ಮುಕ್ತ ವಿವಿ ಕೇರಳ ವಿದ್ಯಾರ್ಥಿಗಳಿಗೆ ಪರಿಹಾರಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ
ಮೈಸೂರು

ಮುಕ್ತ ವಿವಿ ಕೇರಳ ವಿದ್ಯಾರ್ಥಿಗಳಿಗೆ ಪರಿಹಾರಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ

May 4, 2018

ಮೈಸೂರು: ವಿವಿಧ ಶೈಕ್ಷ ಣ ಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದರಿಂದ ಕೇರಳ ವಿದ್ಯಾರ್ಥಿಗಳಿಗೆ ತಲಾ 3 ಲಕ್ಷ ರೂ. ಪರಿಹಾರ ಕೊಡಬೇಕೆಂಬ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

ನ್ಯಾಯಮೂರ್ತಿಗಳಾದ ಎಸ್.ಎ.ಬೊಡ್ಡೆ ಮತ್ತು ಎಲ್.ನಾಗೇಶ್ವರ ರಾವ್ ಒಳಗೊಂಡ ಪೀಠವು ಕೇರಳದಲ್ಲಿ ಅಧ್ಯಯನ ಕೇಂದ್ರ ನಡೆಸಲು ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU) ದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಬ್ರೈನೆಟ್ ಮತ್ತು ಇತರರಿಗೆ ನೋಟೀಸ್ ನೀಡಿದೆ.

2017ರ ನವೆಂಬರ್ 22ರಂದು ಮುಕ್ತ ವಿವಿ ಸಲ್ಲಿ ಸಿದ್ದ ವಿಶೇಷ ರಿಟ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠವು ಕೇರಳ ಹೈಕೋರ್ಟ್ ನೀಡಿದ್ದ ವಿದ್ಯಾರ್ಥಿಗಳಿಗೆ ಪರಿಹಾರ ನೀಡಬೇಕೆಂಬ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
2013ರ ಜೂನ್ 26ರಂದು ಯುಜಿಸಿ, ಕೋರ್ಸ್‍ಗಳನ್ನು ಮುಂದುವರಿಸಬಾರದೆಂದು ಸಾರ್ವ ಜನಿಕ ಪ್ರಕಟಣೆ ನೀಡಿತ್ತು. ನಂತರ 2013ರ ಆಗಸ್ಟ್ 23ರಂದು ಸುತ್ತೋಲೆಯನ್ನು ಹೊರಡಿಸಿ ದ್ದರಿಂದ ತಾವು ಅವರ ಆದೇಶ ಪಾಲನೆ ಮಾಡ ಬೇಕಾದ ಕಾರಣ ಕೋರ್ಸ್‍ಗಳನ್ನು ಮುಂದುವರಿ ಸಲಾಗಲಿಲ್ಲ ಎಂದು ಮುಕ್ತ ವಿವಿ ಪರ ವಕೀಲ ರಾದ ಹುಜೇಫ್ ಅಹಮದಿ ಮತ್ತು ಶೈಲೇಶ್ ಮಡಿಯಾಳ ಅವರು ಸುಪ್ರೀಂಕೋರ್ಟ್‍ನಲ್ಲಿ ವಾದ ಮಂಡಿಸಿದ್ದರು.

ರಿಟ್ ಪಿಟೀಷನ್ ಹಾಕಿದ್ದ ವಿದ್ಯಾರ್ಥಿಗಳ ಪರ ಆದೇಶ ಹೊರಡಿಸಿದ್ದ ಕೇರಳ ಹೈಕೋರ್ಟ್ ಕೋರ್ಸ್‍ಗಳನ್ನು ಪೂರೈಸಲು ಸೂಕ್ತ ವ್ಯವಸ್ಥೆ ಮಾಡದಿದ್ದಲ್ಲಿ ಪ್ರತೀ ವಿದ್ಯಾರ್ಥಿಗೆ 3 ಲಕ್ಷ ರೂ. ಗಳಂತೆ ಪರಿಹಾರ ನೀಡಬೇಕೆಂದು ಮುಕ್ತ ವಿವಿಗೆ ನಿರ್ದೇಶನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಶ್ವವಿದ್ಯಾನಿಲಯದ ಕಾಯ್ದೆಯಡಿ ಅಧ್ಯಯನ ಕೇಂದ್ರ ನಡೆಸಲು ಅನುಮತಿ ನೀಡಿದ್ದುದು ಸರಿಯೆ. ಆದರೆ ಅಂತಿಮವಾಗಿ ಯುಜಿಸಿ ನಿರ್ದೇ ಶನವನ್ನು ಸಹ ಪಾಲಿಸಬೇಕಾದುದು ಅಗತ್ಯ ವಾಗಿದೆ ಎಂದು ವಾದ ಮಾಡಿದ್ದ ಮುಕ್ತ ವಿವಿಯು, 2014ರ ಆಗಸ್ಟ್ 30ರೊಳಗೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಾವು ಸಿದ್ದರಿದ್ದೇವೆ ಎಂದು ಸಮಜಾಯಿಷಿ ನೀಡಿತ್ತು.

ನಮಗಿದು ಬಿಗ್ ರಿಲೀಫ್
ವಿದ್ಯಾರ್ಥಿ ಗಳಿಗೆ ಪರಿಹಾರ ಕೊಡ ಬೇಕೆಂಬ ಕೇರಳ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ಯಾಜ್ಞೆ ನೀಡಿರುವುದು ನಮಗೆ ಬಿಗ್ ರಿಲೀಫ್ ಆಗಿದೆ ಎಂದು ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲ ಪತಿ ಪ್ರೊ. ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ.

`ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಅವರು, ವಿದ್ಯಾರ್ಥಿಗಳು ಪರೀಕ್ಷೆ ನಡೆಸಿ ಎಂದು ಮನವಿ ಮಾಡಿದ್ದರೇ ಹೊರತು, ಪರಿಹಾರ ಕೊಡಿಸಿ ಎಂದು ಕೇಳಿರಲಿಲ್ಲ. ಆದರೆ ಕೇರಳ ಹೈಕೋರ್ಟ್ ಏಕ ಪಕ್ಷೀಯವಾಗಿ ಪ್ರತೀ ವಿದ್ಯಾರ್ಥಿಗೆ 3 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶ ನೀಡಿತ್ತು. ಅದರ ವಿರುದ್ಧ ನಾವು ಸುಪ್ರೀಂಕೋರ್ಟ್‍ನಲ್ಲಿ ವಿಶೇಷ ರಿಟ್ ಪಿಟಿಷನ್ ಸಲ್ಲಿಸಿ, ತಾಂತ್ರಿಕ ಕೋರ್ಸ್ ನಡೆಸಬಾರದೆಂದು ಯುಜಿಸಿ ಹೇಳಿದ್ದ ರಿಂದ ಕೋರ್ಸ್ ಮುಂದುವರಿಸಲಾಗಲಿಲ್ಲ ಎಂಬುದರ ಬಗ್ಗೆ ನಮ್ಮ ವಕೀಲರು ವಾದ ಮಂಡಿಸಿದ್ದರು. ವಾದ ಆಲಿಸಿದ ನ್ಯಾಯಾ ಲಯವು ಕೇರಳ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ ಎಂದು ಅವರು ತಿಳಿಸಿದರು. ಕೇರಳದಲ್ಲಿ ಕಡಿಮೆ ವಿದ್ಯಾರ್ಥಿಗಳಿರಬಹುದು. ಆದರೆ ಅದೇ ಆದೇಶವನ್ನೇ ಬಳಸಿಕೊಂಡು ಮುಕ್ತ ವಿವಿಯ ಎಲ್ಲಾ ವಿದ್ಯಾರ್ಥಿಗಳೂ ಪರಿಹಾರ ಕ್ಲೇಮು ಮಾಡಿದಲ್ಲಿ ಏನು ಮಾಡಬೇಕಾಗಿತ್ತು ಎಂದು ಪ್ರೊ. ಡಿ.ಶಿವಲಿಂಗಯ್ಯ ಅವರು ತಿಳಿಸಿದರು.

Translate »