ಚಿನ್ನ ಹರಾಜು ಹಾಕದಂತೆ ರೈತರ ಮನವಿ
ಚಾಮರಾಜನಗರ

ಚಿನ್ನ ಹರಾಜು ಹಾಕದಂತೆ ರೈತರ ಮನವಿ

March 25, 2019

ಚಾಮರಾಜನಗರ: ತಾಲೂಕಿನ ಕಾಗಲವಾಡಿ ಇಂಡಿಯನ್ ಓವರ್‍ಸೀಸ್ ಬ್ಯಾಂಕ್‍ನಲ್ಲಿ ರೈತರು ಗಿರಿವಿ ಇಟ್ಟಿರುವ ಚಿನ್ನವನ್ನು ಹರಾಜು ಹಾಕ ಬಾರದು ಹಾಗೂ ಸುಸ್ತಿ ಬಡ್ಡಿ ಮನ್ನಾ ಮಾಡಿ, ಅಸಲನ್ನು ನೀಡಿ ಚಿನ್ನ ಬಿಡಿಸಿ ಕೊಳ್ಳಲು ಕಾಲಾವಕಾಶ ನೀಡುವಂತೆ ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಆಶ್ರಯದಲ್ಲಿ ರೈತರು ಬ್ಯಾಂಕ್‍ನ ಮೈಸೂರು ಶಾಖೆ ಮುಖ್ಯ ವ್ಯವಸ್ಥಾಪಕÀ ಉಮಾ ಮಹೇಶ್ವರ ಅವರಿಗೆ ಮನವಿ ಸಲ್ಲಿಸಿದರು.

ಕಳೆದ ಐದಾರು ವರ್ಷಗಳ ಹಿಂದೆ ರೈತರು ಬ್ಯಾಂಕ್‍ನಲ್ಲಿ ಚಿನ್ನ ಗಿರಿವಿ ಇಟ್ಟಿದ್ದು, ಅದು ಸುಸ್ತಿಯಾಗಿದೆ. ಸಕಾಲದಲ್ಲಿ ಮಳೆಯಾ ಗದೇ ಬೆಳೆದ ಫಸಲು ಕೈ ಸೇರದೆ ನಷ್ಟವಾಗಿ ನಾವು ಸಂಕಷ್ಟದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಅಧಿಕಾರಿಗಳು ಚಿನ್ನ ಹರಾಜು ಮಾಡಲು ಹೊರಟಿರುವುದು ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕು ವಂತೆ ಮಾಡಿದೆ. ಆದ್ದರಿಂದ ಚಿನ್ನದ ಸುಸ್ತಿ ಸಾಲ ಮನ್ನಾ ಮಾಡಿ, ಅಸಲನ್ನು ನೀಡಿ ಚಿನ್ನ ಬಿಡಿಸಿಕೊಳ್ಳಲು ಕಾಲಾವಕಾಶ ನೀಡುವಂತೆ ರೈತರು ಒತ್ತಾಯಿಸಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಆಲೂರು ಮಲ್ಲು ಮಾತನಾಡಿ, ಚುನಾ ವಣಾ ನೀತಿ ಸಂಹಿತೆ ಜಾರಿಯಲ್ಲಿರುವುದ ರಿಂದ ರೈತರ ಚಿನ್ನದ ಹರಾಜು ರದ್ದು ಮಾಡುವಂತೆ ಹಾಗೂ ಸುಸ್ತಿಬಡ್ಡಿ ಮನ್ನಾ ಮಾಡಿ, ಅಸಲನ್ನು ನೀಡಿ ಚಿನ್ನ ಬಿಡಿಸಿ ಕೊಳ್ಳಲು 6 ತಿಂಗಳು ಕಾಲಾವಕಾಶ ಕೊಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ನಮ್ಮ ಬೇಡಿಕೆಗಳು ಈಡೇರದಿದ್ದರೆ ಚುನಾವಣೆ ಮುಗಿದ ಮೇಲೆ ಬ್ಯಾಂಕ್‍ಗೆ ಬೀಗ ಜಡಿದು ಪ್ರತಿ ಭಟನೆ ನಡೆಸುವುದಾಗಿ ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಬ್ಯಾಂಕ್‍ನ ಮೈಸೂರು ಶಾಖೆ ಮುಖ್ಯ ವ್ಯವಸ್ಥಾಪಕ ಉಮಾ ಮಹೇಶ್ವರ ಮಾತನಾಡಿ, ರೈತರ ಮನವಿ ಯಂತೆ ಚಿನ್ನ ಹರಾಜು ಪ್ರಕ್ರಿಯೆ ಮುಂದೂ ಡಲಾಗಿದೆ. ಸುಸ್ತಿಬಡ್ಡಿ ಮನ್ನಾ ವಿಚಾರ ಮೇಲಾ ಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಈ ವೇಳೆ ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಪ್ರಧಾನ ಕಾರ್ಯ ದರ್ಶಿ ರಾಜಶೇಖರ್, ರೈತರಾದ ಟಿ.ಎಂ. ಸಿದ್ದರಾಜು, ಎಪಿಎಂಸಿ ಮಾಜಿ ನಿರ್ದೇಶಕ ಶಿವಕುಮಾರ್, ಬಿ.ಸುಬ್ಬಣ್ಣ, ಎಸ್. ನಂಜುಂಡ ಸ್ವಾಮಿ, ಪರಶಿವಮೂರ್ತಿ, ನಂಜುಂಡಶೆಟ್ಟಿ, ಸಿದ್ದರಾಜು, ಚಿಕ್ಕೂಸಪ್ಪ, ಮಲ್ಲೇಶ್ ಇತರರಿದ್ದರು.

Translate »