ಮೈಸೂರು, ಜ.20(ಆರ್‍ಕೆಬಿ)-ಕಾಲೇಜು ವಿದ್ಯಾರ್ಥಿನಿಯರು ಅರ್ಧಕ್ಕೆ ಕಾಲೇಜು ಬಿಟ್ಟು ಹೋಗುತ್ತಿರುವುದೇಕೆ? ಪ್ರೇಮ, ಪ್ರೀತಿ ಎಂದು ಹಲವರು ಕಾಲೇಜು ಬಿಟ್ಟ ಉದಾ ಹರಣಗಳಿವೆ. ಇದಕ್ಕೆ ಪರಿಹಾರವೇನು? ಅಪರಿಚಿತ ವ್ಯಕ್ತಿಗಳಿಂದ ನಾವು ಸುರಕ್ಷಿತ ವಾಗಿರಲು ಏನು ಮಾಡಬೇಕು? ಬ್ಯಾಂಕ್ ಇನ್ನಿತರ ಖಾತೆ ಲೂಟಿಯಾಗುವುದನ್ನು ತಪ್ಪಿಸುವುದು ಹೇಗೆ? ಅಪರಾಧ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿರುವ ಸಾಮಾಜಿಕ ಜಾಲತಾಣಗಳು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿವೆಯೇ?
ಮೈಸೂರಿನ ಮಹಾರಾಣಿ ಕಲಾ ಕಾಲೇ ಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರ, ಮನೋವಿಜ್ಞಾನ ವಿಭಾಗ, ಐಕ್ಯೂ ಎಸ್‍ಇ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ `ಪೋಷಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ವಿದ್ಯಾ ರ್ಥಿನಿಯರಿಂದ ಕೇಳಿ ಬಂದ ಪ್ರಶ್ನೆಗಳಿವು.
ಈ ಪ್ರಶ್ನೆಗಳಿಗೆ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಆಯುಕ್ತೆ ಬಿ.ಟಿ.ಕವಿತಾ, ಮೈಸೂರು ಕಾರಾಗೃಹ ಸಿಬ್ಬಂದಿ ತರಬೇತಿ ಕೇಂದ್ರದ ಪ್ರಾಂಶುಪಾಲ ಮಹೇಶ್ ಕುಮಾರ್ ಎಸ್.ಜಿಗಣಿ, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಬಿ. ಟಿ.ವಿಜಯ್, ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್. ಮನೋನ್ಮಣಿ ಉತ್ತರ ನೀಡಿದರು. ವಿದ್ಯಾ ರ್ಥಿನಿಯರನ್ನು ಸಮಸ್ಯೆಯಿಂದ ಹೊರ ತರುವ ಪ್ರಯತ್ನ ಮಾಡಿದರು.
ಈ ವೇಳೆ ಮಾತನಾಡಿದ ಮೈಸೂರು ಅಪರಾಧ ಮತ್ತು ಸಂಚಾರ ವಿಭಾಗದ ಉಪ ಆಯುಕ್ತೆ ಬಿ.ಟಿ.ಕವಿತಾ, ಮನುಷ್ಯರನ್ನು ಮೊಬೈಲ್ ಹಾಳು ಮಾಡುವಷ್ಟು, ಇನ್ಯಾ ವುದೂ ಹಾಳು ಮಾಡುವುದಿಲ್ಲ. ಮೊಬೈಲ್ ಅನಿವಾರ್ಯವಲ್ಲ. ಆದರೆ ಅದನ್ನು ನಿರ್ವ ಹಣೆ ಮಾಡುವುದು ನಿಮ್ಮ ಕೈಯ್ಯಲ್ಲೇ ಇದೆ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಓದುವ ಅಭ್ಯಾಸ ಬೆಳೆಸಿಕೊಳ್ಳಿ. ನಿಮ್ಮ ವ್ಯಕ್ತಿತ್ವ ನೀವು ಬೆಳೆಸಿಕೊಳ್ಳದಿದ್ದರೆ ಮುಂದೆ ತುಂಬಾ ಕಷ್ಟವಾಗುತ್ತದೆ. ಎಲ್ಲರಿಗೂ ಸಾಧನೆ ಮಾಡಲು ಅವಕಾಶವಿದೆ. ಆದರೆ, ಮುಂದಿನ ಯೋಜನೆ ಗಳ ಬಗ್ಗೆ ಇಂದೇ ಒಂದು ನಿರ್ಧಾರ ಕೈಗೊಳ್ಳ ಬೇಕು. ಮಹಿಳೆ ಪುರುಷರಷ್ಟೇ ಸಮಾನ ವಾಗಿ ಯಾವುದೇ ಕೆಲಸವನ್ನು ಮಾಡ ಬಲ್ಲಳು. ಮಾಡುವ ಕೆಲಸದಲ್ಲಿ ಶ್ರದ್ಧೆ ಇರ ಬೇಕಷ್ಟೆ ಎಂದು ಕಿವಿಮಾತು ಹೇಳಿದರು.
ಮೈಸೂರು ಕಾರಾಗೃಹ ಸಿಬ್ಬಂದಿ ತರ ಬೇತಿ ಕೇಂದ್ರದ ಪ್ರಾಂಶುಪಾಲ ಮಹೇಶ್ ಕುಮಾರ್ ಎಸ್.ಜಿಗಣಿ ಮಾತನಾಡಿ, ಹದಿ ಹರೆಯದ ವಿದ್ಯಾರ್ಥಿಗಳಿಗೆ ಸಾಮಾನ್ಯ ವಾಗಿ ಸಾಕಷ್ಟು ಸಮಸ್ಯೆಗಳಿರುತ್ತವೆ. ಆಸೆ, ಆಕಾಂಕ್ಷೆಗಳನ್ನು ಹೊಂದಿರುವ ವಯಸ್ಸಿದು. ಅವರನ್ನು ಮಾನಸಿಕವಾಗಿ ಸಿದ್ಧಗೊಳಿಸ ಬೇಕಾಗಿದ್ದು, ಪೋಷಕರ ಮಾರ್ಗದರ್ಶನ ಅಗತ್ಯ. ಅವರು ಅರ್ಧಕ್ಕೆ ಓದು ನಿಲ್ಲಿಸದಂತೆ ನೋಡಿಕೊಳ್ಳಬೇಕು. ಮಕ್ಕಳ ಮೊಬೈಲ್ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಮಾನಸಿಕ ವಾಗಿ ನಿಮ್ಮನ್ನು ನೀವು ಕಂಟ್ರೋಲ್ ಮಾಡಿಕೊಳ್ಳಬೇಕು. ಓದಿನ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.
ಕಾಲೇಜು ಪ್ರಾಂಶುಪಾಲ ಡಾ.ಬಿ.ಟಿ. ವಿಜಯ್ ಮಾತನಾಡಿ, ಟಿವಿ ಧಾರಾವಾಹಿ ನೋಡುತ್ತೀರಿ. ನ್ಯೂಸ್ ಬಂದರೆ ಟಿವಿ ಆಫ್ ಮಾಡುತ್ತೀರಿ. ದೇಶದ ಪ್ರಸ್ತುತ ವಿಚಾರಗಳ ಬಗ್ಗೆ ಸುದ್ದಿ ನೋಡುವುದಿಲ್ಲ. ಪತ್ರಿಕೆ ಓದು ವುದಿಲ್ಲ. ಕಾಲೇಜಿನ ವಾಚನಾಲಯ, ಗ್ರಂಥಾ ಲಯಗಳನ್ನು ಸದ್ಬಳಕೆ ಮಾಡಿಕೊಳ್ಳುವು ದಿಲ್ಲ. ತರಗತಿ ನಡುವಿನ ಬಿಡುವಿನ ವೇಳೆ ವಾಚನಾಲಯದಲ್ಲಿದ್ದು ಪತ್ರಿಕೆಗಳನ್ನು ತಿರುವಿ ಹಾಕಿದರೆ ಇಡೀ ಜಗತ್ತಿನ ಪ್ರಚಲಿತ ವಿದ್ಯ ಮಾನಗಳನ್ನು ಪಡೆಯಬಹುದು. ದೇಶ ದಲ್ಲಿ ಇಂದು ಸಿಎಎ ಇನ್ನಿತರ ವಿಚಾರಗಳ ಬಗ್ಗೆ ಬಹುದೊಡ್ಡ ಚರ್ಚೆ ಆಗುತ್ತಿದೆ. ಇವ್ಯಾ ವುದರ ಬಗ್ಗೆಯೂ ತಿಳಿದುಕೊಳ್ಳುವ ಪ್ರಯತ್ನ ಮಾಡದೆ ಬಿಡುವಿನ ವೇಳೆ ಕೇವಲ ಮೊಬೈಲ್ ಬಳಸಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದೀರಿ. ಇನ್ನಾದರೂ ಮೊಬೈಲ್ ಬಳಕೆಯನ್ನು ಸೀಮಿತಗೊಳಿಸಿ, ಓದಿನತ್ತ ಹೆಚ್ಚು ಗಮನಹರಿಸಿದರೆ ಭವಿ ಷ್ಯದ ದೃಷ್ಟಿಯಿಂದ ಒಳ್ಳೆಯದಾಗುತ್ತದೆ. ನಿಮ್ಮ ಬದುಕು ಹಸನಾಗುತ್ತದೆ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಸಿ ಕ್ಯೂಇ ಸಂಚಾಲಕ ಡಾ.ಪುಟ್ಟರಾಜು ಇನ್ನಿ ತರರು ಉಪಸ್ಥಿತರಿದ್ದರು.