ನಾಳೆ `ರಾಜ ಸಂಭ್ರಮ’ ಡಾ.ರಾಜ್ ರಸಮಂಜರಿ
ಮೈಸೂರು

ನಾಳೆ `ರಾಜ ಸಂಭ್ರಮ’ ಡಾ.ರಾಜ್ ರಸಮಂಜರಿ

June 7, 2019

ಮೈಸೂರು: ಡಾ.ರಾಜ್‍ಕುಮಾರ್ ಅವರ 90ನೇ ಹುಟ್ಟುಹಬ್ಬದ ಅಂಗವಾಗಿ ಡಾ.ರಾಜ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ಜೂ.8ರಂದು ಸಂಜೆ 5.30 ಗಂಟೆಗೆ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ `ರಾಜ ಸಂಭ್ರಮ- ಕನ್ನಡದ ಹಬ್ಬ’ ಡಾ.ರಾಜ್ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಚಾರಕ ಮೈಕ್ ಚಂದ್ರು ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇ ಶಕ ಹನೂರು ಚನ್ನಪ್ಪ ಉದ್ಘಾಟಿಸುವರು. ನಟ ಶ್ರೀನಾಥ್, ನಿರ್ಮಾಪಕರಾದ ಎಸ್.ಎ.ಗೋವಿಂದರಾಜ್, ಲಕ್ಷ್ಮಿ ಗೋವಿಂದರಾಜ್, ಎಸ್.ಎ.ಶ್ರೀನಿವಾಸ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು. ರಸಮಂಜರಿ ಕಾರ್ಯ ಕ್ರಮಕ್ಕೆ ಉಚಿತ ಪ್ರವೇಶವಿದೆ. ಡಾ.ರಾಜ್ ನಟಿಸಿದ ಚಿತ್ರಗಳ ಗೀತೆಗಳನ್ನು ಗಾಯಕರಾದ ಜಯರಾಂ, ಡಾ.ಎಂ.ಎಸ್.ನಟಶೇಖರ್, ಬಾಲರಾಜ್, ವೀಣಾ ಪಂಡಿತ್, ಸರ್ವ ಮಂಗಳಾ, ರಮ್ಯಶ್ರೀ, ನಿಸರ್ಗ ಪ್ರಕೃತಿ, ಡಾ.ರಾಜ್ ಸ್ಪರ್ಧೆಯ ವಿಜೇತರಾದ ರವಿ ಕುಮಾರ್, ಚರಣ್, ಲಕ್ಕಯ್ಯ, ರಾಮಪ್ರಸಾದ್ ಇನ್ನಿತರರು ಹಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ.ರಾಜ್ ಹೆಸರಿನಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿರುವ ಆರು ಮಂದಿ ಅಭಿಮಾನಿಗಳಿಗೆ ಸನ್ಮಾನಿಸಲಾಗುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಗಾಯಕ ಜಯರಾಂ, ಅಭಿಮಾನಿ ಮಲ್ಲೇಶ್ ಉಪಸ್ಥಿತರಿದ್ದರು.

Translate »