಗಿದ್ದರೆ, ಮೂಡಲಹುಂಡಿ ಗ್ರಾಮದ ನಿಂಗರಾಜು ಎಂಬುವರಿಗೆ ಸೇರಿದ ಕೋಳಿ ಫಾರಂನ ಒಂದು ಭಾಗದ ಕಲ್ನಾರ್ ಶೀಟ್ ಹಾಗೂ ನಂಜೇಗೌಡ ಎಂಬುವರಿಗೆ ಸೇರಿದ ಫಾರಂನ ಒಂದು ಭಾಗದಲ್ಲಿ ಹಂಚು ಗಳು ಹಾರಿ ಹೋಗಿವೆ. ಮೂಡಲಹುಂಡಿ ಯಲ್ಲಿ ಚಿಕ್ಕಣ್ಣ, ಮಹೇಶ್, ಬೊಕ್ಕಳ್ಳಿ ಶಿವ ಮಲ್ಲೇಗೌಡರ ಮನೆಯ ಮೇಲ್ಛಾವಣ ಹಾರಿ ಹೋಗಿದೆ. ಕೆಂಪೇಗೌಡನಹುಂಡಿ ಯಲ್ಲಿ ಶಿವಣ್ಣ ಮತ್ತು ಮಾರೇಗೌಡ ಎಂಬುವರ ಮನೆಗೂ ಹಾನಿಯಾಗಿದೆ.
ಪರಿಹಾರ: ಕಳೆದ ರಾತ್ರಿ ಬಿರುಗಾಳಿಗೆ ಮನೆ ಹಾಗೂ ಕೋಳಿ ಫಾರಂಗಳಿಗೆ ಹಾನಿಯಾಗಿ ನಷ್ಟ ಉಂಟಾಗಿದೆ. ಈ ಎಲ್ಲಾ ಗ್ರಾಮಗಳಲ್ಲಿ ಬಡ ಹಾಗೂ ಮದ್ಯಮ ವರ್ಗದ ಜನರೇ ವಾಸಿಸುವುದರಿಂದ ಸಾಲ ಮಾಡಿ ಮನೆ ನಿರ್ವ ಹಣೆ ಮಾಡುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಳೆ ಮತ್ತು ಗಾಳಿ ಯಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಮೂಡಲಹುಂಡಿಯಿಂದ ವರಕೋಡು ಗ್ರಾಮಕ್ಕೆ ತೆರಳುವ ರಸ್ತೆ ಬದಿಯಲ್ಲಿದ್ದ ಆಲದ ಮರವೊಂದು ಬುಡ ಸಮೇತ ವಿದ್ಯುತ್ ಕಂಬದ ಮೇಲೆ ಒರಗಿದ್ದರಿಂದ ಒಂದಕ್ಕೊಂದು ತಂತಿ ತಗುಲಿ ಸುತ್ತಮುತ್ತಲಿನ ಗ್ರಾಮಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾ ಗಿದೆ. ರಸ್ತೆಗೆ ಅಡ್ಡಲಾಗಿ ಮರ ಉರುಳಿದ್ದ ರಿಂದ ಸಾರಿಗೆ ಬಸ್ ಸೇರಿದಂತೆ ವಾಹನ ಗಳು ಬದಲಿ ಮಾರ್ಗದಲ್ಲಿ ಸಂಚರಿಸಿದವು.