ಎಮ್ಮೆಮಾಡುನಲ್ಲಿ ವ್ಯಕ್ತಿಯ ಶವ ಪತ್ತೆ
ಕೊಡಗು

ಎಮ್ಮೆಮಾಡುನಲ್ಲಿ ವ್ಯಕ್ತಿಯ ಶವ ಪತ್ತೆ

February 20, 2019

ನಾಪೋಕ್ಲು: ಸಮೀಪದ ಎಮ್ಮೆಮಾಡುನಲ್ಲಿ ವಾರಸುದಾರರಿಲ್ಲದ ವ್ಯಕ್ತಿಯೊಬ್ಬರ ಶವವೊಂದು ಪತ್ತೆಯಾಗಿದೆ. ಸುಮಾರು 65 ವರ್ಷದ ವ್ಯಕ್ತಿಯ ಶವವು ಎಮ್ಮೆಮಾಡು ದರ್ಗಾದ ಸಮೀಪ ಪತ್ತೆಯಾಗಿ ವ್ಯಕ್ತಿಯ ಆಧಾರ್ ಕಾರ್ಡ್ ಲಭಿಸಿದ್ದು ಚೆಯ್ಯಂಡಾಣೆ ನರಿ ಯಂದಡ ಗ್ರಾಮದಲ್ಲಿ ಕೂಲಿಕಾರ್ಮಿಕನಾಗಿ ಕೆಲಸ ನಿರ್ವ ಹಿಸುತ್ತಿದ್ದ ಕೊರಟಕೂಡಿ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.

ಮೃತದೇಹವನ್ನು ಮಡಿಕೇರಿ ಶವಾಗಾರದಲ್ಲಿ ಇರಿಸಲಾಗಿದ್ದು, ನಾಪೋಕ್ಲು ಪೊಲೀಸ್ ಠಾಣೆಯ ಎಎಸ್‍ಐ ವಿಶ್ವನಾಥ್ ಹಾಗೂ ಸಿಬ್ಬಂದಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »