ಇಟಲಿಯ ಅಂತಾರಾಷ್ಟ್ರೀಯ ವಿವಿ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಮೈಸೂರು ವಿವಿಯ ಧನುಷಾ ಆಯ್ಕೆ
ಮೈಸೂರು

ಇಟಲಿಯ ಅಂತಾರಾಷ್ಟ್ರೀಯ ವಿವಿ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಮೈಸೂರು ವಿವಿಯ ಧನುಷಾ ಆಯ್ಕೆ

June 27, 2019

ಮೈಸೂರು, ಜೂ.26(ಪಿಎಂ)- ಇಟಲಿಯಲ್ಲಿ ಜು.3ರಿಂದ 14ರವರೆಗೆ ನಡೆಯುವ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿ ಸಲು ಮೈಸೂರು ವಿವಿಯ ಎಂ.ಆರ್.ಧನುಷಾ ಆಯ್ಕೆಯಾಗಿದ್ದಾರೆ. ಈ ಕ್ರೀಡಾಕೂಟಕ್ಕೆ ಮೈಸೂರು ವಿವಿಯಿಂದ ಆಯ್ಕೆ ಯಾದ ಮೊದಲಿಗರು ಎಂಬ ಹಿರಿಮೆಗೂ ಎಂ. ಆರ್.ಧನುಷಾ ಭಾಜನ ರಾಗಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾನಿಲ ಯದ ಕ್ರೀಡಾಪಟುವಾದ ಎಂ.ಆರ್.ಧನುಷಾ ದ್ವಿತೀಯ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಮೈಸೂರು ಜಿಲ್ಲೆಯ ಕೆಆರ್ ನಗರದ ನಿವಾಸಿ ಆಟೋರಿಕ್ಷಾ ಚಾಲಕ ಮಂಜು ಹಾಗೂ ರುಕ್ಮಿಣಿ ದಂಪತಿ ಪುತ್ರಿ.

ಇಟಲಿಯ ನೆಫೋಲಿಯಲ್ಲಿ ಈ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯ ಗಳ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ಎಂ.ಆರ್.ಧನುಷಾ ಸೇರಿ ಕರ್ನಾಟಕದಿಂದ ನಾಲ್ವರು ಕ್ರೀಡಾಪಟುಗಳು ಆಯ್ಕೆಗೊಂಡಿದ್ದರೆ, ದೇಶದ ವಿವಿಧ ಭಾಗಗಳಿಂದ ಒಟ್ಟು 40 ಕ್ರೀಡಾಪಟು ಗಳು ಸದರಿ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಶುಭ ಕೋರಿಕೆ: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಎಂ.ಆರ್.ಧನುಷಾಗೆ ಶುಭ ಕೋರಲಾಯಿತು. ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್ ಸೇರಿದಂತೆ ತರಬೇತುದಾರರು, ಸಿಬ್ಬಂದಿ ವರ್ಗ, ಮೈಸೂರು ಕ್ರೀಡಾ ನಿಲಯದ ಎಲ್ಲಾ ಕ್ರೀಡಾಪಟುಗಳು ಹಾಗೂ ಮೈಸೂರು ಜಿಲ್ಲೆಯ ವಿವಿಧ ಕ್ರೀಡಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಶುಭ ಕೋರಿದರು.

Translate »