ಜಿಲ್ಲಾ ಕೇಂದ್ರಕ್ಕೆ ಹೆಚ್‍ಡಿಕೆ ಭೇಟಿ ನೀಡುವರೇ?
ಚಾಮರಾಜನಗರ

ಜಿಲ್ಲಾ ಕೇಂದ್ರಕ್ಕೆ ಹೆಚ್‍ಡಿಕೆ ಭೇಟಿ ನೀಡುವರೇ?

May 28, 2018

ಚಾಮರಾಜನಗರ:  ಜಿಲ್ಲಾ ಕೇಂದ್ರವಾದ ಚಾಮರಾಜನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಆರು ತಿಂಗ ಳೊಳಗೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಪ್ರತೀತಿಯನ್ನು ಮೆಟ್ಟಿನಿಂತರವರು ಎಚ್.ಡಿ.ಕುಮಾರಸ್ವಾಮಿ. ಈಗ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿರುವ ಕಾರಣ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಯಾವಾಗ ಭೇಟಿ ನೀಡುತ್ತಾರೆ? ಶ್ರೀಚಾಮ ರಾಜೇಶ್ವರ ಸ್ವಾಮಿಯ ದರ್ಶನವನ್ನು ಯಾವಾಗ ಪಡೆಯುತ್ತಾರೆ? ಎಂಬ ಪ್ರಶ್ನೆ ಜಿಲ್ಲೆಯ ಜನರಲ್ಲಿ ಮೂಡಿದೆ.

ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ ಮುಖ್ಯ ಮಂತ್ರಿಗಳು ಆರು ತಿಂಗಳೊಳಗೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಪ್ರತೀತಿ ಇತ್ತು. ಇದಕ್ಕೆ ಪೂರಕವಾಗಿ ಎಸ್.ಆರ್. ಬೊಮ್ಮಾಯಿ, ವಿರೇಂದ್ರಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ ಆರು ತಿಂಗಳೊಳಗೆ ಅಧಿಕಾರ ಕಳೆದುಕೊಂಡರು. ಆ ಬಳಿಕ ಚಾಮರಾಜ ನಗಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗು ತ್ತದೆ ಎಂಬ ಕಳಂಕ ರಾಜ್ಯ ಮಟ್ಟದಲ್ಲಿ ಗಟ್ಟಿ ಗೊಳ್ಳತೊಡಗಿತ್ತು. ನಂತರ ಮುಖ್ಯಮಂತ್ರಿ ಗಳಾದ ಎಸ್.ಬಂಗಾರಪ್ಪ, ಎಂ.ವೀರಪ್ಪ ಮೊಯ್ಲಿ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಎನ್.ಧರ್ಮ ಸಿಂಗ್ ಅವರು ಅಧಿಕಾರಾವಧಿಯಲ್ಲಿ ಇತ್ತ ಬರಲಿಲ್ಲ. ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುವ ಹಲವು ಸಂದರ್ಭಗಳು ಎದುರಾದರೂ ನಾನಾ ಕಾರಣ ನೀಡಿ ಭೇಟಿ ನೀಡುವುದ ರಿಂದ ತಪ್ಪಿಸಿಕೊಂಡರು.

ಜಿಲ್ಲಾ ಕೇಂದ್ರವಾದ ಚಾಮರಾಜನಗರ ದಲ್ಲಿ ನಡೆಯಬೇಕಾಗಿದ್ದ ಜಿಲ್ಲಾ ಮಟ್ಟದ ಸರ್ಕಾರಿ ಕಾರ್ಯಕ್ರಮಗಳು, ಮುಖ್ಯ ಸಮಾವೇಶಗಳು ಸಮೀಪದ ಸಂತೇಮರ ಹಳ್ಳಿಯಲ್ಲಿ ಅಥವಾ ತಾಲೂಕು ಕೇಂದ್ರ ಗಳಾದ ಗುಂಡ್ಲುಪೇಟೆ ಮತ್ತು ಕೊಳ್ಳೇ ಗಾಲದಲ್ಲಿ ನಡೆಸಿದ ಹಲವು ಉದಾ ಹರಣೆಗಳು ಇವೆ.

1997ರಲ್ಲಿ ಚಾಮರಾಜನಗರವು ಮೈಸೂರು ಜಿಲ್ಲೆಯಿಂದ ವಿಭಜಿಸಿ ಪ್ರತ್ಯೇಕ ಜಿಲ್ಲೆ ಮಾಡುವಾಗ ಮುಖ್ಯಮಂತ್ರಿ ಆಗಿದ್ದ ವರು ಸಮಾಜವಾದಿ ಎನಿಸಿಕೊಂಡಿದ್ದ ಜೆ.ಎಚ್.ಪಟೇಲ್ ಅವರು ಚಾಮರಾಜ ನಗರಕ್ಕೆ ಭೇಟಿ ನೀಡಿ ಜಿಲ್ಲೆಯೆಂದು ಘೋಷಿ ಸುವ ಬದಲು ಜಿಲ್ಲಾ ವ್ಯಾಪ್ತಿಯ ಮಲೆ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ತೆರಳಿ ಚಾಮ ರಾಜನಗರವನ್ನು ಜಿಲ್ಲೆಯೆಂದು ಘೋಷಣೆ ಮಾಡಿದರು. ಅವರ ಈ ನಡೆ ಹಲವು ಟೀಕೆಗೆ ಗುರಿಯಾಯಿತು.

ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಚಾಮರಾಜ ನಗರಕ್ಕೆ ಭೇಟಿ ನೀಡಿ ಇತಿಹಾಸ ಬರೆ ದರು. ವಿರೇಂದ್ರ ಪಾಟೀಲರ ನಂತರ ಸುಮಾರು 16 ವರ್ಷಗಳ ಬಳಿಕ ಚಾಮ ರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಎಚ್.ಡಿ.ಕುಮಾರಸ್ವಾಮಿ ಪಾತ್ರರಾದರು. ಅವರ ಬಳಿಕ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾ ನಂದಗೌಡ, ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. ಆದರೂ, ಸಹ ಇವರಿಬ್ಬರು ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿ ಕೊಳ್ಳಲು ಸಾಧ್ಯವಾಗಲಿಲ್ಲ.

ಬಿಜೆಪಿ ಸರ್ಕಾರದ ಮೂರನೇ ಮುಖ್ಯ ಮಂತ್ರಿಯಾದ ಜಗದೀಶ್‍ಶೆಟ್ಟರ್ ಅವರು ಅಧಿಕಾರಾವಧಿಯ ಕೊನೆಯಲ್ಲಿ 2 ಬಾರಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಇದಾದ ಬಳಿಕ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಹಲವು ಬಾರಿ ಭೇಟಿ ನೀಡಿ ಜಿಲ್ಲೆಗೆ ಅಂಟಿದ ಕಳಂಕವನ್ನು ತೊಡೆದುಹಾಕಿ ಇತಿಹಾಸ ನಿರ್ಮಿಸುವ ಜೊತೆಗೆ, 5 ವರ್ಷ ಪೂರ್ಣಾವಧಿಯ ಆಡಳಿತ ನಡೆಸಿದರು.

ಮುಖ್ಯಮಂತ್ರಿ ಆದವರು ಚಾಮರಾಜ ನಗರಕ್ಕೆ ಭೇಟಿ ನೀಡುವುದಿಲ್ಲ ಎಂಬ ಪ್ರತೀತಿ ಯನ್ನು ಸುಳ್ಳಾಗಿಸಿದ್ದ ಎಚ್.ಡಿ. ಕುಮಾರ ಸ್ವಾಮಿ ಈಗ ಮತ್ತೊಮ್ಮೆ ಮುಖ್ಯಮಂತ್ರಿ ಆಗಿದ್ದಾರೆ. ಚಾಮರಾಜನಗರ ತಾಲೂಕಿನ ಬಡಗಲಮೋಳೆ ಯಲ್ಲಿ ಗ್ರಾಮ ವಾಸ್ತವ್ಯ ಹೂಡುವ ಮೂಲಕ ಜಿಲ್ಲೆಯ ಜನತೆಯ ಮನ ಗೆದ್ದಿದ್ದ ಅವರು ಮತ್ತೊಮ್ಮೆ ಚಾಮ ರಾಜನಗರ ಜಿಲ್ಲಾ ಕೇಂದ್ರಕ್ಕೆ ಯಾವಾಗ ಬರುತ್ತಾರೆ, ಚಾಮರಾಜೇಶ್ವರ ಸ್ವಾಮಿಯ ದರ್ಶನ ಯಾವಾಗ ಪಡೆಯುತ್ತಾರೆ ಎಂದು ಜಿಲ್ಲೆಯ ಜನತೆ ಎದುರು ನೋಡುತ್ತಿದ್ದಾರೆ.

Translate »