2022ರ ವೇಳೆಗೆ 200 ಮಿಲಿಯನ್ ಮೆಟ್ರಿಕ್ ಟನ್ ಹಾಲಿಗೆ ಬೇಡಿಕೆ
ಮೈಸೂರು

2022ರ ವೇಳೆಗೆ 200 ಮಿಲಿಯನ್ ಮೆಟ್ರಿಕ್ ಟನ್ ಹಾಲಿಗೆ ಬೇಡಿಕೆ

June 2, 2019

ಮೈಸೂರು: ದೇಶ ದಲ್ಲಿ ಪ್ರಸ್ತುತ 176 ಮಿಲಿಯನ್ ಮೆಟ್ರಿಕ್ ಟನ್ ಹಸುವಿನ ಹಾಲು ಉತ್ಪಾದನೆಯಾಗು ತ್ತಿದ್ದು, 2022ರ ವೇಳೆಗೆ 200 ಮಿಲಿ ಯನ್ ಮೆಟ್ರಿಕ್ ಟನ್‍ನಷ್ಟು ಬೇಡಿಕೆ ಹೆಚ್ಚಳ ವಾಗಲಿದೆ ಎಂದು ನ್ಯಾಷನಲ್ ಡೈರಿ ಡೆವಲಪ್‍ಮೆಂಟ್ ಬೋರ್ಡ್ ಅಧಿಕಾರಿ ಡಾ.ಡಿ.ಜಿ.ರಘುಪತಿ ಅಭಿಪ್ರಾಯಪಟ್ಟರು.

ಮೈಸೂರಿನ ಲಲಿತಾದ್ರಿಪುರಂನಲ್ಲಿರುವ ಜೆಎಸ್‍ಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂ ಟದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಹಾಲು ದಿನಾಚರಣೆ ಉದ್ಘಾಟಿಸಿ ಮಾತ ನಾಡಿದ ಅವರು, ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷಗಳಲ್ಲಿ ಹಾಲಿಗೂ ಬೇಡಿಕೆ ಹೆಚ್ಚಳ ವಾಗಲಿದೆ. ಈ ಹಿನ್ನೆಲೆಯಲ್ಲಿ ಹಾಲಿನ ಉತ್ಪಾದನೆಗೂ ಮಾರ್ಗಗಳನ್ನು ಹುಡುಕ ಬೇಕಾಗಿದೆ ಎಂದು ಹೇಳಿದರು.
ಆಹಾರ ಪದಾರ್ಥಗಳ ಪೈಕಿ ಹಾಲು ಉತ್ತಮ ಪೌಷ್ಟಿಕಾಂಶ ಒಳಗೊಂಡಿದೆ. ಸೇವಿಸಿದ ಆಹಾರ ಜೀರ್ಣಿಸುವಲ್ಲಿ ಹಾಲು ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ಉತ್ತಮ ಗುಣಮಟ್ಟದ ಹಾಲು ಉತ್ಪಾ ದನೆಗೆ ಆದ್ಯತೆ ನೀಡುವ ಜೊತೆಗೆ ಉತ್ಪಾ ದನಾ ಪ್ರಮಾಣ ಹೆಚ್ಚಿಸಲು ಹೆಚ್ಚು ಒತ್ತು ನೀಡಬೇಕಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಿಬ್ಬಂದಿ ಹಾಗೂ ಜೆಎಸ್‍ಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಜಾಥಾ ನಡೆಸಿ, ಹಸುವಿನ ಹಾಲಿನ ಮಹತ್ವ ಸಾರಿ ದರು. ಜಾಥಾವು ಮುಖ್ಯ ಡೈರಿಯಿಂದ ಮೆಗಾ ಡೈರಿವರೆಗೂ ನಡೆಯಿತು.

ಈ ಸಂದರ್ಭದಲ್ಲಿ ಮೈಸೂರ್ ಮಿಲ್ಕ್ ಫೆಡರೇಷನ್‍ನ ಮಾರುಕಟ್ಟೆ ವ್ಯವಸ್ಥಾಪಕ ಫಣಿರಾಜ್, ಪ್ರಧಾನ ವ್ಯವಸ್ಥಾಪಕ ಹೆಚ್.ಆರ್.ರಘು, ಖರೀದಿ ವಿಭಾಗದ ವ್ಯವಸ್ಥಾಪಕ ಡಾ.ಪ್ರಕಾಶ್, ಕಾಲೇಜು ಪ್ರಾಂಶುಪಾಲ ರಾಜೇಶ್ ಎ.ಉದಪುಡಿ, ಡಾ.ಪಿ.ಸುಧಾಕರ ರೆಡ್ಡಿ ಭಾಗವಹಿಸಿದ್ದರು.

Translate »