ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಲು ದೇವೇಗೌಡರೇ ಸಾಕು
ಚಾಮರಾಜನಗರ

ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಲು ದೇವೇಗೌಡರೇ ಸಾಕು

March 23, 2019

ಗುಂಡ್ಲುಪೇಟೆ: ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವ ರಾಗಲೀ ಅಥವಾ ಭಾರತೀಯ ಜನತಾ ಪಾರ್ಟಿಯಾಗಲಿಬೇಕಾಗಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಒಬ್ಬರೇ ಸಾಕು ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದರು.

ಪಟ್ಟಣದ ಸಿ.ಎಂ.ಎಸ್. ಕಲಾಮಂದಿರ ದಲ್ಲಿ ಬಿಜೆಪಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಇಂದು ಸ್ವತಂತ್ರವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ನಿಲ್ಲಿಸುವ ಶಕ್ತಿ ಕಳೆದು ಕೊಂಡು ಅತ್ಯಂತ ದುರ್ಬಲ ಸ್ಥಿತಿಯನ್ನು ತಲುಪಿದೆ. ಆದ್ದರಿಂದಲೇ ಕಾಂಗ್ರೆಸ್ ಬಲ ವಾಗಿರುವ ಹಲವು ಕ್ಷೇತ್ರಗಳನ್ನು ಜೆಡಿಎಸ್ ಕಸಿದುಕೊಂಡಿದೆ ಎಂದರು.

ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸಮರ್ಥ ಎದುರಾಳಿಯೇ ಇಲ್ಲ ಎಂದು ಬೀಗು ತ್ತಿದ್ದ ಕಾಂಗ್ರೆಸ್‍ಗೆ ಶ್ರೀನಿವಾಸಪ್ರಸಾದ್ ಅವ ರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿ ಸಿರುವುದು ಶಾಕ್ ಕೊಟ್ಟಿದೆ. ವಿಶ್ವಕ್ಕೆ ಭಾರ ತದ ತಾಕತ್ತನ್ನು ತೋರಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತವಾಗಿದೆ. ಜೆಡಿಎಸ್ ಸ್ವಾರ್ಥ ರಾಜ ಕಾರಣ ಮಾಡುತ್ತಾ ದುರ್ಬಲಗೊಳಿಸುತ್ತಿ ದ್ದರೂ ಇದನ್ನು ಎದುರಿಸುವ ಶಕ್ತಿಯನ್ನು ಕಾಂಗ್ರೆಸ್ ಕಳೆದುಕೊಂಡಿದೆ ಎಂದರು.

ಹಿಂದೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ನದಿಗಳ ಜೋಡಣೆ ಮುಂತಾದ ಅತ್ಯು ತ್ತಮ ಕೆಲಸ ಮಾಡಿದ್ದರೂ ಕಾರ್ಯ ಕರ್ತರ ಅತಿ ಆತ್ಮವಿಶ್ವಾಸದಿಂದ ಸೋತ ನಂತರ ಹತ್ತು ವರ್ಷಗಳಲ್ಲಿ ದೇಶ ಹೀನಾಯಸ್ಥಿತಿಗೆ ತಲುಪಬೇಕಾಯಿತು. ಆದ್ದರಿಂದ ಈ ಚುನಾವಣೆ ದೇಶದ ಭವಿಷ್ಯವನ್ನು ನಿರ್ಧರಿಸಲಿರುವುದರಿಂದ ಈಗಿನಿಂದಲೇ ಕಾರ್ಯಕರ್ತರು ಮತ ದಾರರ ಮನೆಗಳಿಗೆ ತೆರಳಿ ಕೇಂದ್ರ ಸರ್ಕಾ ರದ ಜನಪರ ಯೋಜನೆಗಳನ್ನು ಮನ ವರಿಕೆ ಮಾಡುವ ಮೂಲಕ ಪಕ್ಷದ ಅಭ್ಯ ರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತ ನಾಡಿ, ರಾಜ್ಯದ ಜನಾದೇಶವನ್ನೂ ಮೀರಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದರೂ ಮುಖ್ಯಮಂತ್ರಿಗಳು ತಾವು ನೀಡಿದ್ದ ಭರವಸೆ ಯಂತೆ ಇನ್ನೂ ರೈತರ ಸಾಲಮನ್ನಾ ಮಾಡಿಲ್ಲ ಎಂದು ಗುಡುಗಿದರು.

ಚಾ.ನಗರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ರಾಷ್ಟ್ರದಲ್ಲಿ ಬಿಜೆಪಿ ಕಳೆದ ಬಾರಿ 283 ಸ್ಥಾನ ಪಡೆದು ಭಾರೀ ಶಕ್ತಿ ಹೊಂದಿದೆ. ಕಾಂಗ್ರೆಸ್ ವಿಪಕ್ಷ ಸ್ಥಾನವನ್ನು ಪಡೆಯಲೂ ಯೋಗ್ಯತೆಯನ್ನೂ ಕಳೆದು ಕೊಂಡಿದೆ. ನಾನು ಸಕ್ರಿಯ ರಾಜಕಾರಣ ದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದರೂ ಸಹ ಪ್ರಧಾನಿ ಮೋದಿಯವರ ದೇಶೋ ದ್ದಾರ ಕಾರ್ಯಗಳನ್ನು ಮೆಚ್ಚಿ ಚುನಾವ ಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಎಲ್ಲರೂ ಬೆಂಬಲಿಸಿ ಎಂದು ಮನವಿ ಮಾಡಿದರು.

ಸಿದ್ದರಾಮಯ್ಯನ ದುರಾಹಂಕಾರದ ನಡ ತೆಯಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾ ಯಿತು. ಕುಮಾರಸ್ವಾಮಿಯನ್ನು ನಿಮ್ಮ ಪ್ಪನಾಣೆ ಮುಖ್ಯಮಂತ್ರಿಯಾಗುವುದಿಲ್ಲ ಎಂದಿದ್ದ ಸಿದ್ದರಾಮಯ್ಯ 38 ಸ್ಥಾನ ಪಡೆದ ಜೆಡಿಎಸ್‍ಗೆ ಅಧಿಕಾರ ಕೊಡು ವಾಗ ನಾಚಿಕೆಯಿಲ್ಲದೆ ಮೂಲೆಯಲ್ಲಿ ಕೈಕಟ್ಟಿಕುಳಿತಿದ್ದ ಎಂದು ಏಕ ವಚನದ ಲ್ಲಿಯೇ ಹಿಗ್ಗಾಮುಗ್ಗಾ ಟೀಕಿಸಿದರು. ಮೈಸೂರಿನಲ್ಲಿ 36 ಸಾವಿರ ಮತಗಳಿಂದ ಹೀನಾಯ ಸೋಲು ಅನುಭವಿಸಿದ ಸಿದ್ದ ರಾಮಯ್ಯನನ್ನು ಮುಗಿಸಿದ ದೇವೇಗೌಡ, ಕುಮಾರಸ್ವಾಮಿಯನ್ನು ಮುಗಿಸಲು ಸಿದ್ದ ರಾಮಯ್ಯ ಅವಕಾಶಕ್ಕಾಗಿ ಕಾಯುತ್ತಿದ್ದು, ದೇವೇಗೌಡ ಮತ್ತು ಸಿದ್ದರಾಮಯ್ಯ ಒಂದಾಗಲು ಸಾಧ್ಯವೇ? ಎಂದು ಸಭಿ ಕರನ್ನು ಪ್ರಶ್ನಿಸಿದರು.

ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ವಿಜಯೇಂದ್ರನಿಗೆ ಟಿಕೆಟ್ ದೊರಕಿದ್ದರೆ ಯತೀಂದ್ರ ಮನೆಯಲ್ಲೇ ಇರಬೇಕಾಗಿತ್ತು. 120 ಸ್ಥಾನಗಳಿದ್ದ ಕಾಂಗ್ರೆಸ್ ಅನ್ನು 80ಕ್ಕೆ ಇಳಿಸಿದ ಕೀರ್ತಿ ಸಿದ್ದರಾ ಮಯ್ಯಗೆ ಸಲ್ಲಬೇಕು. ಈಗ ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿ ಮಾಡಲು ಹೊರಟಿದ್ದಾನೆ ಎಂದು ಲೇವಡಿ ಮಾಡಿದ ಅವರು, ದೇಶಕ್ಕೆ ಸದೃಢ ಸರ್ಕಾರ ರಚನೆ ಹಾಗೂ ಕೀರ್ತಿ ಹೆಚ್ಚಿಸಲು ಬಿಜೆಪಿಗೆ ಹೆಚ್ಚಿನ ಮತನೀಡಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪೆÇ್ರ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮಂಡಲಾಧ್ಯಕ್ಷ ಎನ್.ಮಲ್ಲೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ಪುರಸಭಾಧ್ಯಕ್ಷ ಪಿ.ಗಿರೀಶ್, ಸದಸ್ಯ ರಮೇಶ್, ಕುಮಾರ್, ಮಲ್ಲರಾಜು, ಹಿರಿಯ ಮುಖಂಡರಾದ ಸಿ.ಎಂ.ಶಿವ ಮಲ್ಲಪ್ಪ, ಕೋಟೆ ಶಿವಣ್ಣ, ನೂರೊಂದು ಶೆಟ್ಟಿ, ಅಪ್ಪಣ್ಣ, ಸಿ.ಹುಚ್ಚೇಗೌಡ, ಕೊಡ ಸೋಗೆ ಸಿದ್ದರಾಮಪ್ಪ, ಮಹದೇವ ಪ್ರಸಾದ್, ರಾಜಗೋಪಾಲ್, ಎಸ್.ಸಿ. ಮಂಜುನಾಥ್, ರಾಘವಾಪುರ ದೇವಯ್ಯ ಸೇರಿದಂತೆ ಬಿಜೆಪಿ ಜನಪ್ರತಿ ನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Translate »