ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಕಾಮುಕರಿಗೆ ಮರಣದಂಡನೆ
ಮೈಸೂರು

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಕಾಮುಕರಿಗೆ ಮರಣದಂಡನೆ

January 19, 2020

ಚಿಕ್ಕಮಗಳೂರು: ಕಾಲೇಜು ವಿದ್ಯಾ ರ್ಥಿನಿಯನ್ನು ಅಡ್ಡಗಟ್ಟಿ ಅತ್ಯಾಚಾರಗೈದು, ಕೊಲೆ ಮಾಡಿದ್ದ ಇಬ್ಬರು ಕಾಮುಕರಿಗೆ ಚಿಕ್ಕಮಗಳೂರು ಜಿಲ್ಲಾ ಸತ್ರ ನ್ಯಾಯಾ ಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಜಿಲ್ಲೆಯ ಶೃಂಗೇರಿಯಲ್ಲಿ 2016ರ ಫೆಬ್ರ ವರಿ 16ರಂದು ನಡೆದಿದ್ದ ಘಟನೆಯಿಂದ ಮಲೆನಾಡೇ ಬೆಚ್ಚಿ ಬಿದ್ದಿತ್ತು. ಕಾಲುದಾರಿ ಯಲ್ಲಿ ಮನೆಗೆ ಹೋಗುತ್ತಿದ್ದ ಪ್ರಥಮ ಬಿಕಾಂ ವಿದ್ಯಾರ್ಥಿಯನ್ನು ಪ್ರದೀಪ್ ಹಾಗೂ ಸಂತೋಷ್ ಎಂಬುವರು ಅತ್ಯಾಚಾರ ಗೈದು, ಕೊಲೆ ಮಾಡಿ ಪಾಳು ಬಾವಿಗೆ ಎಸೆದಿದ್ದರು. ಇದರಿಂದಾಗಿ ಹೆಣ್ಣು ಮಕ್ಕ ಳನ್ನು ಕಾಲೇಜಿಗೆ ಕಳಿಸುವುದಕ್ಕೆ ಹೆತ್ತವರು ಹಿಂದೇಟು ಹಾಕಿದ್ದರು. ಆದರೆ ನಾಲ್ಕು ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಇಬ್ಬರು ಆರೋಪಿಗಳು ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ಜೊತೆಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದರಿಂದ 25 ವರ್ಷ ಶಿಕ್ಷೆ ಹಾಗೂ 25 ಸಾವಿರ ರೂ. ದಂಡವನ್ನೂ ವಿಧಿಸಿದೆ.

ಏನಿದು ಪ್ರಕರಣ?: ಕೊಲೆಯಾದ ವಿದ್ಯಾರ್ಥಿನಿ ಶೃಂಗೇರಿಯಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ತಂದೆ ನಿತ್ಯವೂ ತಮ್ಮ ಬೈಕ್‍ನಲ್ಲಿ ಕಾಲೇಜಿಗೆ ಬಿಟ್ಟು, ಸಂಜೆ ಕರೆದುಕೊಂಡು ಹೋಗು ತ್ತಿದ್ದರು. 2016ರ ಫೆಬ್ರವರಿ 16ರಂದು ಪರೀಕ್ಷೆ ಬೇಗ ಮುಗಿದಿದ್ದರಿಂದ ಮುಂದಿನ ಪರೀಕ್ಷೆಗೆ ಓದಬೇಕೆಂದು ವಿದ್ಯಾರ್ಥಿನಿ ಕಾಲು ದಾರಿ ಹಿಡಿದು ಗ್ರಾಮಕ್ಕೆ ಹೋಗು ತ್ತಿದ್ದಳು. ಈ ವೇಳೆ ಪ್ರದೀಪ್ ಹಾಗೂ ಸಂತೋಷ್ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಅತ್ಯಾಚಾರಗೈದು, ಕೊಲೆ ಮಾಡಿದ್ದರು. ಬಳಿಕ ಗಿಡಗಂಟಿಗಳಿಂದ ತುಂಬಿದ್ದ 50 ಅಡಿಯ ಪಾಳು ಬಾವಿಯಲ್ಲಿ ವಿದ್ಯಾರ್ಥಿ ನಿಯ ಮೃತದೇಹ ಎಸೆದಿದ್ದರು.

ವಿದ್ಯಾರ್ಥಿನಿ ನಾಪತ್ತೆ ಪ್ರಕರಣ ದಾಖ ಲಿಸಿಕೊಂಡಿದ್ದ ಪೆÇಲೀಸರು ತನಿಖೆ ಚುರುಕು ಗೊಳಿಸಿದ್ದರು. ಹೀಗಾಗಿ ಇಬ್ಬರು ಆರೋಪಿ ಗಳಲ್ಲಿ ಓರ್ವ ಆತ್ಮಹತ್ಯೆಗೆ ಯತ್ನಿಸಿದ್ದ, ಮತ್ತೋರ್ವ ಪೆÇಲೀಸರ ಅತಿಥಿಯಾಗಿದ್ದ. ಈ ಪ್ರಕರಣ ಹೊರತುಪಡಿಸಿಯೂ ಇಬ್ಬರ ಮೇಲೂ ಹಲವು ಕೇಸ್‍ಗಳಿದ್ದವು. ನಾಲ್ಕು ವರ್ಷಗಳ ವಿಚಾರಣೆ ಬಳಿಕ ಆರೋಪ ಸಾಬೀತಾದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾ ಸತ್ರ ನ್ಯಾಯಾಲಯ ಇಬ್ಬರಿಗೂ ಮರಣ ದಂಡನೆ ವಿಧಿಸಿ, ತೀರ್ಪು ನೀಡಿದೆ.

Translate »