ನಿರ್ಭಯಾ ಅತ್ಯಾಚಾರಿಗಳ ರಕ್ಷಣೆಗೆ ದೆಹಲಿ ಎಎಪಿ ಸರ್ಕಾರ ಯತ್ನಿಸುತ್ತಿದೆ: ಬಿಜೆಪಿ ಆರೋಪ
ಮೈಸೂರು

ನಿರ್ಭಯಾ ಅತ್ಯಾಚಾರಿಗಳ ರಕ್ಷಣೆಗೆ ದೆಹಲಿ ಎಎಪಿ ಸರ್ಕಾರ ಯತ್ನಿಸುತ್ತಿದೆ: ಬಿಜೆಪಿ ಆರೋಪ

January 20, 2020

ನವದೆಹಲಿ,ಜ.19- ನಿರ್ಭಯಾ ಅತ್ಯಾ ಚಾರ, ಕೊಲೆ ಪ್ರಕ ರಣದ ನಾಲ್ವರು ಅಪ ರಾಧಿಗಳ ರಕ್ಷಣೆಗೆ ದೆಹ ಲಿಯ ಆಪ್ ಸರ್ಕಾರ ಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಬಿಜೆಪಿ ರಾಜ್ಯಾ ಧ್ಯಕ್ಷ ಮನೋಜ್ ತಿವಾರಿ, ಪ್ರಕರಣ ದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ದೋಷಿಗಳನ್ನು ರಕ್ಷಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಪ್ರಯತ್ನಿಸುತ್ತಿದೆ. ನ್ಯಾಯಾಲಯ ತೀರ್ಪಿನ ಪ್ರಕ್ರಿಯೆಗೆ ಅಡ್ಡಿಪಡಿಸುವ ಮೂಲಕ ಆಪ್ ಹೀಗೆ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ.

Translate »