ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ಣಯ
ಮೈಸೂರು

ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ಣಯ

December 27, 2018

ನಂಜನಗೂಡು: ತಾಪಂ ಸಭೆಗೆ ಅಧಿಕಾರಿಗಳು ಗೈರಾಗುವ ಮೂಲಕ ಚುನಾ ಯಿತ ಜನ ಪ್ರತಿನಿಧಿಗಳ ಕೆಲಸ ಕಾರ್ಯಗಳು ಸುಗಮವಾಗಿ ಜರುಗಲು ಅಡ್ಡಿ ಉಂಟು ಮಾಡು ತ್ತಿದ್ದಾರೆ ಎಂದು ಒಕ್ಕೊರಲಿನಿಂದ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು ಸಭೆಗೆ ಗೈರಾಗಿರು ವವರÀ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದರು.

ಬುಧವಾರ ತಾಪಂ ಅಧ್ಯಕ್ಷ ಬಿ.ಎಸ್. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಹಲವು ಸದಸ್ಯರು, ಸಾಮಾನ್ಯ ಸಭೆಗೆ ಅಬಕಾರಿ, ಲೋಕೋಪಯೋಗಿ, ಶಿಕ್ಷಣ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರಾಗುವ ಮೂಲಕ ಅಸಡ್ಡೆ ತೋರುತ್ತಿದ್ದಾರೆ. ಈ ಹಿಂದೆ ಕೆಲ ಬಾರಿ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ತಾಪಂ ಇಓ ಶ್ರೀಕಂಠರಾಜೇ ಅರಸ್, ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ವಿವರಣೆ ಕೇಳಿ ನೋಟೀಸ್ ನೀಡಲಾಗುವುದು. ಜೊತೆಗೆ ಅನಾವಶ್ಯಕವಾಗಿ ಗೈರಾಗಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಮದ್ಯದಂಗಡಿ ಸ್ಥಳಾಂತರಿಸಿ: ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ ಮಾತನಾಡಿ, ತಾಲೂಕಿನ ಹುಣಸನಾಳು ಗ್ರಾಮದಲ್ಲಿ ಕೃಷಿ ಭೂಮಿಯಲ್ಲಿ ಮದ್ಯ ಮಾರಾಟ ಮಳಿಗೆ ತೆರೆಯಲಾಗಿದೆ. ವಾಣಿಜ್ಯ ಉದ್ದೇ ಶಕ್ಕೆ ಪರಿವರ್ತನೆಯಾಗದ ಭೂಮಿಯಲ್ಲಿ ಕಟ್ಟಡ ನಿರ್ಮಿಸಲು ಆಕ್ಷೇಪ ವ್ಯಕ್ತಪಡಿಸುವ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮದ ಜಮೀನಿನಲ್ಲಿ ವೈನ್ ಶಾಪ್ ಆರಂಭಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಸದಸ್ಯರಾದ ಸಿ.ಎಂ. ಮಹದೇವಯ್ಯ, ಮೂಗಶೆಟ್ಟಿ, ಬದನವಾಳು ರಾಮು, ಜಯಲಕ್ಷ್ಮಿ ದನಿ ಗೂಡಿಸಿದರು. ನಂತರ ಸಭೆಗೆ ಆಗಮಿಸಿ ಮಾಹಿತಿ ನೀಡಿದ ತಹಶೀಲ್ದಾರ್ ದಯಾನಂದ್, ಹುಣಸನಾಳು ಗ್ರಾಮದಲ್ಲಿ ತೆರೆದಿರುವ ಮದ್ಯ ಮಾರಾಟ ಮಳಿಗೆ ಕುರಿತ ವಿವಾದ ನ್ಯಾಯಾಲಯದಲ್ಲಿದೆ. ಜೊತೆಗೆ ಪ್ರಕರಣದ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗಿದ್ದು, ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವರು ಎಂದರು.

ಮರಳು ಲೂಟಿ ಆರೋಪ: ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ ಮಾತನಾಡಿ, ತಾಲೂಕಿನ ಹೆಮ್ಮರಗಾಲ ಮುಖ್ಯರಸ್ತೆ ಬಸವಟ್ಟಿಗೆ ಬಳಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈ ಸಂದರ್ಭ ಹಳ್ಳದಲ್ಲಿ ನೂರಾರು ಲೋಡ್‍ಗಟ್ಟಲೆ ಮರಳು ಸಾಗಣೆ ಮಾಡ ಲಾಗಿದೆ. ಹೀಗಾಗಿ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಅಕ್ರಮವಾಗಿ ಸಾಗಿಸಿರುವ ಮರಳನ್ನು ಮುಟ್ಟುಗೋಲು ಹಾಕಿಕೊಳ್ಳಲು ತಾಲೂಕು ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಹೆಜ್ಜಿಗೆ ಗೋವಿಂದರಾಜು, ಸದಸ್ಯರಾದ ಹಾಡ್ಯ ಸಿದ್ದರಾಜೇಗೌಡ, ಹುರ ಬಸವ ರಾಜು, ಕೊಂಗಳ್ಳಿ ಬಸವರಾಜು ಚರ್ಚೆ ಯಲ್ಲಿ ಭಾಗವಹಿಸಿದ್ದರು.

Translate »