ಕ್ಷಯರೋಗ ನಿರ್ಮೂಲನೆಗೆ ಸರ್ಕಾರ ಕ್ರಮ
ಚಾಮರಾಜನಗರ

ಕ್ಷಯರೋಗ ನಿರ್ಮೂಲನೆಗೆ ಸರ್ಕಾರ ಕ್ರಮ

March 25, 2019

ಕಾಮಗೆರೆ: ದೇಶದಲ್ಲಿ ಕ್ಷಯರೋಗ ನಿರ್ಮೂಲನೆಗೆ ಸರ್ಕಾರ ಕ್ರಮ ತೆಗೆದುಕೊಂಡಿದ್ದು, ಈ ರೋಗ ನಿರ್ಮೂಲನೆಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಕೈ ಜೋಡಿಸುವುದು ಅವಶ್ಯಕ ಎಂದು ತಾಲೂಕು ವೈದ್ಯಾಧಿ ಕಾರಿ ಗೋಪಾಲ್ ತಿಳಿಸಿದರು.

ಕಾಮಗೆರೆ ಹೋಲಿ ಕ್ರಾಸ್ ಸ್ಕೂಲ್ ಆಫ್ ನರ್ಸಿಂಗ್ ಶಾಲೆ ಶಿಕ್ಷಕರು, ವಿದ್ಯಾರ್ಥಿನಿ ಯರು ಹೋಲಿ ಕ್ರಾಸ್ ಆಸ್ಪತ್ರೆ ಒಳಾಂ ಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕ್ಷಯ ರೋಗ ದಿನಾಚರಣೆಯಲ್ಲಿ ಅವರು ಮಾತ ನಾಡಿದರು. ಕ್ಷಯರೋಗ ಸಾಂಕ್ರಾಮಿಕ ರೋಗವಾಗಿದ್ದು, ಇದು ಕಲುಷಿತ ಗಾಳಿಯಿಂದ ಬರುತ್ತದೆ. ಕಾಯಿಲೆ ಬಂದ ವ್ಯಕ್ತಿ ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಇತರರಿಗೂ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ರೋಗದ ಬಗ್ಗೆ ನಿರ್ಲಕ್ಷ್ಯ ಮಾಡದೆ ಕಫ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಕ್ಷಯ ರೋಗವನ್ನು ಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದಾಗಿದ್ದು ಕ್ಷಯ ಬಂದ ವ್ಯಕ್ತಿ ಆರರಿಂದ ಎಂಟು ತಿಂಗಳು ಸತತ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.

ಡಿಟಿಸಿ ಮಹದೇವಸ್ವಾಮಿ ಮಾತನಾಡಿ, ಸ್ವಚ್ಛತೆ ಹಾಗೂ ಕ್ರಮಬದ್ಧ ಆಹಾರ ಸೇವಿಸುವ ಮೂಲಕ ದುಶ್ಚಟಗಳಿಂದ ದೂರ ವಿರುವುದರಿಂದ ರೋಗ ತಡೆಗಟ್ಟಬಹುದು. ರೋಗ ಇರುವವರಿಗೆ ಉಚಿತ ಚಿಕಿತ್ಸೆ ನೀಡಿ ಅವಶ್ಯಕ ಪೆÇೀಷಕಾಂಶಯುಕ್ತ ಆಹಾರ ನೀಡ ಲಾಗುತ್ತಿದೆ. ರೋಗಿಯು ಆರೇಳು ತಿಂಗಳ ಕಾಲ ಸೂಕ್ತ ಚಿಕಿತ್ಸೆ ಪಡೆದರೆ ಕ್ಷಯ ರೋಗ ಗುಣಪಡಿಸಬಹುದು. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಕ್ಷಯರೋಗ ಹರಡುವಿಕೆ, ಅದಕ್ಕೆ ಪರಿ ಹಾರ, ಚಿಕಿತ್ಸಾ ವಿಧಾನ ಮತ್ತು ಚಿಕಿತ್ಸೆಯ ಬಗ್ಗೆ ನರ್ಸಿಂಗ್ ವಿದ್ಯಾರ್ಥಿನಿಯರು ಕಿರು ನಾಟಕ ಪ್ರದರ್ಶಿಸಿ ಅರಿವು ಮೂಡಿಸಿದರು.

ಈ ವೇಳೆ ಡಿಟಿಸಿ ನಂಜುಂಡಸ್ವಾಮಿ, ನವೀನ್, ಚರಣ್‍ರಾಜ್, ಕೆಂಪರಾಜು, ಹೋಲಿಕ್ರಾಸ್ ನರ್ಸಿಂಗ್ ಶಾಲೆ ಪ್ರಾಂಶುಪಾಲೆ ಸಿಸ್ಟರ್ ಲೂಸಿಜಾನ್, ಶಿಕ್ಷಕಿ ವಿದ್ಯಾ, ಆಸ್ಪತ್ರೆ ಆಡಳಿತಾಧಿಕಾರಿ ಸಿಸ್ಟರ್ ಕ್ಯಾಥಲಿನ್, ಸಿಸ್ಟರ್ ಅರ್ಪಿತ, ಡಾ.ದೀನಾ, ಡಾ.ಬಸವ ರಾಜು, ಡಾ.ಕುಮಾರ್, ಹಾಗೂ ಪುಷ್ಪ, ರಾಚಯ್ಯ ನರ್ಸಿಂಗ್ ವಿದ್ಯಾರ್ಥಿನಿಯರಿದ್ದರು.

Translate »