ದೆಹಲಿಯಲ್ಲೇ ಕಾಲ ಕಳೆಯುತ್ತಿರುವ ಡಿಕೆಶಿ
ಮೈಸೂರು

ದೆಹಲಿಯಲ್ಲೇ ಕಾಲ ಕಳೆಯುತ್ತಿರುವ ಡಿಕೆಶಿ

October 25, 2019

ನವದೆಹಲಿ, ಅ.24-ತಿಹಾರ್ ಜೈಲಿನಿಂದ ಬುಧವಾರ ಸಂಜೆ ಬಿಡು ಗಡೆಯಾದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಅವ ರನ್ನು ಭೇಟಿ ಮಾಡಿದರು.

ಜನ್‍ಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೆ ತಮ್ಮ ಸಹೋದರ, ಸಂಸದ ಡಿ.ಕೆ.ಸುರೇಶ್, ಶಾಸಕರಾದ ರವಿ, ಡಾ. ರಂಗನಾಥ್ ಅವರ ಜೊತೆ ತೆರಳಿದ ಶಿವಕುಮಾರ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಅರ್ಪಿಸಿದರು.

ನಂತರ ಎಐಸಿಸಿ ಕಚೇರಿಗೆ ತೆರಳಿದ ಅವರು, ಕರ್ನಾಟಕ ಕಾಂಗ್ರೆಸ್ ಉಸ್ತು ವಾರಿ ಕೆ.ಸಿ.ವೇಣುಗೋಪಾಲ್ ಅವ ರನ್ನು ಭೇಟಿ ಮಾಡಿ, ಕೆಲ ಸಮಯ ಚರ್ಚೆ ನಡೆಸಿದರು. ಈ ಭೇಟಿಗಳ ನಂತರ ಶಿವಕುಮಾರ್ ಅವರು ಕಾನೂನು ತಜ್ಞರನ್ನು ಭೇಟಿ ಮಾಡಿ ಮುಂದಿನ ಕಾನೂನು ಹೋರಾಟದ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು.

Translate »