ಪಪಂನಲ್ಲಿ ಅಕ್ರಮ ಖಾತೆ; ಲೋಕಕ್ಕೆ ದೂರು
ಚಾಮರಾಜನಗರ

ಪಪಂನಲ್ಲಿ ಅಕ್ರಮ ಖಾತೆ; ಲೋಕಕ್ಕೆ ದೂರು

May 27, 2018

ಯಳಂದೂರು: ಪಟ್ಟಣ ಪಂಚಾಯಿತಿ ಕಚೇರಿ ಯಲ್ಲಿ ಖಾಸಗಿ ಖಾಲಿ ನಿವೇಶನ ಸೇರಿ ದಂತೆ ಸರ್ಕಾರಿ ಸೈಟುಗಳನ್ನು ಪಟ್ಟಭದ್ರ ವ್ಯಕ್ತಿಗಳಿಗೆ ಅಕ್ರಮ ಖಾತೆ ಮಾಡುತ್ತಿರುವ ಬಗ್ಗೆ ಚಾಮರಾಜನಗರ ಲೋಕಾಯುಕ್ತ ಪ್ರಭಾರ ಡಿವೈಎಸ್‍ಪಿ ಬಿ.ಜಿ.ಕುಮಾರ್ ಅವರಿಗೆ ದೂರು ಬಂದ ಹಿನ್ನೆಲೆಯಲ್ಲಿ ತಪ್ಪಿಸ್ಥರ ವಿರುದ್ದ ಕಾನೂನು ಕ್ರಮ ಜರು ಗಿಸಲು ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಶನಿವಾರ ಸಾರ್ವ ಜನಿಕರ ದೂರು ಸ್ವೀಕಾರ ಕಾರ್ಯಕ್ರಮ ದಲ್ಲಿ ಪಟ್ಟಣದ ನಾಗರಿಕರು ಪಟ್ಟಣ ಪಂಚಾ ಯಿತಿ ಕಚೇರಿಯಲ್ಲಿ ಆಡಳಿತ ವೈಕಾರಿಗೆ ಬಗ್ಗೆ ಹಲವು ದೂರುಗಳನ್ನು ನೀಡಿದರು.

ಹಿರಿಯ ನಾಗರಿಕರಾದ ನಾಗಭೂಷಣಪ್ಪ ಎಂಬುವರು ಪಟ್ಟಣ ಪಂಚಾಯಿತಿಗೆ ಸಂಬಂಧಪಟ್ಟ ಸೂಕ್ತ ದಾಖಲಾತಿ ಇಲ್ಲದೆ ಹೋದರು ನಕಲಿ ದಾಖಲೆಗಳನ್ನು ಪಡೆದು ಖಾತೆ ಮಾಡಿಕೂಡಲಾಗುತ್ತದೆ. ಟಿಎಪಿಎಂಎಸ್ ಕಚೇರಿಯ ಪಕ್ಕದಲ್ಲಿ ರಸ್ತೆ ನಿರ್ಮಿಸಲು ಅನುದಾನ ಮಂಜೂರು ಮಾಡಿದರು ಕೂಡಾ ಪಟ್ಟಣ ಪಂಚಾಯಿತಿ ಮುಖ್ಯಾಧಿ ಕಾರಿಗಳು ಮತ್ತು ಎಂಜಿನಿಯರ್ ಸರಿಯಾಗಿ ಕ್ರಮ ವಹಿಸುತ್ತಿಲ್ಲ ಎಂದು ದೂರಿದರು.

ರಸ್ತೆ ಮಾಡಿ ಎಂದು ಹಲವು ಬಾರಿ ಪಟ್ಟಣ ಪಂಚಾಯಿತಿಗೆ ದೂರು ನೀಡಿ ದ್ದರು ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಮಾಡಿಸುವಂತೆ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಹಿರಿಯ ಅಧಿ ಕಾರಿಗಳಿಗೆ ದೂರು ನೀಡಲಾಗಿದೆ. ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿಗಳಿಂದ ಸುತ್ತೋಲೆ ಬಂದರೂ ಅವರು ಕ್ರಮ ವಹಿಸಲ್ಲ ಎಂದು ಸಮಸ್ಯೆಯನ್ನು ತೆರೆದಿಟ್ಟರು.

ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸೋಮನಾಯಕ ಅವರು, 5ನೇ ವಾರ್ಡ್ ನಲ್ಲಿರುವ ನಮ್ಮ ಮನೆ ಖಾತೆಯನ್ನು ಅಕ್ರಮ ವಾಗಿ ಬಿಳಿಗಿರಿರಂಗನಾಯಕ ಎಂಬು ವರಿಗೆ ಮುಖ್ಯಾಧಿಕಾರಿ ಉಮಾಶಂಕರ್ ಅವರು ಮಾಡಿಕೊಟ್ಟಿದ್ದಾರೆ. ಅಲ್ಲದೆ ಪೌರ ಕಾರ್ಮಿರಿಗೆ ಮೀಸಲಿಟ್ಟಿದ್ದ ಜಾಗದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೂಂಡಿದ್ದಾರೆ. ಈ ಬಗ್ಗೆ ದೂರು ನೀಡಿದ್ದರು ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮವಹಿಸಿಲ್ಲ ಎಂದರು.
ಅಕ್ರಮ ಖಾತೆ ರದ್ದುಪಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ದೂರಿನ್ವಯ ಜಿಲ್ಲಾಧಿಕಾರಿಗಳು ಅಕ್ರಮ ಖಾತೆ ರದ್ದುಪಡಿಸುವಂತೆ ಸುತ್ತೋಲೆ ಕಳಿಸಿದ್ದಾರೆ. ಆದರೆ, ಅದನ್ನು ಅಧಿಕಾರಿ ಗಳು ಪರಿಗಣ ಸದೆ ಹಣದ ಆಮೀಷÀಕ್ಕೆ ಬಲಿಯಾಗಿ ಖಾತೆ ಮಾಡಿ ನನಗೆ ಅನ್ಯಾಯ ಮಾಡಿದ್ದಾರೆ ಎಂದು ಅಹವಾಲು ಸಲ್ಲಿಸಿದರು.

ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಸರ್ವೇ ನಂ.194 ಸಾರ್ವಜನಿ ಕರ ಸಶ್ಮಾನ ಜಮೀನು ಪಟ್ಟಭದ್ರ ವ್ಯಕ್ತಿ ಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಕೆ.ಹೊಸೂರು ಗ್ರಾಮದ ನಿವಾಸಿ ಮಾರ ಶೆಟ್ಟಿ ದೂರು ನೀಡಿದರು.

ದೂರುಗಳನ್ನು ಸ್ವೀಕರಿಸಿದ ಬಳಿಕ ಮಾತ ನಾಡಿದ ಲೋಕಯುಕ್ತ ಪ್ರಭಾರ ಡಿವೈ ಎಸ್‍ಪಿ ಬಿ.ಜಿ.ಕುಮಾರ್ ಮಾತನಾಡಿ, ತಾಲೂಕಿನ ಅಕ್ರಮ ಖಾತೆಗಳು ಜಾಸ್ತಿ ಯಾಗಿ ದೂರು ಬರುತ್ತಿದ್ದು, ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಹಿರಿಯ ಅಧಿಕಾರಿ ಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಈ ವೇಳೆ ಟೌನ್ ಪಂಚಾ ಯಿತಿ ಇಓ, ಪೊಲೀಸರಾದ ಚೈತ್ರ, ಗೌತಮ್, ನಾಗೇಂದ್ರ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Translate »