ಜಿಂಕೆ ಮಾಂಸ ಪಾಲು ಹಾಕುತ್ತಿದ್ದವನ ಬಂಧನ
ಚಾಮರಾಜನಗರ

ಜಿಂಕೆ ಮಾಂಸ ಪಾಲು ಹಾಕುತ್ತಿದ್ದವನ ಬಂಧನ

March 25, 2019

ಹನೂರು: ಜಿಂಕೆ ಮಾಂಸ ಪಾಲು ಹಾಕುತ್ತಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿ ಸಿದ್ದಾರೆ. ಮಲೈ ಮಹದೇ ಶ್ವರ ವನ್ಯಜೀವಿ ವಲಯದ ಬಫರ್ ರೇಂಜ್‍ನ ಎಲ್ಲೇ ಮಾಳ ಗ್ರಾಮದ ಮುಕುಂದ ಬಂಧಿತ ಆರೋಪಿ. ಆತ ನಿಂದ ಜಿಂಕೆ ಮಾಂಸ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸೋಮವಾರ ಮಧ್ಯಾಹ್ನ ಬಸಿಲಿನ ಬೇಗೆ ತಾಳ ಲಾರದೇ ಅರಣ್ಯದಿಂದ ಜಿಂಕೆಯೊಂದು ನೀರನ್ನು ಅರಸಿ ಜಮೀನೊಂದರ ಬಳಿ ಬಂದಿದೆ. ಈ ವೇಳೆ ಬೀದಿ ನಾಯಿಗಳ ಹಿಂಡು ಜಿಂಕೆ ಮೇಲೆ ದಾಳಿ ಮಾಡಿ ಕೊಂದಿವೆ. ಇದನ್ನು ಗಮನಿಸಿದ ಮುಕುಂದ ಜಿಂಕೆ ಹೊತ್ತೊಯ್ದು ಮಾಂಸಕ್ಕಾಗಿ ಪಾಲು ಮಾಡುತ್ತಿದ್ದ ವೇಳೆ ಹನೂರು ಉಪವಲಯ ಅರಣ್ಯಾಧಿಕಾರಿ ಸಾಲನ್, ಪ್ರಸಾದ್ ಅರಣ್ಯ ರಕ್ಷಕರಾದ ತೀರ್ಥಪ್ರಸಾದ್, ನಂದೀಶ್ ದಾಳಿ ಮಾಡಿ ಆತನನ್ನ ವಶಕ್ಕೆ ಪಡೆದು ಜಿಂಕೆ ಮಾಂಸ ವಶಪಡಿಸಿಕೊಂಡು ಡಿಎಫ್‍ಓ ಏಡುಕುಂಡಲು ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »