ಉತ್ತಮ ಬಾಂಧವ್ಯದಿಂದ ನ್ಯಾಯ ವಿತರಣೆ ಸುಲಭ
ಚಾಮರಾಜನಗರ

ಉತ್ತಮ ಬಾಂಧವ್ಯದಿಂದ ನ್ಯಾಯ ವಿತರಣೆ ಸುಲಭ

May 28, 2018

ಚಾಮರಾಜನಗರ:  ‘ನ್ಯಾಯಾ ಧೀಶರು ಹಾಗೂ ವಕೀಲರ ಬಾಂಧವ್ಯ ಉತ್ತಮ ವಾಗಿದ್ದರೆ ನ್ಯಾಯ ವಿತರಣೆ ಸುಲಭವಾಗ ಲಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಬಸವರಾಜು ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯ ಆವರಣ ದಲ್ಲಿರುವ ಜಿಲ್ಲಾ ವಕೀಲರ ಸಂಘದ ಕಚೇರಿ ಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮ ದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎಲ್.ಜೆ. ಭವಾನಿ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾ ಧೀಶ ಸಂದೇಶ್ ವಿ.ಭಂಡಾರಿ ಅವರಿಗೆ ಬೀಳ್ಕೊ ಡುಗೆ ನೀಡಿ ಅವರು ಮಾತನಾಡಿದರು.

ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲ ವೃತ್ತಿ ಶೇಷ್ಠವಾದದ್ದು, ವಕೀಲ ವೃತ್ತಿಯಲ್ಲಿರುವವರು ಪರಿಶ್ರಮಪಡಬೇಕು ಜೊತೆಯಲ್ಲಿ ಪ್ರಾಮಾ ಣ ಕತೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಕಕ್ಷಿ ದಾರರಿಗೆ ಉತ್ತಮ ಸೇವೆ ನೀಡಬಹುದು. ನ್ಯಾಯಾಧೀಶರು ನೇರ ಮತ್ತು ನಿಷ್ಠುರತೆ ಯಿಂದ ಇದ್ದಾಗ ಮಾತ್ರ ಪಾರದರ್ಶಕ ವಾಗಿ ನ್ಯಾಯದಾನ ನೀಡಲು ಸಾಧ್ಯವಾಗು ವುದು ಎಂದರು. ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮಾತ ನಾಡಿ, ವರ್ಗಾವಣೆಗೊಂಡಿರುವ ನ್ಯಾಯಾ ಧೀಶರು ಅವರ ಅವಧಿಯಲ್ಲಿ ಉತ್ತಮ ವಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರದ ದಿನ ಗಳಲ್ಲಿಯೂ ಉತ್ತಮ ಸೇವೆ ಸಲ್ಲಿಸಲಿ ಎಂದರು.

ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿದ ನ್ಯಾಯಾ ಧೀಶರಾದ ಎಲ್.ಜೆ.ಭವಾನಿ ಮತ್ತು ಸಂದೇಶ್ ವಿ.ಭಂಡಾರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಡಿ.ವಿನಯ್, ಪ್ರಧಾನ ಸಿವಿಲ್ ನ್ಯಾಯಾಧೀಶೆ ವಿ.ದೀಪಾ, ಜಿಲ್ಲಾ ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಅರುಣ್ ಕುಮಾರ್, ಉಪಾಧ್ಯಕ್ಷ ಶಿವಪ್ರಸನ್ನ, ಸಮಿತಿ ಸದಸ್ಯರಾದ ಮಹೇಶ್‍ಕುಮಾರ್, ಆರ್.ಗಿರೀಶ್, ಎಚ್.ಎಸ್.ಮಹೇಂದ್ರ, ಎಂ.ಎಸ್. ಮೋಹನ್ ಜಗದೀಶ್, ಬಿ.ವನಜಾಕ್ಷಿ, ಆರ್.ವಿರೂ ಪಾಕ್ಷ, ರಾಮಸಮುದ್ರ ಪುಟ್ಟಸ್ವಾಮಿ, ಬಿ.ಜಿ.ಜಯಪ್ರಕಾಶ್, ಎ.ಎಸ್.ಸಿದ್ದರಾಜು, ಮಂಜುನಾಥಸ್ವಾಮಿ, ಸವಿತಾ, ವಿದ್ಯಾ ಲತಾ ಹಾಜರಿದ್ದರು.

Translate »