ಬ್ಯಾಂಕ್ ನೌಕರರ ಮುಷ್ಕರ ಅಂತ್ಯ
ಮೈಸೂರು

ಬ್ಯಾಂಕ್ ನೌಕರರ ಮುಷ್ಕರ ಅಂತ್ಯ

December 27, 2018

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರು ಹಾಗೂ ಅಧಿಕಾರಿ ಗಳು ನಡೆಸುತ್ತಿದ್ದ ಮುಷ್ಕರ ಇಂದು ಅಂತ್ಯಗೊಂಡಿದ್ದು, ನಾಳೆ(ಡಿ.27)ಯಿಂದ ದೇಶಾದ್ಯಂತ ಎಲ್ಲಾ ಬ್ಯಾಂಕ್ ಶಾಖೆಗಳು ಕಾರ್ಯಾರಂಭಗೊಳ್ಳಲಿವೆ.

ವೇತನ ಪರಿಷ್ಕರಣೆ, ವಾರದಲ್ಲಿ 5 ದಿನ ಕೆಲಸ, ನಿವೃತ್ತಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕ ರರು ಕಳೆದ ಶುಕ್ರವಾರದಿಂದ ಇಂದಿನ ವರೆಗೆ(ಸೋಮವಾರ ಹೊರತು ಪಡಿಸಿ) ಕಾರ್ಯನಿರ್ವಹಿಸಿರಲಿಲ್ಲ. ಶುಕ್ರವಾರ ಮತ್ತು ಇಂದು ದೇಶದಾದ್ಯಂತ ಮುಷ್ಕರ ನಡೆಸಿದ್ದರಾದರೂ, ಈ ಮಧ್ಯೆ ತಿಂಗಳ ನಾಲ್ಕನೇ ಶನಿವಾರ, ಭಾನುವಾರ, ಮಂಗಳ ವಾರ ಕ್ರಿಸ್‍ಮಸ್ ಪ್ರಯುಕ್ತ ರಜೆ ಇತ್ತು.

ಇಂದು ಎಲ್ಲಾ ಬ್ಯಾಂಕ್ ಯೂನಿಯನ್ ಗಳೂ ಸೇರಿ ದೇಶಾದ್ಯಂತ ಒಟ್ಟಿಗೆ ಮುಷ್ಕರ ನಡೆಸಿದ ಪರಿಣಾಮ ಬ್ಯಾಂಕ್ ವಹಿ ವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ದೇನಾ ಬ್ಯಾಂಕ್ ಎದುರು ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಂದು ಪ್ರತಿಭಟನೆ ನಡೆಸಿದರು. ವೇತನ ಪರಿಷ್ಕರಣೆ ಆಗಬೇಕು. ವಾರದಲ್ಲಿ 5 ದಿನ ಕೆಲಸದ ದಿನವಾಗಿ ನಿಗದಿಪಡಿಸ ಬೇಕು. ಬ್ಯಾಂಕುಗಳ ವಿಲೀನಕ್ಕೆ ಅವಕಾಶ ನೀಡಬಾರದೆಂದು ಪ್ರತಿಭಟನಾಕಾರರು ಆಗ್ರಹಿಸಿ, ಘೋಷಣೆಗಳನ್ನು ಕೂಗಿದರು.ಬ್ಯಾಂಕ್ ಮುಷ್ಕರದಿಂದಾಗಿ ವಹಿವಾಟಿ ಲ್ಲದೆ ಗ್ರಾಹಕರು ಕಳೆದ ಶುಕ್ರವಾರದಿಂದ ಪರದಾಡುವಂತಾಯಿತು. ಎಟಿಎಂ ಕೌಂಟರ್‍ಗಳಲ್ಲಿಯೂ ಹಣ ಮುಗಿದಿದ್ದ ರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿತ್ತು.

ಸಾರ್ವಜನಿಕರ ಬೇಸರ: ಪದೇ ಪದೆ ತಮ್ಮ ಬೇಡಿಕೆ ಈಡೇರಿಕೆಗೆಂದು ಬ್ಯಾಂಕ್ ಸಿಬ್ಬಂದಿ ಮುಷ್ಕರಕ್ಕೆ ಮುಂದಾಗುತ್ತಿರು ವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ಹಾಗೂ ಅಸಮಾಧಾನ ವ್ಯಕ್ತವಾ ಗಿದೆ. ಬ್ಯಾಂಕ್‍ಗಳು ಇಲ್ಲ, ಕೆಲವೆಡೆ ಎಟಿಎಂಗಳಲ್ಲೂ ಹಣ ಲಭ್ಯವಾಗದೇ ಸಾರ್ವಜನಿಕರು ಪರದಾಡಿದ್ದಾರೆ. ಮುಷ್ಕರವನ್ನೇ ಒಂದು ಪರಿಪಾಠವಾಗಿ ಬೆಳೆಸಿಕೊಳ್ಳುತ್ತಿರುವ ಬ್ಯಾಂಕ್ ಸಿಬ್ಬಂದಿ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದೇ ಇರುವುದಕ್ಕೆ ತೀವ್ರ ಬೇಸರ ವನ್ನು ‘ಮೈಸೂರು ಮಿತ್ರ’ನಿಗೆ ದೂರವಾಣಿ ಕರೆ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಸಾಮಾಜಿಕ ಜಾಲತಾಣ ಗಳಲ್ಲೂ ಬ್ಯಾಂಕ್ ನೌಕರರ ಮುಷ್ಕರಕ್ಕೆ ಆಕ್ರೋಶ ವ್ಯಕ್ತವಾಗಿದೆ.

Translate »