ನವ ಜಾತ ಶಿಶು ಸಾವಿಗೆ ವೈದ್ಯರ ನಿರ್ಲಕ್ಷ್ಯ: ಚೆಲುವಾಂಬ ಆಸ್ಪತ್ರೆಯಲ್ಲಿ ಸಂಬಂಧಿಕರ ಪ್ರತಿಭಟನೆ
ಮೈಸೂರು

ನವ ಜಾತ ಶಿಶು ಸಾವಿಗೆ ವೈದ್ಯರ ನಿರ್ಲಕ್ಷ್ಯ: ಚೆಲುವಾಂಬ ಆಸ್ಪತ್ರೆಯಲ್ಲಿ ಸಂಬಂಧಿಕರ ಪ್ರತಿಭಟನೆ

May 10, 2019

ಮೈಸೂರು: ನವ ಜಾತ ಶಿಶು ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಪೋಷಕರು ಹಾಗೂ ಸಂಬಂಧಿಕರು ಇಂದು ಬೆಳಿಗ್ಗೆ ಮೈಸೂ ರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಎನ್.ಆರ್.ಮೊಹಲ್ಲಾದ ಗಣೇಶನಗರ ನಿವಾಸಿ ಹರೀಶ ಅವರ ಪತ್ನಿ ಶ್ರೀಮತಿ ಲಕ್ಷ್ಮಿ ಬುಧವಾರ ಬೆಳಿಗ್ಗೆ ಹೆರಿಗೆ ನೋವಿನಿಂದ ಚೆಲುವಾಂಬ ಆಸ್ಪತ್ರೆಗೆ ದಾಖ ಲಾಗಿದ್ದರು. ಸಂಜೆವರೆಗೂ ತಪಾಸಣೆ ನಡೆ ಸಿದ ವೈದ್ಯರು, ಆಕೆ ಆರೋಗ್ಯವಾಗಿದ್ದಾ ರೆಂದು ತಿಳಿಸಿದ್ದರು ಎಂದು ಪೋಷಕರು ಹೇಳಿದರು. ಇಂದು ಮುಂಜಾನೆ ಹೆರಿಗೆ ಆದಾ ಗಲೂ ತಾಯಿ ಹಾಗೂ 4 ಕೆ.ಜಿ. ತೂಗುವ ಗಂಡು ಮಗು ಚೆನ್ನಾಗಿದ್ದಾರೆ ಎಂದು ಹೇಳಿ, ಮತ್ತೆ 9 ಗಂಟೆ ವೇಳೆಗೆ ಮಗು ಸಾವನ್ನ ಪ್ಪಿದೆ ಎಂಬ ಮಾಹಿತಿ ನೀಡಿದರು. ಇದ ರಿಂದ ನಮಗೆ ವೈದ್ಯರು, ಸಿಬ್ಬಂದಿ ಮೇಲೆ ಅನುಮಾನವಿದೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು. ವೈದ್ಯರ ನಿರ್ಲಕ್ಷ್ಯ ದಿಂದ ಮಗು ಸಾವನ್ನಪ್ಪಿದೆ. ಯಾರೂ ಒಳಗೆ ಹೋಗಲು ಬಿಡುತ್ತಿಲ್ಲ ಹಾಗೂ ಸರಿಯಾದ ಮಾಹಿತಿ ನೀಡು ತ್ತಿಲ್ಲವೆಂದು ಆರೋಪಿಸಿದ ಅವರು, ಗರ್ಭಿಣಿ ಮತ್ತು ಬಾಣಂತಿಯರಿಗೆ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು. ವೈದ್ಯರ ವಿರುದ್ಧ ಘೋಷಣೆ ಕೂಗಿದ ಅವರು, ಮಗು ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದಾಗ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾ ಯಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ವಿಷಯ ತಿಳಿದ ದೇವರಾಜ ಠಾಣೆ ಪೊಲೀ ಸರು ಆಗಮಿಸಿ ಪರಿಸ್ಥಿತಿ ತಹಬದಿಗೆ ತಂದರು.

ನಂತರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ರಾಧಾಮಣಿ ಅವರು ಪ್ರತಿಭಟನಾಕಾರ ರಿಗೆ ವಾಸ್ತವ ಸಂಗತಿಯನ್ನು ವಿವರಿಸಿದ ಹಿನ್ನೆಲೆಯಲ್ಲಿ ಪೋಷಕರು ಮಗುವಿನ ದೇಹವನ್ನು ಕೊಂಡೊಯ್ದರು.

Translate »