ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ
ಹಾಸನ

ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ

August 30, 2018

ಹಾಸನ: ರಾಜ್ಯ ಚುನಾವಣಾ ಆಯೋಗವು ನಿಗದಿಪಡಿಸಿರುವಂತೆ ಆ.31ರಂದು ಜಿಲ್ಲೆಯ ಸಂಸ್ಥೆ ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 135 ವಾರ್ಡ್‍ಗಳಲ್ಲಿ ಆ.31ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಅಂತಿಮವಾಗಿ 486 ಅಭ್ಯರ್ಥಿಗಳು ಕಣದಲ್ಲಿದ್ದು, 274 ಮತಗಟ್ಟೆ ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗೂ ಮತದಾನಾ ಧಿಕಾರಿಗಳನ್ನು ನೇಮಿಸಿ, ತರಬೇತಿ ನೀಡಲಾಗಿದೆ. ಮತಗಟ್ಟೆಗಳಿಗೆ ಅವಶ್ಯಕವಿರುವಷ್ಟು ವಿದ್ಯುನ್ಮಾನ ಮತಯಂತ್ರಗಳನ್ನು ಆಯಾ ತಾಲೂಕುಗಳ ಚುನಾವಣಾ ಧಿಕಾರಿ ಮತ್ತು ತಹಶೀಲ್ದಾರ್ ನೇತೃತ್ವದಲ್ಲಿ ಸಿದ್ಧಪಡಿಸಿ ಭದ್ರತಾ ಕೊಠಡಿಯಲ್ಲಿರಿಸಲಾಗಿದೆ.

ಹಾಸನದಲ್ಲಿ ಹೆಚ್ಚು ಮತಗಟ್ಟೆ ಸ್ಥಾಪನೆ: ಹಾಸನ ನಗರ ಸಭೆಯಲ್ಲಿ ವ್ಯಾಪ್ತಿಯಲ್ಲಿ 135 ವಾರ್ಡ್‍ಗಳಲ್ಲಿ, 274 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅತ್ಯಂತ ಹೆಚ್ಚು ಮತಗಟ್ಟೆಗಳನ್ನು ಹೊಂದಿರುವ ಸ್ಥಳೀಯ ಸಂಸ್ಥೆಯಾಗಿದೆ. ಸಕಲೇಶಪುರ ಪುರಸಭೆಯ 23 ವಾರ್ಡ್‍ಗಳಲ್ಲಿ 23 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅತ್ಯಂತ ಕಡಿಮೆ ಮತಗಟ್ಟೆ ಹೊಂದಿರುವÀ ಸ್ಥಳೀಯ ಸಂಸ್ಥೆಯಾಗಿದೆ. ಅರಸೀಕೆರೆ ನಗರಸಭೆಯು 31 ವಾರ್ಡ್ ಹೊಂದಿದ್ದು, 50 ಮತಗಟ್ಟೆಗಳನ್ನು ತೆರೆಯ ಲಾಗಿದೆ. ಚನ್ನರಾಯಪಟ್ಟಣ ಪುರಸಭೆ 23 ವಾರ್ಡ್ ಹೊಂದಿದ್ದು, 33 ಮತಗಟ್ಟೆ ತೆರೆಯಲಾಗಿದೆ. ಹೊಳೆನರಸೀಪುರ ಪುರಸಭೆಯ 23 ವಾರ್ಡ್‍ಗಳಲ್ಲಿ 33 ಮತಗಟ್ಟೆಗಳನ್ನು ತೆರೆಯಲಾಗಿದೆ.

ಜಿಲ್ಲೆಯ ಮತದಾರರ ವಿವರ: ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳಲ್ಲಿ 10,7358 ಪುರುಷ, 10,8447 ಮಹಿಳಾ ಹಾಗೂ ಇತರೆ 7 ಸೇರಿದಂತೆ ಒಟ್ಟು 21,5812 ಮತದಾರ ರಿದ್ದು, ಹಾಸನ ನಗರಸಭೆ ವ್ಯಾಪ್ತಿಯಲ್ಲಿ 53,164 ಪುರುಷ, 54,106 ಮಹಿಳಾ, ಇತರೆ 5 ಸೇರಿದಂತೆ ಒಟ್ಟು 1,07,275 ಮತದಾರರು, ಅರಸೀಕೆರೆ ನಗರಸಭೆಯಲ್ಲಿ 18,735 ಪುರುಷ, 18725 ಮಹಿಳಾ ಮತ್ತು ಇತರೆ 2 ಸೇರಿದಂತೆ ಒಟ್ಟು 37,462 ಮತದಾರರು, ಚನ್ನರಾಯ ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ 14, 720 ಪುರುಷರು, 14,626 ಮಹಿಳಾ ಮತದಾರರು ಸೇರಿದಂತೆ ಒಟ್ಟು 29,346 ಮತದಾರರಿದ್ದಾರೆ. ಹೊಳೆನರಸೀಪುರ ಪುರಸಭೆಯಲ್ಲಿ 12,388 ಪುರುಷ, 12,585 ಮಹಿಳಾ ಮತದಾರರು ಸೇರಿದಂತೆ 24,973 ಮತದಾರರು, ಸಕಲೇಶಪುರ ಪುರಸಭೆಯಲ್ಲಿ 8,351 ಪುರುಷ, 8,405 ಮಹಿಳಾ ಮತದಾರರಿದ್ದು, ಒಟ್ಟು 16,756 ಮತ ದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಬಹಿರಂಗ ಪ್ರಚಾರ ಅಂತ್ಯ: ಮತದಾನ ಆರಂಭ ವಾಗುವ 48 ಗಂಟೆಗಳ ಮೊದಲೇ (ಆ.29ರ ಬೆಳಿಗ್ಗೆ 7 ಗಂಟೆ) ಬಹಿರಂಗ ಪ್ರಚಾರ ಸ್ಥಗಿತವಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವ್ಯಾಪ್ತಿಯಲ್ಲಿರುವ ಯಾವುದೇ ಪ್ರವಾಸಿ ಮಂದಿರ, ಕಲ್ಯಾಣ ಮಂಟಪ ಗಳಲ್ಲಿ ಆಯಾ ವಾರ್ಡ್‍ಗಳಿಗೆ ಸಂಬಂಧಪಟ್ಟ ಅಭ್ಯರ್ಥಿ, ಮತದಾರರನ್ನು ಹೊರತುಪಡಿಸಿ ಬೇರೆ ಯಾವುದೇ ಮತದಾರರಲ್ಲದ, ತಾರಾ ಪ್ರಚಾರಕರು ಅಥವಾ ರಾಜ ಕೀಯ ನಾಯಕರ ಭಾಗವಹಿಸುವಿಕೆ ನಿಷೇಧಿಸಲಾಗಿದೆ.

ಅಣಕು ಮತದಾನ: ಮತದಾನ ಆರಂಭವಾಗುವುದಕ್ಕೆ ಮೊದಲು ಅಣಕು ಮತದಾನ ನಡೆಸಲಾಗುವುದು. ಮತಯಂತ್ರಗಳಿಗೆ ಪೂಜೆ-ಪುನಸ್ಕಾರ ಮಾಡುವಂತಿಲ್ಲ. ಮತದಾನಕ್ಕಾಗಿ ಮತದಾರರನ್ನು ವಾಹನಗಳಲ್ಲಿ ಕರೆತರುವಂತಿಲ್ಲ ಹಾಗೂ ಮತಗಟ್ಟೆಯಿಂದ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಪಕ್ಷದ/ಅಭ್ಯರ್ಥಿಯ ಬೂತ್ ಸ್ಥಾಪಿಸುವಂತಿಲ್ಲ.
ಮತಗಟ್ಟೆ ಅಧಿಕಾರಿಗಳ ಮಾಹಿತಿ: ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 274 ಮತಗಟ್ಟೆಗಳಿದ್ದು, 274 ಮತಗಟ್ಟೆ ಅಧಿಕಾರಿಗಳ ತಂಡ ರಚಿಸಲಾಗಿದೆ. ಮತಗಟ್ಟೆ ಅಧ್ಯಕ್ಷಾಧಿಕಾರಿಗಳು- 274, ಸಹಾಯಕ ಮತಗಟ್ಟೆ ಅಧಿಕಾರಿಗಳು (ಎಪಿಆರ್‍ಓ)-274, 1 ಮತ್ತು 2ನೇ ಮತಗಟ್ಟೆ ಅಧಿಕಾರಿಗಳು-548, ಒಟ್ಟು 1,096 ಮತಗಟ್ಟೆ ಅಧಿಕಾರಿಗಳನ್ನು ಜಿಲ್ಲೆಯ ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ.

ಮತದಾನಕ್ಕೆ ಅವಶ್ಯ ದಾಖಲೆ: ಮತ ಚಲಾಯಿಸಲು ಬರುವ ಮತದಾರ ಮತದಾನಾಧಿಕಾರಿಗಳಿಗೆ ಕಡ್ಡಾಯ ವಾಗಿ ರಾಜ್ಯ ಚುನಾವಣಾ ಆಯೋಗವು ನೀಡಿರುವ ಗುರುತಿನ ಚೀಟಿ ತೋರಿಸತಕ್ಕದ್ದು, ಅದು ಲಭ್ಯವಿಲ್ಲದಿ ದ್ದಲ್ಲಿ ಭಾವಚಿತ್ರವಿರುವ 22 ಪರ್ಯಾಯ ದಾಖಲೆ ಗಳಲ್ಲಿ ಒಂದನ್ನು ತೋರಿಸಿ ಮತದಾನ ಮಾಡಬ ಹುದು. ಪಾಸ್‍ಪೆÇೀರ್ಟ್, ಡ್ರೈವಿಂಗ್ ಲೈಸನ್ಸ್, ಆದಾಯ ತೆರಿಗೆ ಗುರುತಿನ ಚೀಟಿ , ರಾಜ್ಯ/ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆ ಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿಗಳು, ಸಾರ್ವಜ ನಿಕ ವಲಯದ ಬ್ಯಾಂಕ್/ ಕಿಸಾನ್ ಮತ್ತು ಅಂಚೆ ಕಚೇರಿ ಪಾಸ್ ಪುಸ್ತಕ, ಮಾನ್ಯತೆ ಪಡೆದ ನೋಂದಾ ಯಿತ ವಿದ್ಯಾಸಂಸ್ಥೆಗಳ ಗುರುತಿನ ಚೀಟಿಗಳು, ನೋಂದಾ ಯಿತ ಡೀಡ್‍ಗಳು/ ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು, ಪಡಿತರ ಚೀಟಿ, ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಬಳಸಿ ಮತ ಚಲಾಯಿಸಬಹುದಾಗಿದೆ.

Translate »