ಮಾಸಾಂತ್ಯಕ್ಕೆ 7 ಸಾವಿರ ಪಡಿತರ ಚೀಟಿ ವಿಲೇವಾರಿ
ಮೈಸೂರು

ಮಾಸಾಂತ್ಯಕ್ಕೆ 7 ಸಾವಿರ ಪಡಿತರ ಚೀಟಿ ವಿಲೇವಾರಿ

December 13, 2018

ಮೈಸೂರು: ಮೈಸೂರು ಜಿಲ್ಲೆಯ ಬಿಪಿಎಲ್ ಪಡಿತರ ಚೀಟಿಗೆ ಸಂಬಂಧಿಸಿದಂತೆ ಈ ತಿಂಗಳಾಂತ್ಯಕ್ಕೆ 7 ಸಾವಿರದಷ್ಟು ಚೀಟಿಗಳನ್ನು ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಗಳ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ತಿಳಿಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿಗೆ ಸಂಬಂಧಿಸಿದಂತೆ ಸುಮಾರು 15 ಸಾವಿರ ಅರ್ಜಿಗಳು ಬಿಪಿಎಲ್ ಪಡಿತರ ಚೀಟಿಗಾಗಿ ಇಲಾಖೆಗೆ ಸಲ್ಲಿಕೆಯಾಗಿದ್ದವು ಎಂದರು.

ಈ ಪೈಕಿ 605 ಅರ್ಜಿಗಳನ್ನು ಅರ್ಜಿದಾರರೇ ಹಿಂಪಡೆದುಕೊಂಡಿದ್ದಾರೆ. ಜೊತೆಗೆ ಇದರಲ್ಲಿ 760 ಪರಿಶೀಲನೆ ವೇಳೆ ತಿರಸ್ಕøತಗೊಂಡಿವೆ. 7,456 ಚೀಟಿಗಳನ್ನು ವಿತರಣೆ ಮಾಡ ಲಾಗಿದ್ದು, ಉಳಿದ 7 ಸಾವಿರದಷ್ಟು ಚೀಟಿಗಳನ್ನು ಈ ತಿಂಗಳಾಂತ್ಯಕ್ಕೆ ವಿಲೇವಾರಿ ಮಾಡಲಾಗು ವುದು ಎಂದು ವಿವರಿಸಿದರು.

ಮೈಸೂರು ಜಿಲ್ಲೆಯಲ್ಲಿ 7,03,464 ಕುಟುಂಬ ಗಳು ಬಿಪಿಎಲ್ ಚೀಟಿ ಹೊಂದಿದ್ದು, 19,860 ಕುಟುಂಬಗಳು ಎಪಿಎಲ್ ಚೀಟಿ ಹೊಂದಿವೆ. ಒಟ್ಟಾರೆ 7,23,324 ಕುಟುಂಬಗಳ ಪಡಿತರ ಚೀಟಿ ಇವೆ ಎಂದರು.
ಅಕ್ಕಿ ಕಳವು ಪ್ರಕರಣ: ನಂಜನಗೂಡು ಆಹಾರ ಇಲಾಖೆ ಗೋದಾಮಿನಿಂದ ಸಾವಿರ ಕ್ವಿಂಟಾಲ್ ಅಕ್ಕಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಓರ್ವ ನ್ಯಾಯಾಂಗ ಬಂಧನದಲ್ಲಿದ್ದು, ತನಿಖೆ ಮುಂದುವರೆದಿದೆ ಎಂದು ಪಿ.ಶಿವಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Translate »