ಗ್ರಾಮೀಣ ಜನರಿಗೆ `ದಸರಾ ದರ್ಶನ’
ಮೈಸೂರು, ಮೈಸೂರು ದಸರಾ

ಗ್ರಾಮೀಣ ಜನರಿಗೆ `ದಸರಾ ದರ್ಶನ’

October 16, 2018

ಮೈಸೂರು: ಗ್ರಾಮೀಣ ಮಹಿಳೆಯರು, ವೃದ್ಧರು ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೆ ದಸರಾ ದರ್ಶನಕ್ಕೆ ಅನುವಾಗುವಂತೆ ಕನಿಷ್ಠ ದರದಲ್ಲಿ ಬಸ್ ಸೌಕರ್ಯಕ್ಕೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೋಮವಾರ ಮೈಸೂರಲ್ಲಿ ಚಾಲನೆ ನೀಡಿದರು. ಇದ ರೊಂದಿಗೆ ಚಾಮುಂಡಿಬೆಟ್ಟ, ಮೃಗಾ ಲಯ, ಅರಮನೆ ತೋರಿಸಿ ಮತ್ತೆ ಊರಿಗೆ ಕರೆದೊಯ್ದು ಬಿಡಲಾಗುವುದು.

ಮೈಸೂರಿನ ಅರಮನೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಬಳಿ ಮೈಸೂರು ದಸರಾ ದರ್ಶನ ಉಪ ಸಮಿತಿ ಆಯೋಜಿ ಸಿರುವ ಕಾರ್ಯಕ್ರಮದಲ್ಲಿ ಮೈಸೂರು ತಾಲೂಕಿನ ದಸರಾ ದರ್ಶನದ 8 ಕೆಎಸ್ ಆರ್‍ಟಿಸಿ ಬಸ್‍ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಸಮ್ಮುಖದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹಸಿರು ನಿಶಾನೆ ತೋರಿ, ಉದ್ಘಾಟನೆ ನೆರವೇರಿಸಿದರು.

ಈ ಕಾರ್ಯಕ್ರಮದಡಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಜಿಲ್ಲೆಗಳ 31 ತಾಲೂಕುಗಳಿಂದ ಒಟ್ಟು 174 ಕೆಎಸ್‍ಆರ್‍ಟಿಸಿ ಬಸ್‍ಗಳು ಅ.15ರಿಂದ 17ರವರೆಗೆ ಮೂರು ದಿನಗಳ ಕಾಲ ಅರ್ಹ ಫಲಾನುಭವಿಗಳಿಗೆ ಮೈಸೂರು ದರ್ಶನ ಮಾಡಿಸಲಿವೆ. ಮೈಸೂರು ಜಿಲ್ಲೆ ಯಿಂದ 42 ಬಸ್‍ಗಳಲ್ಲಿ ಒಟ್ಟು 2310 ಮಂದಿ, ಚಾಮರಾಜನಗರ
ಜಿಲ್ಲೆಯಿಂದ 24 ಬಸ್‍ಗಳಲ್ಲಿ 1320 ಮಂದಿ, ಮಂಡ್ಯ ಜಿಲ್ಲೆಯಿಂದ 42 ಬಸ್‍ಗಳಲ್ಲಿ 2310, ಹಾಸನ ಜಿಲ್ಲೆಯಿಂದ 48 ಬಸ್‍ಗಳಲ್ಲಿ 2640 ಹಾಗೂ ಕೊಡಗು ಜಿಲ್ಲೆಯಿಂದ 18 ಬಸ್‍ಗಳಲ್ಲಿ 990 ಮಂದಿ ಸೇರಿ, ಒಟ್ಟಾರೆ ಮೂರು ದಿನಗಳಲ್ಲಿ 9570 ಮಂದಿ ಮೈಸೂ ರಿನ ಪ್ರಮುಖ ಸ್ಥಳಗಳ ದರ್ಶನ ಮಾಡ ಲಿದ್ದಾರೆ. ದಸರಾ ದರ್ಶನಕ್ಕೆ ಆಗಮಿಸುವ ಫಲಾನುಭವಿ ರೂ50ರ ರಿಯಾಯಿತಿ ದರದ ಪಾಸ್ ಹೊಂದಿರಬೇಕಾಗುತ್ತದೆ. ಉಳಿದ ಹಣವನ್ನು ಕೆಎಸ್‍ಆರ್‍ಟಿಸಿ ಭರಿಸಲಿದೆ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ದಸರಾ ದರ್ಶನಕ್ಕೆ ಆಗಮಿಸುವ ಜನರ ಅನುಕೂಲ ಹಾಗೂ ಸುಗಮ ದರ್ಶನಕ್ಕಾಗಿ ಪ್ರತಿ ವಾಹನದೊಡನೆ ಒಬ್ಬ ಜವಾಬ್ದಾರಿ ಯುತ ಸಿಬ್ಬಂದಿಯನ್ನು ನಿಯೋಜಿಸಲಾ ಗಿದೆ. ಅಲ್ಲದೆ ಫಲಾನುಭವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಅವರು ಸಂದರ್ಶಿ ಸುವ ಚಾಮುಂಡಿಬೆಟ್ಟ, ಮೃಗಾಲಯ, ಅರಮನೆ ಸ್ಥಳಗಳಲ್ಲಿ ಕೆಎಸ್‍ಆರ್‍ಟಿಸಿ ನಿಗ ಮದ ನೌಕರರನ್ನು ನಿಯೋಜಿಸಲಾಗಿದೆ ಎಂದು ದಸರಾ ದರ್ಶನ ಉಪ ಸಮಿತಿ ಕಾರ್ಯಾಧ್ಯಕ್ಷರೂ ಆದ, ಕೆಎಸ್‍ಆರ್‍ಟಿಸಿ ಡಿಸಿ ಎಂ.ವಾಸು ತಿಳಿಸಿದರು. ಈ ಸಂದರ್ಭ ದಲ್ಲಿ ನಗರ ವಿಭಾಗದ ಡಿಸಿ ಶ್ರೀನಿವಾಸ್, ಡಿಟಿಓ ದಶರಥ್, ಕಾರ್ಮಿಕ ವಿಭಾಗದ ವ್ಯವಸ್ಥಾಪಕ ನಿರಂಜನಮೂರ್ತಿ, ಸಹಾ ಯಕ ಸಂಚಾರ ವ್ಯವಸ್ಥಾಪಕಿ ಜಿ.ಸುಮ ಲತಾ ಇನ್ನಿತರರು ಉಪಸ್ಥಿತರಿದ್ದರು.

Translate »