ಕೇಂದ್ರದ ಮಸೂದೆ ವಿರುದ್ಧ  ತೃತೀಯ ಲಿಂಗಿಗಳ ಪ್ರತಿಭಟನೆ
ಮೈಸೂರು

ಕೇಂದ್ರದ ಮಸೂದೆ ವಿರುದ್ಧ ತೃತೀಯ ಲಿಂಗಿಗಳ ಪ್ರತಿಭಟನೆ

December 27, 2018

ಮೈಸೂರು:  ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿ ರುವ ತೃತೀಯ ಲಿಂಗಿಗಳ ಮಸೂದೆ ರದ್ದು ಪಡಿಸುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಆಶೋದಯ ಸಮಿತಿ ವತಿಯಿಂದ ನೂರಾರು ತೃತೀಯ ಲಿಂಗಿಗಳು ಬುಧ ವಾರ ಪ್ರತಿಭಟನೆ ನಡೆಸಿದರು.

ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿರುವ ಆಶೋದಯ ಸಮಿತಿ ಕಚೇರಿ ಯಿಂದ ಪ್ರತಿಭಟನಾ ಮೆರವಣಿಗೆ ಆರಂ ಭಿಸಿದ ತೃತೀಯ ಲಿಂಗಿಗಳು ಆರ್‍ಟಿಒ ವೃತ್ತ, ರಾಮಸ್ವಾಮಿ ವೃತ್ತ, ಜೆಎಲ್‍ಬಿ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಟ್ರಾನ್ಸ್ ಜೆಂಡರ್ ಮಸೂದೆ ಜಾರಿಗೆ ತಂದು ತೃತೀಯ ಲಿಂಗಿಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ನಮಗೂ ನಮ್ಮದೇ ಆದ ಹಕ್ಕುಗಳಿದ್ದು ಅವು ಗಳನ್ನು ಕಿತ್ತುಕೊಳ್ಳಲು ಯಾರಿಗೂ ಅಧಿಕಾರ ವಿಲ್ಲ. ಲೈಂಗಿಕ ವೃತ್ತಿ ಮತ್ತು ಭಿಕ್ಷಾಟನೆ ಮಾಡು ವುದು ನಮ್ಮ ಹಕ್ಕು. ಕೂಡಲೇ ಟ್ರಾನ್ಸ್‍ಜೆಂಡರ್ ಮಸೂದೆ ರದ್ದು ಪಡಿಸಬೇಕು. ತೃತೀಯ ಲಿಂಗಿಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಕಳೆದ ಜುಲೈನಲ್ಲಿ ಜಾರಿಗೊಳಿಸಿದ ಮಾನವ ಕಳ್ಳಸಾಗಣೆ ತಡೆ ಮಸೂ ದೆಯು, ಸಂಘಟಿತ ಭಿಕ್ಷೆಗೆ ಸಂಬಂಧಿಸಿ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಮೂಲಕ ತೃತೀಯ ಲಿಂಗಿಗಳ ಸಮುದಾಯದಲ್ಲಿ ಕ್ರಿಮಿನಲ್ ಕೆಲಸಕ್ಕೆ ಉತ್ತೇಜಿಸುವಂತೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಸರ್ಕಾರ ತೃತೀಯ ಲಿಂಗಿಗಳಿಗೆ ನೀಡುವ ಸೌಲಭ್ಯ ಸಾಲದಾಗಿದೆ. 600 ರೂ. ಮಾಸಾಶನದಿಂದ ಬದುಕು ನಿರ್ವ ಹಿಸಲು ಸಾಧ್ಯವಾಗುವುದಿಲ್ಲ. ಸಾಮಾನ್ಯ ಜನರಂತೆ ಬದುಕುವ ಆಸೆ ನಮ್ಮದಾಗಿದೆ. ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪೂರಕವಾದ ಯೋಜನೆಗಳನ್ನು ಪ್ರಕಟಿಸಬೇಕು. ಭಿಕ್ಷಾಟನೆ ಮಾಡದಿದ್ದರೆ ಜೀವನ ನಿರ್ವಹಣೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಕೂಡಲೇ ಮಸೂದೆ ವಾಪಸ್ ಪಡೆದು ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಆದರ್ಶ ಸಂಚಾಲಕ ರಾದ ಮಧುಮಿತ, ಆಶೋದಯ ಸಮಿತಿಯ ಸಂಚಾಲಕ ಪ್ರಣತಿ ಪ್ರಕಾಶ್, ಸಾರಿಕಾ, ಅಕ್ರಂಪಾಷ, ಸುಧಾ, ಪಲ್ಲವಿ, ರಾಣಿ, ಭಾಗ್ಯ ಲಕ್ಷ್ಮೀ, ಗಿರಿ,. ಅಪ್ಸರ ಸೇರಿದಂತೆ ಹಲವಾರು ತೃತೀಯ ಲಿಂಗಿಗಳು ಪಾಲ್ಗೊಂಡಿದ್ದರು.

Translate »