ಜಿಲ್ಲಾ ಉಸ್ತುವಾರಿ ಸಚಿವರ ಮೈಸೂರು ಪ್ರವಾಸ ಕಾರ್ಯಕ್ರಮ
ಮೈಸೂರು

ಜಿಲ್ಲಾ ಉಸ್ತುವಾರಿ ಸಚಿವರ ಮೈಸೂರು ಪ್ರವಾಸ ಕಾರ್ಯಕ್ರಮ

January 21, 2020

ಮೈಸೂರು, ಜ.20- ವಸತಿ, ತೋಟಗಾರಿಕೆ, ರೇಷ್ಮೆ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಜ.25 ಮತ್ತು 26 ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಜ.25ರಂದು ರಾತ್ರಿ 8 ಗಂಟೆಗೆ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವರು. ಜ.26ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಡಳಿತ ವತಿಯಿಂದ ಆಯೋಜಿಸಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಬೆಳಿಗ್ಗೆ 11.30 ಗಂಟೆಗೆ ಸುತ್ತೂರು ಶ್ರೀಕ್ಷೇತ್ರದಲ್ಲಿ ಆಯೋಜಿ ಸಿರುವ ಸುತ್ತೂರು ಜಾತ್ರಾ ಮಹೋತ್ಸವದ ಕೃಷಿ ಮೇಳ ಮತ್ತು ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 4 ಗಂಟೆಗೆ ಮೈಸೂರಿನ ಜಲದರ್ಶಿನಿ ಅತಿಥಿ ಗೃಹಕ್ಕೆ ಆಗಮಿಸುವರು ಎಂದು ಸಚಿವರ ವಿಶೇಷ ಕರ್ತ ವ್ಯಾಧಿಕಾರಿ ಟಿ.ಎನ್.ರವಿಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಸತಿ ಯೋಜನೆ ಸಹಾಯಧನ ಹೆಚ್ಚಳಕ್ಕೆ ಕೇಂದ್ರಕ್ಕೆ ಮನವಿ: ಸೋಮಣ್ಣ
ಬೆಂಗಳೂರು, ಜ.20(ಕೆಎಂಶಿ)- ವಸತಿ ಯೋಜನೆಗಳ ಸಹಾಯಧನ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ನಗರ ವಸತಿ ಯೋಜನೆಗಳ ಬಗ್ಗೆ ನಗರದ ಶಾಸಕರು ಮತ್ತು ಸಂಸದರೊಂದಿಗೆ ನಡೆಸಿದ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಮುಂದಿನ ಬಜೆಟ್‍ಗೂ ಮುನ್ನ ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ವಸತಿ ಸಚಿವರನ್ನು ಭೇಟಿ ಮಾಡಿ ಸಹಾಯಧನ ಹೆಚ್ಚಿಸುವಂತೆ ಕೋರಲಾಗುವುದು ಎಂದರು.

ಮುಖ್ಯಮಂತ್ರಿಗಳ ವಸತಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ವಾರ್ಷಿಕ 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳು ಈ ಯೋಜನೆಯಡಿ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ಯಾವ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ವಸತಿ ಯೋಜನೆ ಅನುಷ್ಠಾನವಾಗುತ್ತದೆಯೋ ಆ ಕ್ಷೇತ್ರದವರಿಗೆ ಶೇ.50ರಷ್ಟು ಮನೆಗಳನ್ನು ಮೀಸಲಿರಿಸಲಾಗುತ್ತಿದೆ. ಇನ್ನು ಶೇ.50ರಷ್ಟು ಮನೆಗಳನ್ನು ಬೆಂಗಳೂರಿನ ನಿವಾಸಿಗಳು ಪಡೆಯಬಹುದಾಗಿದೆ ಎಂದು ಹೇಳಿದರು.

ಮುಂದಿನ 3 ವರ್ಷಗಳಲ್ಲಿ ಬೆಂಗಳೂರನ್ನು ಕೊಳಗೇರಿ ಮುಕ್ತ ನಗರವ ನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಅದಕ್ಕೆ ಪೂರಕವಾಗಿ ಈಗಾಗಲೇ ಯೋಜನೆ ಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಮುಖ್ಯಮಂತ್ರಿಗಳ ವಸತಿ ಯೋಜನೆಯಡಿ ಪ್ರತಿ ಮನೆಯನ್ನು ಎರಡೂವರೆ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಯಾವ ರೀತಿ ಮನೆಗಳನ್ನು ನಿರ್ಮಿಸಬೇಕು, ಫಲಾನುಭವಿಗಳಿಗೆ ಎಷ್ಟು ಸಹಾಯಧನ ನೀಡಬೇಕು ಮತ್ತು ಎಲ್ಲಿ ಮನೆಗಳನ್ನು ನಿರ್ಮಿಸಿದರೆ ಅನು ಕೂಲವಾಗಲಿದೆ ಎಂಬ ಬಗ್ಗೆ ಜನಪ್ರತಿನಿಧಿಗಳ ಸಲಹೆ ಪಡೆಯಲಾಗಿದೆ ಎಂದರು.

Translate »