ಮೈಸೂರು: ಸಾಲ ತೀರಿಸಲಾಗದೆ ಮನ ನೊಂದ ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಬಂಡಿ ಪಾಳ್ಯದ ಎಪಿಎಂಸಿ ಮಾರುಕಟ್ಟೆ ಬಳಿ ನಡೆದಿದೆ. ಮಂಡ್ಯದ ಚಿಕ್ಕಬಾಗಿಲು ಗ್ರಾಮದ ನಿವಾಸಿ ಚೈತನ್ಯ(38) ಆತ್ಮಹತ್ಯೆ ಮಾಡಿ ಕೊಂಡವರು. ಇವರು ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯಲ್ಲಿ ಪಟೇಲ್ ಅಸೋಸಿಯೇಷನ್ ವಾಟರ್ ಏಜೆನ್ಸಿ ನಡೆಸುತ್ತಿದ್ದರು. ಮೀಟರ್ ಬಡ್ಡಿಯಲ್ಲಿ ಸಾಲ ಮಾಡಿದ್ದ ಇವರು ಮಾಡಿದ ಸಾಲವನ್ನು ತೀರಿಸಲಾಗದೆ ಮೇ.8ರ ತಡರಾತ್ರಿ ನೇಣಿಗೆ ಶರಣಾಗಿದ್ದಾರೆ.
ಮೈಸೂರಿನ ಕುವೆಂಪುನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಚೈತನ್ಯ, ಸ್ವಂತ ಮನೆಯನ್ನು ಕಟ್ಟಿದ್ದೇನೆ ಎಂದು ಹೇಳಿಕೊಂಡು ಮೀಟರ್ ಬಡ್ಡಿಯಲ್ಲಿ ಸುಮಾರು 25 ಲಕ್ಷ ರೂ. ಸಾಲ ಮಾಡಿ, ಎಪಿಎಂಸಿ ಮಾರುಕಟ್ಟೆಯಲ್ಲಿ ಎರಡು ಮಳಿಗೆಯನ್ನು ಬಾಡಿಗೆ ಪಡೆದು ವಾಟರ್ ಏಜೆನ್ಸಿಯನ್ನು ನಡೆಸುತ್ತಿದ್ದರು. ಆದರೆ, ಮಾಡುತ್ತಿದ್ದ ವ್ಯಾಪಾರದಿಂದ ಬಂದ ಆದಾಯವೆಲ್ಲಾ ಸಾಲದ ಬಡ್ಡಿಯನ್ನು ಮಾತ್ರ ಕಟ್ಟಲು ಸಾಧ್ಯವಾಗುತ್ತಿತ್ತು. ಇದ ರಿಂದ ಮಾಡಿದ ಸಾಲವನ್ನು ತೀರಿಸ ಲಾಗದೆ ನೊಂದು ಮಳಿಗೆ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವಾಗ ತಮ್ಮ ತಾಯಿಗೆ ಕರೆ ಮಾಡಿ ಆಸ್ತಿಯನ್ನು ನನ್ನ ಮಗನ ಹೆಸರಿಗೆ ಬರೆಯಿರಿ. ನಾನು ಇನ್ನು ಇರುವುದಿಲ್ಲ ಎಂದು ಹೇಳಿ ನೇಣಿಗೆ ಶರ ಣಾಗಿದ್ದಾರೆ ಎಂದು ದಕ್ಷಿಣ ಪೊಲೀಸ್ ಠಾಣೆ ಎಎಸ್‍ಐ ಶಾಂತಲಿಂಗಯ್ಯ ತಿಳಿಸಿ ದ್ದಾರೆ. ಈ ಸಂಬಂಧ ಪ್ರಕರಣ ದಾಖ ಲಾಗಿದ್ದು, ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.