ಡಾ.ಅಂಬೇಡ್ಕರ್ ಚಿಂತನೆ ಫಲವಾಗಿ ಶೋಷಿತ ಸಮುದಾಯ ಸ್ವಾಭಿಮಾನ ರೂಢಿಸಿಕೊಂಡಿದೆ
ಮೈಸೂರು

ಡಾ.ಅಂಬೇಡ್ಕರ್ ಚಿಂತನೆ ಫಲವಾಗಿ ಶೋಷಿತ ಸಮುದಾಯ ಸ್ವಾಭಿಮಾನ ರೂಢಿಸಿಕೊಂಡಿದೆ

April 30, 2019

ಮೈಸೂರು: ಡಾ.ಬಿ.ಆರ್. ಅಂಬೇಡ್ಕರ್ ಚಿಂತನೆ ಫಲವಾಗಿ ಜಡತ್ವ ಗೊಂಡಿದ್ದ ಶೋಷಿತ ಸಮುದಾಯ ಸ್ವಾಭಿ ಮಾನ ರೂಢಿಸಿಕೊಂಡಿದೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯ ಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ಲಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿ ಯಿಂದ ಕೆಎಸ್‍ಒಯು ಕಾವೇರಿ ಸಭಾಂ ಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ 128ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು.

ಬದುಕಿನ ಜಡತ್ವ, ಲೋಪ, ಹಿಂಜರಿಕೆ ಯನ್ನು ಮೀರಲು ಅಂಬೇಡ್ಕರ ಜೀವನ ಮತ್ತು ಸಂದೇಶ ದಾರಿ ದೀಪವಾಗಿದೆ. ಹಿಂದೆ ಶೋಷಿತ ಸಮುದಾಯದವರು ಸ್ವತಃ ನಿರಭಿ ಮಾನವನ್ನು ಒಪ್ಪಿಕೊಂಡಿದ್ದರು. ಕೆಲವರು ಸೃಷ್ಟಿಸಿದ ಅಸಮಾನತೆಯನ್ನು ಒಪ್ಪಿದ್ದರು, ಆ ಪ್ರಜ್ಞೆ ಈಗಲೂ ಇದೆ. ಅಂಥ ಜನರಲ್ಲಿ ಆಗಿನ ಕಾಲದಲ್ಲಿ ಆತ್ಮಾಭಿಮಾನ ಮೂಡಿ ಸುವುದು ಅಂಬೇಡ್ಕರರಿಗೆ ದೊಡ್ಡ ಸವಾ ಲಾಗಿತ್ತು ಎಂದರು. ನಮ್ಮ ಬದುಕನ್ನು ಹಸಿ ರಿನ ಬಯಲಾಗಿ ಮಾಡಿಕೊಳ್ಳಲು ಮಹನೀ ಯರ ಜಯಂತಿ ಮಾಡಬೇಕೆಂಬ ಕವಿವಾಣಿ ಇದೆ. ಗಣ್ಯರ ಜಯಂತಿಗಳು ಮಾತಿಗೆ ಸೀಮಿತ ವಾಗದೇ, ಬದುಕಿನಲ್ಲಿ ಅವರ ಸಂದೇಶದ ಆಚರಣೆಯಾಗಬೇಕು ಎಂದರು.

ಪ್ರಬುದ್ಧ ಭಾರತ ವಿನ್ಯಾಸಕ್ಕೆ ಬಾಬಾ ಸಾಹೇಬರು ತಮ್ಮ ಜೀವನವನ್ನೇ ಮುಡಿ ಪಾಗಿಟ್ಟರು. ತಮ್ಮ ಕನಸು ನನಸಾಗಲು ಭೂಮಿಕೆ ಸಿದ್ಧಪಡಿಸಲು ಹಗಲಿರುಳು ಶ್ರಮಿಸಿ ದರು. ಅವರ ಬದುಕು ಮಹಾನ್ ಸಾಹ ಸದ ಅಭೂತಪೂರ್ವ ಸಿದ್ಧಿಯ ಮಹಾನ್ ಯಶೋಗಾಥೆ ಎಂದು ನುಡಿದರು.

ಬೇರೆಯವರ ದೃಷ್ಟಿಯಲ್ಲಿ ಅಂಬೇಡ್ಕರ ರನ್ನು ನಾವು ಕಾಣಬೇಕಿದೆ. ಅವರ ಬಗ್ಗೆ ನಾವೇ ತುತ್ತೂರಿ ಊದಿಕೊಳ್ಳುತ್ತಾ ಬೇರೆ ಯವ ರಿಗೆ ಅವಕಾಶ ನೀಡುತ್ತಿಲ್ಲ. ಹೊಸ ಮುಖ, ಬೇರೆ ಹಿನ್ನೆಲೆಯಿಂದ ಬಂದವರಿಗೆ ಅವ ಕಾಶ ನೀಡಬೇಕು. ಬಾಬಾ ಸಾಹೇಬರ ಬಗ್ಗೆ ನಮ್ಮಲ್ಲಿ ಅಪಕಲ್ಪನೆ ಇದೆ. ದಲಿತ ಜನಾಂ ಗದ ಉದ್ಧಾರಕ, ನಾಯಕ ಮತ್ತು ಅವರಿ ಗಾಗಿ ಶ್ರಮಿಸಿದರು ಎಂದು ತಪ್ಪಾಗಿ ಬಿಂಬಿಸ ಲಾಗುತ್ತಿದೆ. ಮಹಿಳಾ ಸಮಾನತೆಗೆ ಅವರ ರಾಜೀನಾಮೆ, ವಿಶ್ವಜ್ಞಾನ ದಿನವಾಗಿ ಅವರ ಜನ್ಮದಿನ ಆಚರಣೆ ಇದೆಲ್ಲವನ್ನು ಗಮನಿ ಸಿದರೆ ಅವರು ವಿಶ್ವಮಟ್ಟದ ನಾಯಕ ಎಂದು ಅರಿವಾಗುತ್ತದೆ. ಅವರು ಎಲ್ಲಾ ಧರ್ಮದ ಅಲ್ಪಸಂಖ್ಯಾತರು, ಕಾರ್ಮಿಕರು, ರೈತರು, ಮಹಿಳೆಯರು, ಶೋಷಿತರಿಗಾಗಿ ಶ್ರಮಿಸಿದ ನಾಯಕ ಎಂದರು. ವೇದಿಕೆಯಲ್ಲಿ ಕೆಎಸ್ ಒಯು ಕುಲಸಚಿವ ಪ್ರೊ.ಬಿ.ರಮೇಶ್, ಎಂ.ಎಸ್.ರಮಾನಂದ, ಡಾ.ಬಿ.ಆರ್.ಅಂಬೇ ಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜಕ ಶಿವಕುಮಾರಸ್ವಾಮಿ, ಪ್ರೊ.ಜಗದೀಶ್, ಪ್ರೊ.ಬಸವರಾಜು ಇದ್ದರು.

Translate »